ಸೈಕಾಲಜಿ ಪ್ರಕಾರ, ವ್ಯಕ್ತಿಗಳು ನಡೆಯುವಾಗ ಫೋನ್ ನೋಡುತ್ತಾ ನಡೆದರೆ ದೇಹ ಹಾಗೂ ಮನಸ್ಸಿನ ಮೇಲೆ ಬೀರುವ ಪರಿಣಾಮಗಳು

ನಿಮ್ಮ ಫೋನ್ ಅನ್ನು ನೋಡುತ್ತಾ ನಡೆಯುವುದರಿಂದ ಮಾನಸಿಕ ಮತ್ತು ದೈಹಿಕ ಪರಿಣಾಮಗಳ ಬಗ್ಗೆ ತಿಳಿಯಿರಿ

ಸಾಮಾನ್ಯವಾಗಿ ಜನರು ನಡೆಯುವಾಗ ತಮ್ಮ ಫೋನ್ ನೋಡುತ್ತಾ ನಡೆಯುತ್ತಿದ್ದಾರೆ.

ಪ್ರತಿದಿನ ತಲೆ ತಗ್ಗಿಸಿ ಫೋನ್‌ ಆಪರೇಟ್‌ ಮಾಡುತ್ತಾ ನಡೆದಾಡುವ ಜನರನ್ನು ನಾವು ಕಾಣುತ್ತೇವೆ. ನಮ್ಮ ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಇದು ಸಾಮಾನ್ಯವೆಂದು ತೋರುತ್ತಿದೆ. ಆದರೆ ಮನೋವಿಜ್ಞಾನವು ಈ ಅಭ್ಯಾಸ ನಿಮ್ಮ ದೇಹ ಮತ್ತು ಮನಸ್ಸು ಗೊಂದಲಕ್ಕೊಳಗಾಗುತ್ತದೆ ಎಂದು ಹೇಳುತ್ತದೆ. ಸಂದೇಶಗಳನ್ನು ಪರಿಶೀಲಿಸುವುದರ ಜೊತೆಗೆ, ನೀವು ಹೇಗೆ ಚಲಿಸುತ್ತಿದ್ದೀರಿ ಮತ್ತು ನೀವು ಹೇಗೆ ಭಾವಿಸುತ್ತಿದ್ದೀರಿ ಎಂಬುದರ ಕಡೆಗೆ ನೀವು ಗಮನಿಸುತ್ತಿಲ್ಲ.

ನ್ಯೂಯಾರ್ಕ್ ಅಥವಾ ಲಾಸ್ ಏಂಜಲೀಸ್‌ನಂತಹ US ನಗರಗಳಲ್ಲಿ ಕಾಲುದಾರಿಗಳು ವಾಕರ್‌ಗಳಿಂದ ತುಂಬಿರುತ್ತವೆ. ನಿಮ್ಮ ಫೋನ್‌ನತ್ತ ಕಣ್ಣು ಹಾಯಿಸುವ ಸರಳ ಕ್ರಿಯೆಯು, ನಿಮ್ಮ ನಡಿಗೆಯನ್ನು ನಿಧಾನಗೊಳಿಸಬಹುದು, ನಿಮ್ಮ ಭಂಗಿಯಲ್ಲಿ ವ್ಯತ್ಯಾಸವಾಗಿಸಬಹುದು ಮತ್ತು ನಿಮ್ಮ ಒತ್ತಡದ ಮಟ್ಟವನ್ನು ಹೆಚ್ಚಿಸಬಹುದು. ಇದು ದೈನಂದಿನ ನಡಿಗೆಯನ್ನು ಅತೃಪ್ತಿಗೊಳಿಸಬಹುದು ಮತ್ತು ಇನ್ನಷ್ಟು ಅಪಾಯಕಾರಿಯಾಗಿಸಬಹುದು. ಇದರ ಕುರಿತು ಸಂಶೋಧನೆಯು ನಮಗೆ ಏನು ಹೇಳುತ್ತದೆ ಎಂಬುದನ್ನು ಅನ್ವೇಷಿಸೋಣ.

ನಿಮ್ಮ ಫೋನ್ ನೋಡುತ್ತಾ ನಡೆಯುವುದರ ಹಿಂದೆ ಏನಿದೆ?

ನಡೆಯುವಾಗ ನಿಮ್ಮ ಫೋನ್‌ಗೆ ನೀವು ಅಂಟಿಕೊಂಡಾಗ, ನೀವು ಒಂದೇ ಬಾರಿಗೆ ಎರಡು ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿರುವಿರಿ:

ಪಠ್ಯಗಳು ಅಥವಾ ಸಾಮಾಜಿಕ ಫೀಡ್‌ಗಳನ್ನು ಚಲಿಸುವುದು ಮತ್ತು ಹಿಡಿಯುವುದು. ನೀವು ಆಧುನಿಕ ಬಹುಕಾರ್ಯಕರ್ತರಾಗಿದ್ದೀರಿ ಎಂಬುದನ್ನು ಇದು ತೋರಿಸಬಹುದು ಮತ್ತು ಅವರು ಎಲ್ಲಾ ಸಮಯದಲ್ಲೂ ಅಪ್‌ಡೇಟ್ ಆಗಿರಲು ಬಯಸುತ್ತಾರೆ. ಆದಾಗ್ಯೂ ಮೆದುಳನ್ನು ಈ ರೀತಿಯಲ್ಲಿ ಕುಶಲ ಕಾರ್ಯಗಳಿಗಾಗಿ ನಿರ್ಮಿಸಲಾಗಿಲ್ಲ.

ನಿಮ್ಮ ವಿಭಜಿತ ಗಮನವು ಈ ಕ್ಷಣದಲ್ಲಿ ನೀವು ಸಂಪೂರ್ಣವಾಗಿ ಇರುವುದಿಲ್ಲ ಎಂದು ಸೂಚಿಸುತ್ತದೆ, ಆದ್ದರಿಂದ ನಿಮ್ಮ ಸುತ್ತಲಿನ ಸಣ್ಣ ಮಾಹಿತಿಯನ್ನು ನೀವು ಕಳೆದುಕೊಳ್ಳುತ್ತೀರಿ ಮತ್ತು ನಿಮ್ಮ ನೈಸರ್ಗಿಕ ಲಯವನ್ನು ನಿರ್ಲಕ್ಷಿಸಲಾಗುತ್ತದೆ. ಈ ಅಭ್ಯಾಸವು ಸಮಯವನ್ನು ಉಳಿಸಲು ನಿರುಪಯುಕ್ತ ಮಾರ್ಗವೆಂದು ತೋರುತ್ತದೆ, ಆದರೆ ಇದು ಪ್ರಚೋದನೆಯ ನಿರಂತರ ಅಗತ್ಯವನ್ನು ಸೂಚಿಸುತ್ತದೆ.

ವೇಗ ಮತ್ತು ಸಂಪರ್ಕವನ್ನು ಗೌರವಿಸುವ ಈ ಜಗತ್ತಿನಲ್ಲಿ, ನಿಮ್ಮ ಫೋನ್‌ನಲ್ಲಿ ನಿಮ್ಮ ಅವಲಂಬನೆಯಿಂದ ಒತ್ತಡವನ್ನು ಅನುಭವಿಸುತ್ತೀರಿ ಎಂದು ಹೇಳುತ್ತಿರಬಹುದು. ಲೂಪ್‌ನಲ್ಲಿ ಉಳಿಯಲು ನೀವು ಜೀವನದ ಗುಣಮಟ್ಟವನ್ನು ತ್ಯಾಗ ಮಾಡುತ್ತಿರಬಹುದು ಎಂಬುದರ ಸಂಕೇತವಾಗಿದೆ.

ವಿಚಲಿತ ನಡಿಗೆಯ ಗುಪ್ತ ಅಪಾಯಗಳು

ಪ್ರಯಾಣದಲ್ಲಿರುವಾಗ ನಿಮ್ಮ ಫೋನ್ ಬಳಸುವುದು ಪರಿಣಾಮಕಾರಿಯಾಗಿರಬಹುದು, ಆದರೆ ಇದು ಅನೇಕ ಅನಾನುಕೂಲತೆಗಳೊಂದಿಗೆ ಬರುತ್ತದೆ. ನೈಸರ್ಗಿಕವಾಗಿ ಚಲಿಸುವ ಬದಲು, ನಿಮ್ಮ ನಡಿಗೆ ಬದಲಾಗುತ್ತದೆ ಮತ್ತು ನಿಮ್ಮ ಭಂಗಿಯು ನರಳುತ್ತದೆ. ನಿಮ್ಮ ಸುತ್ತಲಿನ ಪ್ರಪಂಚವನ್ನು ನೀವು ಸಂಪೂರ್ಣವಾಗಿ ಆನಂದಿಸದ ಕಾರಣ ನಿಮ್ಮ ಮನಸ್ಥಿತಿ ಕೂಡ ಕುಗ್ಗುತ್ತದೆ. ನಿಮ್ಮ ಫೋನ್ ಅನ್ನು ನೋಡುವಾಗ ನಡೆಯುವ ಕೆಲವು ಪ್ರಮುಖ ಋಣಾತ್ಮಕ ಅಂಶಗಳು ಇಲ್ಲಿವೆ:

ನಿಧಾನವಾದ ನಡಿಗೆ:

ನೀವು ಪಠ್ಯ ಸಂದೇಶ ಅಥವಾ ಸ್ಕ್ರೋಲಿಂಗ್‌ನಲ್ಲಿ ನಿರತರಾಗಿರುವಾಗ ನೀವು ಸುಮಾರು 10% ನಿಧಾನವಾಗಿ ನಡೆಯುತ್ತೀರಿ.

ಕಳಪೆ ಭಂಗಿ:

ನಿಮ್ಮ ಸಾಧನದ ಮೇಲೆ ಕುಣಿಯುವುದು ನಿಮ್ಮ ಕುತ್ತಿಗೆ ಮತ್ತು ಬೆನ್ನಿನ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ.

ಕಡಿಮೆಯಾದ ಅರಿವು:

ನಿಮ್ಮ ಗಮನವು ಪರಿಸರದಿಂದ ತೇಲುತ್ತದೆ, ಇದರಿಂದ ನೀವು ಅಡೆತಡೆಗಳು ಅಥವಾ ಅಪಾಯಗಳನ್ನು ತಂದುಕೊಳ್ಳುವ ಸಾಧ್ಯತೆ ಹೆಚ್ಚು.

ಹೆಚ್ಚಿದ ಒತ್ತಡ:

ನಡೆಯುವಾಗ ನಿಮ್ಮ ಹಾರ್ಮೋನ್‌ಗಳಲ್ಲಿ ಒತ್ತಡ ಹೆಚ್ಚಿಸಬಹುದು.

ಗಾಯದ ಹೆಚ್ಚಿನ ಅಪಾಯ:

ನೀವು ಮುಗ್ಗರಿಸುವ ಸಾಧ್ಯತೆಗಳು, ವಸ್ತುಗಳಿಗೆ ನೂಕು, ಅಥವಾ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಈ ದುಷ್ಪರಿಣಾಮಗಳು ಕೇವಲ ಅನಾನುಕೂಲತೆಗಳಲ್ಲ, ಅವು ನಿಮ್ಮ ಆರೋಗ್ಯದ ಮೇಲೆ ನಿಜವಾದ ಪರಿಣಾಮಗಳನ್ನು ಬೀರಬಹುದು. ನಿಮ್ಮ ಫೋನ್‌ನಿಂದ ವಿಚಲಿತರಾಗಿ ನಡೆಯುವುದು ನಿಮ್ಮ ನಡಿಗೆ ವೇಗವನ್ನು ನಿಧಾನಗೊಳಿಸುತ್ತದೆ, ನಿಮ್ಮ ಸಮತೋಲನವನ್ನು ಕ್ಷೀಣಿಸುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಹಾಳು ಮಾಡುತ್ತದೆ. ನೀವು ಒಂದೇ ಬಾರಿಗೆ ಹೆಚ್ಚು ಜಾದೂ ಮಾಡಲು ಪ್ರಯತ್ನಿಸುತ್ತಿರುವಿರಿ ಎಂದು ತೋರಿಸುವ ಅಭ್ಯಾಸ ಇದು.

ಮುಂದಿನ ಬಾರಿ ನೀವು ಎಲ್ಲಿಗಾದರೂ ಹೊರಡುವಾಗ, ನಿಮ್ಮ ಫೋನ್ ಅನ್ನು ಕೆಲವು ಕ್ಷಣಗಳ ಕಾಲ ದೂರ ಇಡಲು ಪ್ರಯತ್ನಿಸಿ. ತಾಜಾ ಗಾಳಿಯನ್ನು ಆನಂದಿಸಿ, ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಕಣ್ತುಂಬಿಕೊಳ್ಳಿ ಮತ್ತು ನಿಮ್ಮ ದೇಹದ ನೈಸರ್ಗಿಕ ಚಲನೆಗೆ ಅವಕಾಶವನ್ನು ನೀಡಿ. ಇದು ಉತ್ತಮ ದೈಹಿಕ ಆರೋಗ್ಯ ಮತ್ತು ಸಂತೋಷದ ಮನಸ್ಥಿತಿಗೆ ಕಾರಣವಾಗುವ ಸರಳ ಹಂತವಾಗಿದೆ, ಜೊತೆಗೆ ಪರದೆಗಳಿಂದ ವಿರಾಮವನ್ನು ತೆಗೆದುಕೊಳ್ಳುವ ಕ್ಷಣವಾಗಿ ಕಾರ್ಯನಿರ್ವಹಿಸುತ್ತದೆ.

 

ಎಸ್.ಎಸ್.ಎಲ್.ಸಿ ಫಲಿತಾಂಶಕ್ಕಾಗಿ ಶ್ರಮಿಸುತ್ತಿರುವ ಕೊಪ್ಪಳ ಜಿಲ್ಲಾ ಪ್ರೌಢಶಾಲಾ ಶಿಕ್ಷಕರು: ಡಿ.ಡಿ.ಪಿ.ಐ ಶ್ರೀಶೈಲ್ ಬಿರಾದಾರ

ಗಂಗಾವತಿ: ಭಾರತ ಸೇವಾದಳ ಮತ್ತು ಶಿಕ್ಷಕರ ಸಂಘದ ಸಹಕಾರದೊಂದಿಗೆ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶಿಕ್ಷಕರು ಇಲಾಖೆ ರೂಪಿಸುವ ಕಾರ್ಯಕ್ರಮಗಳಾದ ವಿಶೇಷ ತರಗತಿ, ಗುಂಪು ಅಧ್ಯಯನ, ೨೦ ಅಂಶಗಳ ಕಾರ್ಯಕ್ರಮಗಳು, ಪೂರ್ವಸಿದ್ಧತಾ ಪರೀಕ್ಷೆಗಳು, ಭೌತಿಕ ಸೌಕರ್ಯಗಳು ಸೇರಿದಂತೆ ವಿನೂತನ ಯೋಜನೆಗಳೊಂದಿಗೆ ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಬಾಲಕರ ಸರ್ಕಾರಿ ಪ್ರೌಢಶಾಲೆ ಬಸಾಪಟ್ಟಣದಲ್ಲಿ ಭಾರತ ಸೇವಾದಳ ಮತ್ತು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಮಕ್ಕಳ ನಾಯಕತ್ವ ಶಿಬಿರ ಮತ್ತು ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರಕ್ಕೆ ಭೇಟಿ ನೀಡಿದ ಡಿ.ಡಿ.ಪಿ.ಐ ಶ್ರೀಶೈಲ್ ಬಿರಾದಾರ್ ಹೇಳಿದರು. ಈ ಸಂದರ್ಭದಲ್ಲಿ ಮಕ್ಕಳ ಕಲಿಕಾ ಚಾರ್ಟ್ಗಳನ್ನು ಬಿಡುಗಡೆ ಮಾಡಿದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸೋಮಶೇಖರ ಹರ್ತಿಯವರು ಮಾತನಾಡಿ ಫಲಿತಾಂಶ ಸುಧಾರಣೆಗಾಗಿ ಕೊಪ್ಪಳ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರು ಹಗಲಿರುಳು ಶ್ರಮಿಸುತ್ತಿದ್ದು, ಉತ್ತಮ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ಭಾರತ ಸೇವಾದಳ ಸಹಕಾರದೊಂದಿಗೆ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಭಾರತ ಸೇವಾದಳ ಜಿಲ್ಲಾ ಸಂಘಟನೆಯ ಕುಮಾರಸ್ವಾಮಿ ಹೆಚ್.ಬಳ್ಳಾರಿ, ತಾಲೂಕು ಅಧಿನಾಯಕ ಶಿವಾನಂದ ತಿಮ್ಮಾಪೂರ, ಪ್ರಭಾರಿ ಮುಖ್ಯೋಪಾಧ್ಯಾಯ ಹನುಮೇಶ, ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ್ದ ಸಂಪನ್ಮೂಲ ಶಿಕ್ಷಕರು ಹಾಗೂ ಬಾಲಕರ ಪ್ರೌಢಶಾಲೆಯ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಮಕ್ಕಳು ದೇಶದ ಆಸ್ತಿ: ಭಾರತ್ ಸೇವಾದಳ ತಾಲೂಕ ಅಧ್ಯಕ್ಷ ಸುರೇಶ್ ಸಿಂಗನಾಳ

ಗಂಗಾವತಿ: ಮಕ್ಕಳು ದೇಶದ ಆಸ್ತಿ. ಅವರ ಮನಸ್ಸಿನಲ್ಲಿ ಜಾತಿ-ಮತ-ಭಾಷೆಯ ಭೇದಭಾವ ಬರದಂತೆ ಕಾಪಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳಲ್ಲಿ ಧಾರ್ಮಿಕ ಐಕ್ಯತೆ, ರಾಷ್ಟ್ರೀಯ ಭಾವೈಕ್ಯತೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ದೃಷ್ಟಿಯಿಂದ ಭಾರತ ಸೇವಾದಳ ಸಮಿತಿಯು ಮಕ್ಕಳ ನಾಯಕತ್ವ ಶಿಬಿರವನ್ನು ಹಮ್ಮಿಕೊಂಡಿದೆ ಎಂದು ತಿಳಿಸುತ್ತಾ, ಮಕ್ಕಳಲ್ಲಿ ದೇಶಭಕ್ತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಿದೆ ಎಂದು ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ಮಕ್ಕಳ ನಾಯಕತ್ವ ಶಿಬಿರದ ಧ್ವಜಾರೋಹಣವನ್ನು ನೆರವೇರಿಸಿ ತಾಲೂಕು ಸಮಿತಿಯ ಅಧ್ಯಕ್ಷರಾದ ಸುರೇಶ ಸಿಂಗನಾಳ ಹೇಳಿದರು.

ಈ ಶಿಬಿರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಂಜನೇಯ ನಾಯಕ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ಸೇವಾದಳ ಕಾರ್ಯಕ್ರಮಕ್ಕೆ ಪಂಚಾಯತಿಯು ಸರ್ವ ಸೌಲಭ್ಯಗಳನ್ನು ಒದಗಿಸಲು ಸಿದ್ಧವಿದ್ದು, ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.

ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಾಷುಸಾಬ್, ಪ್ರಬಾರಿ ಮುಖ್ಯೋಪಾಧ್ಯಾಯರಾದ ಹನುಮೇಶ್, ಜಿಲ್ಲಾ ಸಂಘಟಕರಾದ ಕುಮಾರಸ್ವಾಮಿ ಎಚ್.ಬಳ್ಳಾರಿ, ತಾಲೂಕು ಅಧಿನಾಯಕರಾದ ಶಿವಾನಂದ ತಿಮ್ಮಾಪುರ ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು.

ಜೋಗದ ನಾರಾಯಣಪ್ಪ ನಾಯಕ್ ಅವರಿಗೆ ಪಂಪಾನಗರ ಗೃಹ ನಿರ್ಮಾಣ ಸಂಘದ ನೂತನ ಸದಸ್ಯರಿಂದ ಸನ್ಮಾನ

ಗಂಗಾವತಿ: ನಗರಸಭೆ ವ್ಯಾಪ್ತಿಯ ಒಂದನೇ ವಾರ್ಡ್ ಪಂಪಾನಗರ ಗೃಹ ನಿರ್ಮಾಣ ಮಂಡಳಿಯ ನೂತನ ಸದಸ್ಯರುಗಳಿಂದ ಗ್ರಾಮದೇವತೆ ಶ್ರೀ ದುರ್ಗಾದೇವಿಯ ದೇವಸ್ಥಾನ ಸಮಿತಿಯ ಅಧ್ಯಕ್ಷ ನಾರಾಯಣಪ್ಪ ನಾಯಕ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ. ಸನ್ಮಾನ ಸ್ವೀಕರಿಸಿದ ನಾರಾಯಣಪ್ಪ ನಾಯಕ ಮಾತನಾಡಿ, ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಪ್ರಥಮ ಸಂಘವಾದ ಪಂಪಾನಗರ ಗೃಹ ನಿರ್ಮಾಣ ಮಂಡಳಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇಂತಹ ಸಂದರ್ಭದಲ್ಲಿ ನೂತನವಾಗಿ ಆಯ್ಕೆಗೊಂಡ ಸದಸ್ಯರುಗಳು ಮಂಡಳಿಯ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಹೆಚ್ಚು ಹೆಚ್ಚು ಸದಸ್ಯರು ಹಾಗೂ ಷೇರುದಾರರನ್ನು ಮಾಡಿಕೊಳ್ಳುವುದರ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕೆಂದು ಸಲಹೆ ನೀಡಿದರು.

ನೂತನವಾಗಿ ಆಯ್ಕೆಗೊಂಡ ಪ್ರಸನ್ನ ದೇಸಾಯಿ ಮಾತನಾಡಿ ಗೃಹ ನಿರ್ಮಾಣ ಮಂಡಳಿಯ ನೂತನ ಸದಸ್ಯರನ್ನಾಗಿ ಆಯ್ಕೆಗೊಳಿಸಿದ ಮಂಡಳಿಯ ಸದಸ್ಯರುಗಳಿಗೆ ಕೃತಜ್ಞತೆ ಅರ್ಪಿಸುವುದರ ಜೊತೆಗೆ ಮಂಡಳಿಯ ಹಿರಿಯ ಸದಸ್ಯರ ಸಲಹೆ ಸಹಕಾರ ಮಾರ್ಗದರ್ಶನ ಪಡೆದುಕೊಂಡು ಹೋಗುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನೂತನ ಸದಸ್ಯರುಗಳಾದ ಅನಿಲ್ ಕುಷ್ಟಗಿ, ಪ್ರಶಾಂತ್ ಹಾಲಳ್ಳಿ, ಮಹಾಬಲೇಶ್ವರ ಅಂಗಡಿ, ಪದ್ಮನಾಭ, ರಾಘವೇಂದ್ರ, ಶ್ರೀನಿವಾಸ ಧೂಳ ಹಾಗೂ ಪ್ರಮುಖರಾದ ಶ್ರೀನಿವಾಸ ತಾಂದಳೆ, ಮಂಜು ಕಟ್ಟಿಮನಿ, ಚನ್ನಬಸವ ಹಾಲಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಗಂಗಾವತಿ ಮುರಾಹರಿನಗರ ನಿವಾಸಿ ಹನುಮಮ್ಮಗೆ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ಹಸ್ತಾಂತರ.

ಗಂಗಾವತಿ: ನಗರದ ಮುರಾಹರಿನಗರ ಕಾರ್ಯಕ್ಷೇತ್ರದ ಮಾಶಾಸನ ಪಲಾನುಭವಿ ಹನುಮಮ್ಮ ಅವರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಹಾಗೂ ಮಾತೋಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ವಾತ್ಸಲ್ಯ ಮನೆ ಹಸ್ತಾಂತರ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯ ಮಾನ್ಯ ನಿರ್ದೇಶಕರಾದ ಪ್ರಕಾಶ್ ರಾವ್ ಸರ್ ಅವರು ವಾತ್ಸಲ್ಯ ನಾಮಫಲಕ ಅನಾವರಣ ಮಾಡುವ ಮೂಲಕ ಉದ್ಘಾಟನೆ ಮಾಡಿದರು ಹಾಗೂ ವಾತ್ಸಲ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಜರೀನಾ ಅವರ ಮಗ ಜುಬೇರ ಅವರು, ಯೋಜನೆಯ ಹಿತೈಷಿಗಳಾದ ವಿಶ್ವನಾಥ್, ಶಿವುಕುಮಾರ್ ಅವರು ಅಮರೀಶ್ ಹಾಗೂ ಕೊಪ್ಪಳ ಪ್ರಾದೇಶಿಕ ಜ್ಞಾನ ವಿಕಾಸ ವಿಭಾಗದ ಮಾನ್ಯ ಯೋಜನಾಧಿಕಾರಿಗಳಾದ ಸುಧಾ, ಗಂಗಾವತಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಬಾಲಕೃಷ್ಣ ಹಿರಿಂಜ, ವಲಯದ ಮೇಲ್ವಿಚಾರಕರು ದಯಾನಂದ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಧಾ, ಮೇಸ್ತ್ರಿ ಸುರೇಶ ಅವರು ಸೇವಾ ಪ್ರತಿನಿಧಿ ಲತಾ, ಒಕ್ಕೂಟ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.