ಗಂಗಾವತಿ: ತಾಲೂಕಿನ ದಾಸನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶ್ರೀ ದೇವೇಂದ್ರ ಕುಮಾರ ಇಮ್ಮಡಿ ಅಮೇರಿಕ ಅವರು ವಿದ್ಯಾರ್ಥಿಗಳ ಅಕ್ಷರ ದಾಸೋಹ ಹಾಗೂ ಕ್ಷೀರ ಭಾಗ್ಯಕ್ಕೆ ಅನುಕೂಲವಾಗುವಂತೆ ಶಾಲೆಗೆ 50 ತಟ್ಟೆ ಮತ್ತು 50 ಲೋಟಗಳನ್ನು ದೇಣಿಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಪರಶುರಾಮ ಕರಡಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಭಿಮಪ್ಪ, ಸದಸ್ಯರಾದ ವೆಂಕಟೇಶ, ಮಾರುತೇಶ, ನಿರುಪಾದಿ, ಮಾಜಿ ತಾ.ಪಂ ಸದಸ್ಯರಾದ ದೇವೇಂದ್ರಗೌಡ, ಸಹಶಿಕ್ಷಕರಾದ ನಾಗರಾಜ, ಕಸ್ತೂರಿ, ಜ್ಯೋತಿ, ತುಳಸಿ, ವಿದ್ಯಾಶ್ರೀ, ಕು.ಸಂಗೀತಾ, ಅತಿಥಿ ಶಿಕ್ಷಕರಾದ ಸುಷ್ಮಾ ಹಾಗೂ ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಹಾದಾನಿಗಳ ಸೇವಾ ಕಾರ್ಯ, ಅವರ ಸಹೃದಯಯತೆಗೆ ಅನಂತ ಅನಂತ ಧನ್ಯವಾದಗಳನ್ನು ಸಲ್ಲಿಸಿದ್ದಾರೆ…
ನಮ್ಮ ಶಾಲೆಗೆ ತಲುಪಲು ಅತ್ಯಂತ ಕಾಳಜಿ ವಹಿಸಿ ಕೊಡಿಸಿದ ಆತ್ಮೀಯರಾದ ಅಶೋಕ ಹೊಸಮನಿ, ಜಗದೀಶ್ ಈಳಿಗೇರ, ಮರಗೂರು ಮುರುಗೇಶ್, ಮೈಲಾರಪ್ಪ ಬೂದಿಹಾಳ ಇವರ ಸಹಕಾರವನ್ನು ಮರೆಯುವಂತಿಲ್ಲಾವೆಂದು ಮುಖ್ಯೋಪಾಧ್ಯಾಯರು ಮಾತನಾಡಿದರು.