ಜೋಗದ ನಾರಾಯಣಪ್ಪ ನಾಯಕ್ ಅವರಿಗೆ ಪಂಪಾನಗರ ಗೃಹ ನಿರ್ಮಾಣ ಸಂಘದ ನೂತನ ಸದಸ್ಯರಿಂದ ಸನ್ಮಾನ

ಗಂಗಾವತಿ: ನಗರಸಭೆ ವ್ಯಾಪ್ತಿಯ ಒಂದನೇ ವಾರ್ಡ್ ಪಂಪಾನಗರ ಗೃಹ ನಿರ್ಮಾಣ ಮಂಡಳಿಯ ನೂತನ ಸದಸ್ಯರುಗಳಿಂದ ಗ್ರಾಮದೇವತೆ ಶ್ರೀ ದುರ್ಗಾದೇವಿಯ ದೇವಸ್ಥಾನ ಸಮಿತಿಯ ಅಧ್ಯಕ್ಷ ನಾರಾಯಣಪ್ಪ ನಾಯಕ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ. ಸನ್ಮಾನ ಸ್ವೀಕರಿಸಿದ ನಾರಾಯಣಪ್ಪ ನಾಯಕ ಮಾತನಾಡಿ, ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಪ್ರಥಮ ಸಂಘವಾದ ಪಂಪಾನಗರ ಗೃಹ ನಿರ್ಮಾಣ ಮಂಡಳಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇಂತಹ ಸಂದರ್ಭದಲ್ಲಿ ನೂತನವಾಗಿ ಆಯ್ಕೆಗೊಂಡ ಸದಸ್ಯರುಗಳು ಮಂಡಳಿಯ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಹೆಚ್ಚು ಹೆಚ್ಚು ಸದಸ್ಯರು ಹಾಗೂ ಷೇರುದಾರರನ್ನು ಮಾಡಿಕೊಳ್ಳುವುದರ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕೆಂದು ಸಲಹೆ ನೀಡಿದರು.

ನೂತನವಾಗಿ ಆಯ್ಕೆಗೊಂಡ ಪ್ರಸನ್ನ ದೇಸಾಯಿ ಮಾತನಾಡಿ ಗೃಹ ನಿರ್ಮಾಣ ಮಂಡಳಿಯ ನೂತನ ಸದಸ್ಯರನ್ನಾಗಿ ಆಯ್ಕೆಗೊಳಿಸಿದ ಮಂಡಳಿಯ ಸದಸ್ಯರುಗಳಿಗೆ ಕೃತಜ್ಞತೆ ಅರ್ಪಿಸುವುದರ ಜೊತೆಗೆ ಮಂಡಳಿಯ ಹಿರಿಯ ಸದಸ್ಯರ ಸಲಹೆ ಸಹಕಾರ ಮಾರ್ಗದರ್ಶನ ಪಡೆದುಕೊಂಡು ಹೋಗುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನೂತನ ಸದಸ್ಯರುಗಳಾದ ಅನಿಲ್ ಕುಷ್ಟಗಿ, ಪ್ರಶಾಂತ್ ಹಾಲಳ್ಳಿ, ಮಹಾಬಲೇಶ್ವರ ಅಂಗಡಿ, ಪದ್ಮನಾಭ, ರಾಘವೇಂದ್ರ, ಶ್ರೀನಿವಾಸ ಧೂಳ ಹಾಗೂ ಪ್ರಮುಖರಾದ ಶ್ರೀನಿವಾಸ ತಾಂದಳೆ, ಮಂಜು ಕಟ್ಟಿಮನಿ, ಚನ್ನಬಸವ ಹಾಲಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply