ಗಂಗಾವತಿ: ತಾಲೂಕಿನ ಗ್ರಾಮೀಣ ಪ್ರದೇಶವಾದ ಮರಳಿ ಗ್ರಾಮದಲ್ಲಿ ಎಂ.ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದ ಒಟ್ಟು ವಿದ್ಯಾರ್ಥಿಗಳ ಪೈಕಿ ೭ ಡಿಸ್ಟಿಂಕ್ಷನ್, ೧೦ ಫಸ್ಟ್ ಕ್ಲಾಸ್, ೫ ದ್ವಿತೀಯ, ಉಳಿದ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಒಟ್ಟಾರೆ ಕಾಲೇಜಿನ ೮೫% ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಳೆದ ಬಾರಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ವಿದ್ಯಾರ್ಥಿಗಳು ಬಂದಿದ್ದರು, ಜೊತೆಗೆ ಎಂ.ಎಸ್.ಎಂ.ಎಸ್. ಸಂಸ್ಥೆಯಲ್ಲಿ ಓದಿರುವ ಹಲವಾರು ವಿದ್ಯಾರ್ಥಿಗಳು ಈಗಾಗಲೇ ಸರ್ಕಾರಿ ಇಲಾಖೆಗೆ ಸೇರಿಕೊಂಡು ತಮ್ಮ ಸೇವೆಯನ್ನು ನೀಡುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಕಾಲೇಜಿನ ಆಡಳಿತ ಅಧಿಕಾರಿಗಳಾದ ವಿರೂಪಾಕ್ಷಯ್ಯ ಸ್ವಾಮಿ ಮತ್ತು ಬಸವರಾಜ್ ಸ್ವಾಮಿ ಕಾರ್ಯದರ್ಶಿ ಹೆಚ್.ಎಂ. ಶ್ರೀಮತಿ ಪಾರ್ವತಿ ಸಿದ್ದರಾಮಸ್ವಾಮಿ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ೧೯೯೫-೯೬ನೇ ಸಾಲಿನಲ್ಲಿ ಈ ಸಂಸ್ಥೆಯನ್ನು ಮಲ್ಲಿಕಾರ್ಜುನ ಸ್ವಾಮಿಯವರು ಹುಟ್ಟು ಹಾಕಿದ್ದರು. ಮೊದಲ ಬಾರಿಗೆ ೨೦೧೨-೧೩ ರಲ್ಲಿ ಪಿಯು ಕಾಲೇಜ್ ಪ್ರಾರಂಭ ಮಾಡಿದಾಗ ಕೇವಲ ೩೫ ರಿಂದ ವಿದ್ಯಾರ್ಥಿಗಳು ಪ್ರಾರಂಭವಾಗಿದ್ದು ಇದೀಗ ಸಂಸ್ಥೆಯಲ್ಲಿ ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಓದುತ್ತಿರುವುದು ಮತ್ತು ಸಂಸ್ಥೆಗೆ ಒಳ್ಳೆಯ ಹೆಸರನ್ನು ವಿದ್ಯಾರ್ಥಿಗಳು ತಂದು ಕೊಟ್ಟಿರುವುದರಿಂದ ಅವರಿಗೆಲ್ಲ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರಾದ ಮಲ್ಲಿಕಾರ್ಜುನ್ ಸ್ವಾಮಿ ಅಭಿನಂದನೆಯನ್ನು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಇಂತಹ ಒಂದು ಕಾಲೇಜು ಸ್ಥಾಪನೆ ಮಾಡಬೇಕೆಂಬ ಮಹತ್ ಕನಸ್ಸನ್ನು ಹೊತ್ತುಕೊಂಡಿದ್ದ ಸ್ವಾಮಿಗಳು, ಗ್ರಾಮೀಣ ಭಾಗದ ಮಕ್ಕಳಿಗೆ ಪ್ರೈಮರಿ, ಹೈಸ್ಕೂಲು, ಪಿಯು ಕಾಲೇಜು, ಡಿಗ್ರಿ ಕಾಲೇಜು, ಬಿ.ಎಡ್ ಕಾಲೇಜು, ಡಿಪ್ಲೋಮಾ ಕಾಲೇಜ್‌ಗಳಲ್ಲಿ ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಓದುತ್ತಿದ್ದು, ಮುಂದಿನ ದಿನಮಾನಗಳಲ್ಲಿ ಎಂ.ಎಸ್.ಎಂ.ಎಸ್ ಸಂಸ್ಥೆ ವತಿಯಿಂದ ಕಾನೂನು ಕಾಲೇಜು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.