ಮಕ್ಕಳು ದೇಶದ ಆಸ್ತಿ: ಭಾರತ್ ಸೇವಾದಳ ತಾಲೂಕ ಅಧ್ಯಕ್ಷ ಸುರೇಶ್ ಸಿಂಗನಾಳ

ಗಂಗಾವತಿ: ಮಕ್ಕಳು ದೇಶದ ಆಸ್ತಿ. ಅವರ ಮನಸ್ಸಿನಲ್ಲಿ ಜಾತಿ-ಮತ-ಭಾಷೆಯ ಭೇದಭಾವ ಬರದಂತೆ ಕಾಪಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳಲ್ಲಿ ಧಾರ್ಮಿಕ ಐಕ್ಯತೆ, ರಾಷ್ಟ್ರೀಯ ಭಾವೈಕ್ಯತೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ದೃಷ್ಟಿಯಿಂದ ಭಾರತ ಸೇವಾದಳ ಸಮಿತಿಯು ಮಕ್ಕಳ ನಾಯಕತ್ವ ಶಿಬಿರವನ್ನು ಹಮ್ಮಿಕೊಂಡಿದೆ ಎಂದು ತಿಳಿಸುತ್ತಾ, ಮಕ್ಕಳಲ್ಲಿ ದೇಶಭಕ್ತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಿದೆ ಎಂದು ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ಮಕ್ಕಳ ನಾಯಕತ್ವ ಶಿಬಿರದ ಧ್ವಜಾರೋಹಣವನ್ನು ನೆರವೇರಿಸಿ ತಾಲೂಕು ಸಮಿತಿಯ ಅಧ್ಯಕ್ಷರಾದ ಸುರೇಶ ಸಿಂಗನಾಳ ಹೇಳಿದರು.

ಈ ಶಿಬಿರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಂಜನೇಯ ನಾಯಕ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ಸೇವಾದಳ ಕಾರ್ಯಕ್ರಮಕ್ಕೆ ಪಂಚಾಯತಿಯು ಸರ್ವ ಸೌಲಭ್ಯಗಳನ್ನು ಒದಗಿಸಲು ಸಿದ್ಧವಿದ್ದು, ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.

ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಾಷುಸಾಬ್, ಪ್ರಬಾರಿ ಮುಖ್ಯೋಪಾಧ್ಯಾಯರಾದ ಹನುಮೇಶ್, ಜಿಲ್ಲಾ ಸಂಘಟಕರಾದ ಕುಮಾರಸ್ವಾಮಿ ಎಚ್.ಬಳ್ಳಾರಿ, ತಾಲೂಕು ಅಧಿನಾಯಕರಾದ ಶಿವಾನಂದ ತಿಮ್ಮಾಪುರ ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು.

Leave a Reply