ಪಿಯು ಫಲಿತಾಂಶ: ಕಿಷ್ಕಿಂದ ಪಿಯು ಕಾಲೇಜಿನ ೭೬% ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣ
ಗಂಗಾವತಿ : ಕಿಷ್ಕಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಪಿಯು ಫಲಿತಾಂಶದಲ್ಲಿ ಉತ್ತಮ ಸಾಧನೆಗೆದ್ದಿದ್ದಾರೆ. 2024 – 25 ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ವಿಜ್ಞಾನ ವಿಭಾಗ ಹಾಗೂ ಕಾಮರ್ಸ್ ವಿಭಾಗದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವ ಮುಖಾಂತರ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಶೇ 100% ಫಲಿತಾಂಶ ಬಂದಿದ್ದು, 198 ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು  198 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಡಿಸ್ಟಿಂಕ್ಷನ್ 151 ವಿದ್ಯಾರ್ಥಿಗಳು, ಪ್ರಥಮ ಸ್ಥಾನ 01, ದ್ವಿತೀಯ ಸ್ಥಾನ 1 ಸ್ಥಾನಗಳನ್ನು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ಕಾಮರ್ಸ್ ವಿಭಾಗದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ ಡಿಸ್ಟಿಂಕ್ಷನ್ 19 ವಿದ್ಯಾರ್ಥಿಗಳು ಪಡೆದಿದ್ದಾರೆ.  ಈ ವೇಳೆ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಮಲ್ಲನಗೌಡ ಮಾತನಾಡಿ ನಮ್ಮ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಶಕ್ತಿಮೀರಿ ಈ ಒಂದು ಉತ್ತಮ ಫಲಿತಾಂಶ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ, ಮುಂದಿನ ದಿನಮಾನದಲ್ಲಿ ಇದೇ ರೀತಿ ಉತ್ತಮ ಫಲಿತಾಂಶ ನೀಡುವುದೇ ನಮ್ಮ ಸಂಸ್ಥೆಯ ಮುಖ್ಯ ಗುರಿಯಾಗಿದೆ. ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸಹಕರಿಸಿದ ಪಾಲಕರಿಗೆ ಬೋಧನೆ ಮಾಡಿದ ಉಪನ್ಯಾಸ ವೃಂದಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಪ್ಪ, ಆಡಳಿತ ಅಧಿಕಾರಿಯಾದ  ಎಲ್ ವೀರಭದ್ರರಾವ್, ಪ್ರಾಚಾರ್ಯರಾದ ಮುರಳಿಕೃಷ್ಣ ಹಾಗೂ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಪಿಯು ಫಲಿತಾಂಶ ರೆಡ್ಡಿ ವೀರಣ್ಣ ಸಂಜೀವಪ್ಪ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ

ಕಾರಟಿಗಿ ರವಿನಗರ್ :  ಕಮ್ಮವಾರಿ  ಶಿಕ್ಷಣ ಸಂಸ್ಥೆ ( ರಿ ) ರೆಡ್ಡಿ ವೀರಣ್ಣ ಸಂಜೀವಪ್ಪ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಪಿಯು ಫಲಿತಾಂಶದಲ್ಲಿ ಉತ್ತಮ ಸಾಧನೆಗೆದ್ದಿದ್ದಾರೆ.

2024 – 25 ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ಹೆಚ್ಚಿನ ಅಂಕಗಳನ್ನು ಗಳಿಸುವ ಮುಖಾಂತರ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡ 100% ಫಲಿತಾಂಶ ಬಂದಿದ್ದು, ವೈಷ್ಣವಿ 95% ಪ್ರಥಮ ಸ್ಥಾನ, ಗಂಗಮ್ಮ 94% ದ್ವಿತೀಯ ಸ್ಥಾನ, ಹಾಗೂ ಭರತ್ ಚೌದರಿ 93.83% ತೃತೀಯ ಸ್ಥಾನ  ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶ್ರೇಯಾ 98.5% ಪಡೆದು ಜಿಲ್ಲೆಗೆ ಮೂರನೇ ಸ್ಥಾನ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ, ರುಚಿರಾ 97.17%, ದ್ವಿತೀಯ ಸ್ಥಾನ, ಅನಿಲಾ ಎ 96.2% ತೃತೀಯ ಸ್ಥಾನ  ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಕೊಲ್ಲಾ ಶೇಷಗಿರಿರಾವ್, ಆಡಳಿತ ಅಧಿಕಾರಿ ಶ್ರೀಮನ್ ನಾರಾಯಣ, ಪ್ರಾಚಾರ್ಯರು ಕೆಎಸ್ ಗುರುಮಠ, ಉಪ ಪ್ರಾಚಾರ್ಯರು ವಸಂತ ದೇಸಾಯಿ, ಸಂಸ್ಥೆಯ ಸಂಯೋಜಕರು ಹಾಗೂ ಬಾಲ ಗುರುಕುಲ ಮುಖ್ಯಸ್ಥರು ಶ್ರೀದೇವಿ ಕೊಲ್ಲಾ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ದ್ವಿತೀಯ ಪಿ.ಯು.ಸಿ ಫಲಿತಾಂಶದಲ್ಲಿ ಎಂ.ಎಸ್.ಎಂ.ಎಸ್. ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಗಂಗಾವತಿ: ತಾಲೂಕಿನ ಗ್ರಾಮೀಣ ಪ್ರದೇಶವಾದ ಮರಳಿ ಗ್ರಾಮದಲ್ಲಿ ಎಂ.ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದ ಒಟ್ಟು ವಿದ್ಯಾರ್ಥಿಗಳ ಪೈಕಿ ೭ ಡಿಸ್ಟಿಂಕ್ಷನ್, ೧೦ ಫಸ್ಟ್ ಕ್ಲಾಸ್, ೫ ದ್ವಿತೀಯ, ಉಳಿದ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಒಟ್ಟಾರೆ ಕಾಲೇಜಿನ ೮೫% ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಳೆದ ಬಾರಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ವಿದ್ಯಾರ್ಥಿಗಳು ಬಂದಿದ್ದರು, ಜೊತೆಗೆ ಎಂ.ಎಸ್.ಎಂ.ಎಸ್. ಸಂಸ್ಥೆಯಲ್ಲಿ ಓದಿರುವ ಹಲವಾರು ವಿದ್ಯಾರ್ಥಿಗಳು ಈಗಾಗಲೇ ಸರ್ಕಾರಿ ಇಲಾಖೆಗೆ ಸೇರಿಕೊಂಡು ತಮ್ಮ ಸೇವೆಯನ್ನು ನೀಡುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಕಾಲೇಜಿನ ಆಡಳಿತ ಅಧಿಕಾರಿಗಳಾದ ವಿರೂಪಾಕ್ಷಯ್ಯ ಸ್ವಾಮಿ ಮತ್ತು ಬಸವರಾಜ್ ಸ್ವಾಮಿ ಕಾರ್ಯದರ್ಶಿ ಹೆಚ್.ಎಂ. ಶ್ರೀಮತಿ ಪಾರ್ವತಿ ಸಿದ್ದರಾಮಸ್ವಾಮಿ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ೧೯೯೫-೯೬ನೇ ಸಾಲಿನಲ್ಲಿ ಈ ಸಂಸ್ಥೆಯನ್ನು ಮಲ್ಲಿಕಾರ್ಜುನ ಸ್ವಾಮಿಯವರು ಹುಟ್ಟು ಹಾಕಿದ್ದರು. ಮೊದಲ ಬಾರಿಗೆ ೨೦೧೨-೧೩ ರಲ್ಲಿ ಪಿಯು ಕಾಲೇಜ್ ಪ್ರಾರಂಭ ಮಾಡಿದಾಗ ಕೇವಲ ೩೫ ರಿಂದ ವಿದ್ಯಾರ್ಥಿಗಳು ಪ್ರಾರಂಭವಾಗಿದ್ದು ಇದೀಗ ಸಂಸ್ಥೆಯಲ್ಲಿ ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಓದುತ್ತಿರುವುದು ಮತ್ತು ಸಂಸ್ಥೆಗೆ ಒಳ್ಳೆಯ ಹೆಸರನ್ನು ವಿದ್ಯಾರ್ಥಿಗಳು ತಂದು ಕೊಟ್ಟಿರುವುದರಿಂದ ಅವರಿಗೆಲ್ಲ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರಾದ ಮಲ್ಲಿಕಾರ್ಜುನ್ ಸ್ವಾಮಿ ಅಭಿನಂದನೆಯನ್ನು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಇಂತಹ ಒಂದು ಕಾಲೇಜು ಸ್ಥಾಪನೆ ಮಾಡಬೇಕೆಂಬ ಮಹತ್ ಕನಸ್ಸನ್ನು ಹೊತ್ತುಕೊಂಡಿದ್ದ ಸ್ವಾಮಿಗಳು, ಗ್ರಾಮೀಣ ಭಾಗದ ಮಕ್ಕಳಿಗೆ ಪ್ರೈಮರಿ, ಹೈಸ್ಕೂಲು, ಪಿಯು ಕಾಲೇಜು, ಡಿಗ್ರಿ ಕಾಲೇಜು, ಬಿ.ಎಡ್ ಕಾಲೇಜು, ಡಿಪ್ಲೋಮಾ ಕಾಲೇಜ್‌ಗಳಲ್ಲಿ ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಓದುತ್ತಿದ್ದು, ಮುಂದಿನ ದಿನಮಾನಗಳಲ್ಲಿ ಎಂ.ಎಸ್.ಎಂ.ಎಸ್ ಸಂಸ್ಥೆ ವತಿಯಿಂದ ಕಾನೂನು ಕಾಲೇಜು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಗಂಗಾವತಿಯ ಸಂಕಲ್ಪ ಪಿಯು ಕಾಲೇಜಿನ ಶೇ. 76ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ಗಂಗಾವತಿ: ಏಪ್ರಿಲ್‌-08 ಮಂಗಳವಾರ ಪ್ರಕಟವಾದ ದ್ವಿತಿಯ ಪಿಯುಸಿ ಫಲಿತಾಂಶದಲ್ಲಿ ನಗರದ ಸಂಕಲ್ಪ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಶೇ.76ರಷ್ಟು ಫಲಿತಾಂಶ ಬಂದಿದ್ದು, ಕಲಾ ವಿಭಾಗದಲ್ಲಿ ಜಂಬಣ್ಣ ಎಂಬ ವಿದ್ಯಾರ್ಥಿ, ವಾಣಿಜ್ಯ ವಿಭಾಗದಲ್ಲಿ ಐಶ್ವರ್ಯ ಎಂಬ ವಿದ್ಯಾರ್ಥಿನಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಕಲಾ ವಿಭಾಗದಲ್ಲಿ ಜಂಬಣ್ಣ ಮಾರೆಪ್ಪ ವಿಭೂತಿ ಶೇ.94.66ರಷ್ಟು (568ಅಂಕ), ದುರುಗೇಶ ಜಂಬಣ್ಣ ವಿಭೂತಿ ಶೇ.93.33 ರಷ್ಟು (560ಅಂಕ) ಹಾಗೂ ಹುಲಿಗೆಮ್ಮ ಕುರಿ ವೆಂಕಟೇಶ ಶೇ. 93. ರಷ್ಟು (558) ಅಂಕ ಪಡೆದುಕೊಂಡಿರುತ್ತಾರೆ.

ಅದೇರೀತಿ ವಾಣಿಜ್ಯ ವಿಭಾಗದಲ್ಲಿ ಐಶ್ವರ್ಯ ನಾಗೇಶ ಶೇ.93.33 (560ಅಂಕ), ಉಷಾರಾಣಿ ಶೇ.92.50 (555) ಹಾಗೂ ಸುಮಾ ಜಡಿಯಪ್ಪ ಶೇ. 92.33 ರಷ್ಟು (554 ಅಂಕ) ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಷಯವಾರು 100ಕ್ಕೆ 100 ಅಂಕಗಳನ್ನು ಕಾಲೇಜಿನಲ್ಲಿ ಒಟ್ಟು ಹನ್ನೆರಡು ಮಕ್ಕಳು ಪಡೆದುಕೊಂಡಿದ್ದು, ಕನ್ನಡದಲ್ಲಿ ಇಬ್ಬರು, ಇತಿಹಾಸ ವಿಷಯದಲ್ಲಿ ಆರು ಜನ, ರಾಜ್ಯಶಾಸ್ತ್ರ ದಲ್ಲಿ ಇಬ್ಬರು, ಶಿಕ್ಷಣಶಾಸ್ತ್ರ ನಾಲ್ಕು ವಿದ್ಯಾರ್ಥಿಗಳು ನೂರು ಅಂಕ ಪಡೆದಿದ್ದಾರೆ.

ಪರೀಕ್ಷೆ ತೆಗೆದುಕೊಂಡಿದ್ದ ಒಟ್ಟು 242 ವಿದ್ಯಾ ರ್ಥಿಗಳಲ್ಲಿ 183 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 44 ಮಕ್ಕಳು ಉನ್ನತ ಶ್ರೇಣಿ, 112-ಪ್ರಥಮದರ್ಜೆ, 22 ದ್ವಿತೀಯ ದರ್ಜೆ, ಐದು ಮಕ್ಕಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಂಶುಪಾಲ ಮಂಜುನಾಥ ಸ್ವಾಮಿ ತಿಳಿಸಿದ್ದಾರೆ.