ಗಂಗಾವತಿ : ಕಿಷ್ಕಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಪಿಯು ಫಲಿತಾಂಶದಲ್ಲಿ ಉತ್ತಮ ಸಾಧನೆಗೆದ್ದಿದ್ದಾರೆ. 2024 – 25 ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ವಿಜ್ಞಾನ ವಿಭಾಗ ಹಾಗೂ ಕಾಮರ್ಸ್ ವಿಭಾಗದಲ್
ಲಿ ಹೆಚ್ಚಿನ ಅಂಕಗಳನ್ನು ಗಳಿಸುವ ಮುಖಾಂತರ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ವಿಜ್ಞಾನ ವಿಭಾಗದಲ್ಲಿ ಶೇ 100% ಫಲಿತಾಂಶ ಬಂದಿದ್ದು, 198 ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು 198 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಡಿಸ್ಟಿಂಕ್ಷನ್ 151 ವಿದ್ಯಾರ್ಥಿಗಳು, ಪ್ರಥಮ ಸ್ಥಾನ 01, ದ್ವಿತೀಯ ಸ್ಥಾನ 1 ಸ್ಥಾನಗಳನ್ನು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. 

ಕಾಮರ್ಸ್ ವಿಭಾಗದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ ಡಿಸ್ಟಿಂಕ್ಷನ್ 19 ವಿದ್ಯಾರ್ಥಿಗಳು ಪಡೆದಿದ್ದಾರೆ. ಈ ವೇಳೆ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಮಲ್ಲನಗೌಡ ಮಾತನಾಡಿ ನಮ್ಮ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಶಕ್ತಿಮೀರಿ ಈ ಒಂದು ಉತ್ತಮ ಫಲಿತಾಂಶ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾ
ರೆ, ಮುಂದಿನ ದಿನಮಾನದಲ್ಲಿ ಇದೇ ರೀತಿ ಉತ್ತಮ ಫಲಿತಾಂಶ ನೀಡುವುದೇ ನಮ್ಮ ಸಂಸ್ಥೆಯ ಮುಖ್ಯ ಗುರಿಯಾಗಿದೆ.
ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸಹಕರಿಸಿದ ಪಾಲಕರಿಗೆ ಬೋಧನೆ ಮಾಡಿದ ಉಪನ್ಯಾಸ ವೃಂದಕ್ಕೆ ಅಭಿನಂದನೆಗಳನ್ನು ತಿಳಿಸಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಪ್ಪ, ಆಡಳಿತ ಅಧಿಕಾರಿಯಾದ ಎಲ್ ವೀರಭದ್ರರಾವ್, ಪ್ರಾಚಾರ್ಯರಾದ ಮುರಳಿಕೃಷ್ಣ ಹಾಗೂ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.