ಕಾರಟಿಗಿ ರವಿನಗರ್ : ಕಮ್ಮವಾರಿ ಶಿಕ್ಷಣ ಸಂಸ್ಥೆ ( ರಿ ) ರೆಡ್ಡಿ ವೀರಣ್ಣ ಸಂಜೀವಪ್ಪ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಪಿಯು ಫಲಿತಾಂಶದಲ್ಲಿ ಉತ್ತಮ ಸಾಧನೆಗೆದ್ದಿದ್ದಾರೆ.
2024 – 25 ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ಹೆಚ್ಚಿನ ಅಂಕಗಳನ್ನು ಗಳಿಸುವ ಮುಖಾಂತರ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡ 100% ಫಲಿತಾಂಶ ಬಂದಿದ್ದು, ವೈಷ್ಣವಿ 95% ಪ್ರಥಮ ಸ್ಥಾನ, ಗಂಗಮ್ಮ 94% ದ್ವಿತೀಯ ಸ್ಥಾನ, ಹಾಗೂ ಭರತ್ ಚೌದರಿ 93.83% ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಶ್ರೇಯಾ 98.5% ಪಡೆದು ಜಿಲ್ಲೆಗೆ ಮೂರನೇ ಸ್ಥಾನ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ, ರುಚಿರಾ 97.17%, ದ್ವಿತೀಯ ಸ್ಥಾನ, ಅನಿಲಾ ಎ 96.2% ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಕೊಲ್ಲಾ ಶೇಷಗಿರಿರಾವ್, ಆಡಳಿತ ಅಧಿಕಾರಿ ಶ್ರೀಮನ್ ನಾರಾಯಣ, ಪ್ರಾಚಾರ್ಯರು ಕೆಎಸ್ ಗುರುಮಠ, ಉಪ ಪ್ರಾಚಾರ್ಯರು ವಸಂತ ದೇಸಾಯಿ, ಸಂಸ್ಥೆಯ ಸಂಯೋಜಕರು ಹಾಗೂ ಬಾಲ ಗುರುಕುಲ ಮುಖ್ಯಸ್ಥರು ಶ್ರೀದೇವಿ ಕೊಲ್ಲಾ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.