ಸರ್, ನನ್ನ ಕ್ಸಾನ್ಸರ್ ನೋವಲ್ಲಿ ಸ್ವಾಂತನ ನೀಡಿದ್ದು ನನ್ನ ಹಾಡು. ನಾನು ಸ್ನೇಹ ತೀರ್ಥಹಳ್ಳಿ

ಸಾರ್, ನಮಸ್ಕಾರ. ನನ್ನ ಹೆಸರು ಸ್ನೇಹ, ಊರು ತೀರ್ಥಹಳ್ಳಿ. ನನಗೆ ಸಂಗೀತವೇ ಉಸಿರು, ಕನಸು, ಜೀವನದ ಭಾಗವಾಗಿದೆ. ನಾಲ್ಕನೇ ತರಗತಿಯಿಂದಲೇ ವೇದಿಕೆ ಮೇಲೆ ಹಾಡುತ್ತಿದ್ದೆ.

ಪಿಯುಸಿವರೆಗೂ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಗಳಿಸುತ್ತಿದ್ದೆ. ಮದುವೆಯ ನಂತರ ಬೇರೆ ಊರಿಗೆ ಹೋಗಬೇಕಾಯಿತು. ಅಲ್ಲಿ ನನ್ನನ್ನು ಗುರುತಿಸುವವರಿಗೆ ಸ್ವಲ್ಪ ಸಮಯ ಬೇಕಾಯಿತು.

ಒಮ್ಮೆ ಮನಸ್ಸು ಮಾಡಿ ಒಂದು ಸ್ಪರ್ಧೆಗೆ ಹೋದೆ. ಅಲ್ಲಿ ಭಾವಗೀತೆ ಹಾಗೂ ಜನಪದ ಗೀತೆ ಸ್ಪರ್ಧೆ ಇತ್ತು. 125 ಜನ ಸ್ಪರ್ಧಿಗಳು ಇದ್ದರು. ಎಲ್ಲರೂ ಚೆನ್ನಾಗಿ ಹಾಡಿದರು. ನಾನು “ಈ ಆಗಸ ಇದ್ದಾರೆ…” ಎಂಬ ಭಾವಗೀತೆ ಹಾಡಿದೆ.

ಅದಕ್ಕೆ ನನಗೆ ಪ್ರಥಮ ಸ್ಥಾನ ಲಭಿಸಿತು. ಅದಾಗಿನಿಂದ ಸ್ಥಳೀಯವಾಗಿ ನಾನು ಹಾಡುವ ಅವಕಾಶಗಳು ಹೆಚ್ಚಾದವು.

ಭಜನೆ ಕಾರ್ಯಕ್ರಮಗಳು, ಪ್ರಾರ್ಥನೆ ಹಾಡುಗಳು ಎಲ್ಲ ಕಡೆ ಕರೆ ಬರುತ್ತಿತ್ತು. ಅದರೊಡನೆ ನನ್ನ ಪ್ರಯಾಣ ಮುಂದುವರಿದಿತು.

ಸ್ನೇಹಿತರು ಕರೋಕೆ ಬಗ್ಗೆ ತಿಳಿಸಿದರು. ಮ್ಯೂಸಿಕ್ ಗೊತ್ತಿದ್ದರಿಂದ ಕರೋಕೆ ಹಾಸುಹೊಕ್ಕಾಗಲಿಲ್ಲ. ಮೊದಲಿಗೆ “ಈ ಹಸಿರು ಸಿರಿಯಲಿ ನವಿಲೆ…” ಹಾಡನ್ನು ಗೈದಿದ್ದೆ. ಈ ಹಾಡು ಜನಪ್ರಿಯವಾಯಿತು, ಇಂದಿಗೂ ನಾನು ಅದನ್ನು ಹಾಡುತ್ತೇನೆ.

ಇದು ನನ್ನ ಸಂಗೀತ ಪಯಣದ ಮತ್ತೊಂದು ಅಧ್ಯಾಯವಾಯಿತು. ಗಂಡ, ಎರಡು ಮಕ್ಕಳು ಸೇರಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದೆವು. ಆದರೆ ಒಂದು ದಿನ ಹಠಾತ್‌ ನನ್ನ ಜೀವನದಲ್ಲಿ ಬದಲಾವಣೆವಾಯಿತು.

ನನಗೆ ಕ್ಯಾನ್ಸರ್ ಎಂದು ಪತ್ತೆಯಾಯಿತು. 38 ವರ್ಷದ ವಯಸ್ಸು, ಚಿಕ್ಕ ಮಕ್ಕಳ ಜೊತೆ ಈ ಸುದ್ದಿ ಕೇಳಿ ಭಯವೂ, ತಲೆಕೆಡಿಸಿಕೊಳ್ಲುವಂತ ಪರಿಸ್ಥಿತಿಯೂ ಉಂಟಾಯಿತು. ಜ್ಯೋತಿಷ್ಯ ನಂಬುವುದಕ್ಕಿಂತ ಚಿಕಿತ್ಸೆಯ ಕಡೆ ನಿರ್ಧಾರ ಮಾಡಿದೆ. ಆದರೆ ಆಸ್ಪತ್ರೆಗೆ ಹೋಗಿದಂತೆ ಅನುಭವಿಸಿದ ನೋವು ಮರೆತೇ ಆಗಲ್ಲ.

ಟ್ರೀಟ್ಮೆಂಟ್ ಸುಲಭವಾಗಿರಲಿಲ್ಲ. ನರಕ ಅನುಭವಿಸಿದ್ದೆ. ಮನಸ್ಸಿಗೆ ತಾನೇ ಧೈರ್ಯ ಹೇಳಿಕೊಂಡು ಮುಂದುವರಿಯಬೇಕಾಯಿತು. ಅವರು ಕೇಳಿದಂತೆ ನನ್ನ ಹಾಡುಗಳು ನನ್ನಿಗೆ ಶಕ್ತಿ ಕೊಟ್ಟವು. ಪುನಃ ಹಾಡಲು ಪ್ರಾರಂಭ ಮಾಡಿದೆ.

ಭಾವಗೀತೆ, ಜನಪದ ಗೀತೆಗಳ ಮೂಲಕ ನನ್ನ ನೋವನ್ನು ಮರೆತುಬಿಡುತ್ತಿದ್ದೆ. ಕರೋಕೆ ಮೂಲಕ ಅಭ್ಯಾಸ ಮುಂದುವರಿಸಿದೆ. ಅಂತೆಯೇ ಟ್ರೀಟ್ಮೆಂಟ್ ಮುಗಿಯಿತು. ನಾನು ‘ನಾರ್ಮಲ್’ ಎಂಬ ವರದಿ ಪಡೆದೆ.

ಆದರೆ ಮಾತ್ರೆಗಳನ್ನು ನಿಲ್ಲಿಸಲಿಲ್ಲ. ಅದರ ಜೊತೆಗೆ ಇನ್ನೂ ಹಲವು ಕಾಯಿಲೆಗಳು ನನ್ನ ಜೀವನದಲ್ಲಿ ಸೇರಿಕೊಂಡವು. ಸಂಗೀತವೇ ಆ ಸಂಕಷ್ಟದಿಂದ ದಾರಿ ತೋರಿಸಿತು. ಕ್ಯಾನ್ಸರ್ ಬಂದವನು ಸತ್ತೇ ಹೋಗ್ತಾನೆ ಎಂಬ ಜನರ ನಂಬಿಕೆಗೆ ಬದಲಾಗಿಸಲು ನಾನು ಮುಂದಾದೆ. ದೇವರು ನನ್ನಲ್ಲಿ ಆತ್ಮಬಲ ತುಂಬಿದನು.

ನಾನು ಮ್ಯೂಸಿಕ್‌ ಮೂಲಕ ಬದುಕನ್ನು ಪುನರಾಯಿಸಿಕೊಂಡೆ. ಗುಂಪಿನಲ್ಲಿ ಹಾಡುತ್ತಿದ್ದಾಗ ನನ್ನ ಪ್ರತಿಭೆ ಮಸುಕಾಗಿ ಹೋಗುತ್ತಿತ್ತು. ಆದ್ದರಿಂದ ಸಿಂಗಲ್ ಹಾಡುಗಳನ್ನು ಮಾಡಲು ನಿರ್ಧರಿಸಿದೆ.

ಸ್ನೇಹಿತರು ನನ್ನ ಮೇಲೆ ನಂಬಿಕೆ ಇಟ್ಟು, ವೇದಿಕೆಯಲ್ಲಿ ಐದು ಹಾಡುಗಳಿಗೆ ಅವಕಾಶ ಕೊಟ್ಟರು. ಆಗಿನಿಂದ ನನ್ನ ಪ್ರಯಾಣ ಮುಂದುವರಿಯಿತು. ಎಲ್ಲೆಡೆ ನಾನು ಪ್ರೀತಿಯಿಂದ ಕರೆಯಲ್ಪಡುತ್ತಾ ಹಾಡುತ್ತಿದ್ದೇನೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘದ ಆನ್‌ಲೈನ್ ವೇದಿಕೆ ನನಗೆ ಹೊಸ ಅಂಗಳವಾಯಿತು. ಅಲ್ಲಿ ಹಾಡಿದ ಹಾಡು ಆಯ್ಕೆ ಆಯ್ತು. ಮಧು ನಾಯ್ಕ್ ಲಂಬಾಣಿ ಅವರು ನನ್ನಲ್ಲಿ ಆಸಕ್ತಿಯಿಂದ ಮಾತನಾಡಿದರು. ಅವರು ಉತ್ತಮ ಸಂಘಟಕರಾಗಿದ್ದು ನಮ್ಮಂತಹ ಕಲಾವಿದರಿಗೆ ಮುಖ್ಯ ವಾಹಿನಿಗೆ ತಲುಪಲು ಸಹಾಯ ಮಾಡಿದ್ದಾರೆ.

ಇಂದಿನವರೆಗೆ 300ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೇನೆ. ಮದುವೆ, ಹಬ್ಬ, ಶುಭಸಮಾರಂಭ ಎಲ್ಲೆಡೆ ಗಾಯನ ಮಾಡಿದ್ದೇನೆ. ನಾನು ಒಬ್ಬಳಾಗಿ ಹೋಗುವುದು ಸರಿಯೆಂದು ಅನಿಸದ ಕಾರಣ ನನ್ನ ಮಗಳಿಗೂ ಹಾಡು ಕಲಿಸಿದ್ದೇನೆ.
ಅವಳು ನನ್ನ ಜೊತೆಗೆ 6ನೇ ವರ್ಷದಿಂದಲೇ ಹಾಡುತ್ತಿದ್ದಾಳೆ. ಇಡೀ ಕುಟುಂಬ ನನ್ನ ಹಿಂದೆ ನಿಂತಿದೆ.

“ನಂದೇ ಸ್ನೇಹ ತೀರ್ಥಹಳ್ಳಿ” ಎಂಬ ಯೂಟ್ಯೂಬ್ ಚಾನೆಲ್ ಹೊಂದಿದ್ದೇನೆ. ಜನ ನನ್ನ ಹಾಡುಗಳನ್ನು ಕೇಳುತ್ತಾರೆ. ಇದರಿಂದ ಮತ್ತಷ್ಟು ಕಲಿಕೆಗೆ ಸಹಾಯವಾಗುತ್ತಿದೆ. ಎಲ್ಲೆಡೆ “ಯೂಟ್ಯೂಬ್ ಸಿಂಗರ್ ಸ್ನೇಹ ಅಲ್ವಾ?” ಎನ್ನುತ್ತಾರೆ. ಇದು ನನಗೆ ಸಂತೋಷ, ಧೈರ್ಯ ಮತ್ತು ಬಲವನ್ನು ನೀಡುತ್ತದೆ.

27 ರಂದು ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನನಗೆ ಸನ್ಮಾನ ಸಿಕ್ಕಿತು. ಅದು ನನ್ನ ಜೀವನದ ಮರೆಯಲಾರದ ಕ್ಷಣ. ಗುರುರಾದ ಗೊರೂರು ಅನಂತರಾಜು ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

ನನ್ನ ಕಷ್ಟ ಧೈರ್ಯದಿಂದ ಕೇಳಿದ ನಿಮಗೆ ಅನಂತ ಧನ್ಯವಾದಗಳು.
ನಿಮ್ಮ ಸ್ನೇಹ, ತೀರ್ಥಹಳ್ಳಿ.

ಶನಿವಾರ ಸಂಜೆ ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಟ್ಯ ದಾಸೋಹಂ ಕಾರ್ಯಕ್ರಮ

ಶನಿವಾರದಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಟ್ಯ ದಾಸೋಹಂ ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹಾಸನದ ಉತ್ತರ ಬಡಾವಣೆಯಲ್ಲಿ ಸ್ಥಾಪಿತ ನಾಟ್ಯ ಕಲಾ ನಿವಾಸ್ ಸಂಸ್ಥೆಯು ಆಗಸ್ಟ್ 2 ರಂದು 18ನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ.

ಈ ವಿಶೇಷ ದಿನದ ಪ್ರಯುಕ್ತ ಸಂಜೆ ನಾಲ್ಕು ಗಂಟೆಗೆ ‘ಹರಿಹರ ಸುತ’ ಎಂಬ ಅಯ್ಯಪ್ಪನ ಚರಿತ್ರೆ ಆಧಾರಿತ ನೃತ್ಯ ನಾಟಕದ ಪ್ರದರ್ಶನವಿದೆ.

ನಂತರ, ಸಂಜೆ ಆರು ಗಂಟೆಯಿಂದ ಕರ್ನಾಟಕದ ಖ್ಯಾತ ನೃತ್ಯ ಕಲಾವಿದರು ‘ನಾಟ್ಯ ದಾಸೋಹಂ’ ಕಾರ್ಯಕ್ರಮದಲ್ಲಿ ಹರಿದಾಸರ ರಚನೆಗಳನ್ನು ಹಾಡಿ ನೃತ್ಯಿಸುತ್ತಾರೆ.

ಸಂಸ್ಥೆಯ ಪ್ರಾಂಶುಪಾಲ ಉನ್ನತ್ ಜೈನ್ ಅವರು ಈ ಕಾರ್ಯಕ್ರಮದ ಮಾಹಿತಿ ನೀಡಿದ್ದು, ಸಾರ್ವಜನಿಕರನ್ನು ಭಾಗವಹಿಸಲು ಆಹ್ವಾನಿಸಿದ್ದಾರೆ.

ಸಂಗೀತವೇ ನನ್ನ ಉಸಿರು – ನಾಗರಕಟ್ಟೆಯ ಗಾನಕೋಗಿಲೆ ಸಿ. ಹನುಮಂತನಾಯ್ಕ

ಕಳೆದ 12 ವರ್ಷಗಳಿಂದ ದಾವಣಗೆರೆಯಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದೇನೆ.

ಜಾನಪದ ಗೀತೆ ವೈಯಕ್ತಿಕ ಮತ್ತು ಸಮೂಹ ಗಾಯನ ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸಿದ್ದು, ಹಿಂದೂಸ್ತಾನಿ ಲಘು ಸಂಗೀತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದೇನೆ.

ಕರ್ನಾಟಕ ಶಾಸ್ತ್ರೀಯ ಲಘು ಸಂಗೀತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಕಲಾ ಪ್ರೀತಿಗೆ ಮತ್ತಷ್ಟು ಬೆಳಕು ಹರಿಸಿದ್ದೇನೆ.

ಇಂತಹ ವೈವಿಧ್ಯಮಯ ಪ್ರತಿಭೆ ಹೊಂದಿರುವ ವ್ಯಕ್ತಿ ನಾಗರಕಟ್ಟೆಯ ಸಿ. ಹನುಮಂತನಾಯ್ಕ, ಪ್ರಸ್ತುತ ದಾವಣಗೆರೆಯ ದುಗ್ಗಮ್ಮಪೇಟೆಯ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿದ್ದಾರೆ.

ಇವರು ಮೂರು ಬಾರಿ ರಾಜ್ಯ ಪ್ರಶಸ್ತಿ ಪಡೆದಿರುವುದರ ಜೊತೆಗೆ ಅಂಗವಿಕಲರ ರಾಜ್ಯ ಮಟ್ಟದ ಪ್ರಬಂಧ ಹಾಗೂ ಗಾಯನ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದಾರೆ.

ಹುಟ್ಟಿದ 14 ತಿಂಗಳ ನಂತರ ಪೋಲಿಯೋ ರೋಗದಿಂದ ವಿಕಲಚೇತನರಾದ ಇವರು ತಂದೆ ಚಂದ್ರನಾಯ್ಕ ಅವರಿಂದ ಪ್ರೇರಣೆಯುಂಟಾಯಿತು ಎಂದು ಕೃತಜ್ಞತಾಪೂರ್ವಕವಾಗಿ ನೆನಪಿಸುತ್ತಾರೆ.

ತಾಯಿ ಪುಟ್ಟಿಬಾಯಿ, ಪತ್ನಿ ಪವಿತ್ರಾ, ಮಗ ವಿಕ್ರಮ್ ನಾಯ್ಕ ಹಾಗೂ ಮಗಳು ದ್ರುವೀಕ ಅವರ ಪ್ರೀತಿಯ ಕುಟುಂಬವಾಗಿದೆ.

ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ನಾಗರಕಟ್ಟೆಯಲ್ಲಿಯೇ ಮುಗಿಸಿ, ದಾವಣಗೆರೆಯ ಮೋತಿಯಪ್ಪ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದರು.

ಡಿ.ಎಡ್ ತರಬೇತಿಯನ್ನು ತುಮಕೂರಿನ ಚಿಕ್ಕನಹಳ್ಳಿ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಪಡೆದು, ಧಾರವಾಡದಿಂದ ಬಿಎ, ಇಗ್ನೋದಿಂದ ಬಿ.ಎಡ್ ಮಾಡಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯನ್ನು ಪಡೆದಿರುವ ಇವರು, 2010ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಶಿಕ್ಷಕರ ಹುದ್ದೆಗೆ ಆಯ್ಕೆಯಾದರು.

ಬಾಲ್ಯದಲ್ಲಿಯೇ ತಂದೆ ಹಾಡುತ್ತಿದ್ದ ಲಾವಣಿ, ಕೋಲಾಟ, ಭಜನೆ ಪದಗಳು ಇವರಿಗೆ ಸಂಗೀತದ ಪ್ರೇರಣೆಯಾಗಿದ್ದು, 4ನೇ ತರಗತಿಯಿಂದ ಹಾಡುಗಳನ್ನು ಹಾಡತೊಡಗಿದರು.

ಇವರೆಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ 130ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿರುವ ಗಾನಕೋಗಿಲೆ. ಅವರಿಗೆ ‘ಕಲಾ ವಿಭೂಷಣ’, ‘ಶಿಕ್ಷಣ ಸೌರಭ’ ಪ್ರಶಸ್ತಿಗಳು ಲಭಿಸಿವೆ.

ಇವರ ಮತ್ತೊಂದು ವಿಶೇಷತೆ ಎಂದರೆ ಗಂಡು ಹಾಗೂ ಹೆಣ್ಣು ಧ್ವನಿಯಲ್ಲಿ ಹಾಡಬಹುದಾದ ಅಪರೂಪದ ಪ್ರತಿಭೆ. ಮಕ್ಕಳಿಗೂ ಈ ಕಲೆಯನ್ನು ಧಾರೆಯೆರೆಯುತ್ತಿದ್ದಾರೆ.

ಕೊರೊನಾ ಸಂದರ್ಭದಲ್ಲಿ ತ್ರಿಚಕ್ರ ವಾಹನದಲ್ಲಿ ಆಹಾರ ಪೊಟ್ಟಣಗಳನ್ನು ವಿತರಿಸುವ ಮೂಲಕ ಇವರು ಸಾಮಾಜಿಕ ಕಳಕಳಿಯನ್ನು ಸಹ ವ್ಯಕ್ತಪಡಿಸಿದ್ದಾರೆ.

ಇವರು ಕರ್ನಾಟಕ ರಾಜ್ಯ ಬರಹಗಾರರ ಸಂಘದ (ರಿ.) ಹೂವಿನಹಡಗಲಿ ಘಟಕದ ಅಧ್ಯಕ್ಷ ಮಧುನಾಯ್ಕ್ ಲಂಬಾಣಿ ಅವರು ಆಯೋಜಿಸಿದ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಗಾಯನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಹಾಡಿ “ಕರ್ನಾಟಕ ಕರುನಾಡ ಕೋಗಿಲೆ” ಪ್ರಶಸ್ತಿಗೆ ಪಾತ್ರರಾದರು.

ಈ ಕಾರ್ಯಕ್ರಮದಲ್ಲಿ ಅವರು ಹಾಡಿದ ಕರೋಕೆ ಗೀತೆಯನ್ನು ತೀರ್ಪುಗಾರನಾಗಿ ನಾನು ಆಲಿಸಿದ್ದು, ಅವರ ಸಾಮೂಹಿಕ ನಾಡಗೀತೆ ವಿಶೇಷವಾಗಿ ಗಮನಸೆಳೆದಿತು.

“ಹತ್ತನೇ ವಯಸ್ಸಿನಿಂದಲೇ ನಾನು ಜಾನಪದ, ಭಾವಗೀತೆ, ಲಾವಣಿ, ಚಿತ್ರಗೀತೆಗಳನ್ನೇ ಹಾಡುತ್ತಾ ಕಲಿಸುತ್ತಾ ಬಂದಿದ್ದೇನೆ ಸಾರ್,” ಎನ್ನುತ್ತಾರೆ ಅವರು.

“ನಮ್ಮ ಶಾಲೆಯ ಎರಡನೇ ತರಗತಿಯ ಮಕ್ಕಳು ನಾಡಗೀತೆಗಳನ್ನು ಕರೋಕೆಯೊಂದಿಗೆ ತುಂಬಾ ಸೊಗಸಾಗಿ ಹಾಡುತ್ತಾರೆ ಸಾರ್,” ಎಂದು ಸಂತೋಷದಿಂದ ಹೇಳುತ್ತಾರೆ.

“ವಿಕಲಚೇತನ ಎಂದು ಕೆಲವೊಮ್ಮೆ ಮನಸ್ಸಿಗೆ ನೋವಾಗುತ್ತದೆ. ಆಗ ಎರಡು ಹಾಡುಗಳನ್ನು ಹಾಡಿ ತೃಪ್ತಿಪಟ್ಟುಕೊಳ್ಳುತ್ತೇನೆ,” ಎನ್ನುತ್ತಾರೆ ಅವರು ಭಾವೋದ್ರೇಕದಿಂದ.

“ನನ್ನ ಮನಸ್ಸು, ಹೃದಯ ಹರ್ಷಗೊಳ್ಳುತ್ತದೆ. ನೋವು ಮರೆತುಹೋಗುತ್ತದೆ. ನಿಜಕ್ಕೂ ಸಂಗೀತವೇ ನನ್ನ ಉಸಿರು,” ಎಂದು ಕಣ್ಣೀರಿನಿಂದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

ಗೊರೂರು ಅನಂತರಾಜು, ಹಾಸನ.
9449462879
ವಿಳಾಸ :ಹುಣಸಿನಕೆರೆ ಬಡಾವಣೆ,
29ನೇ ವಾಡ್೬, 3ನೇ ಕ್ರಾಸ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ-573201

ಸಾರ್, ನನಗೆ ಹಾಡುವುದೆಂದರೆ ತುಂಬಾ ಇಷ್ಟ.ನಾನು ಅಶ್ವಿನಿ ಹರೀಶ್

ನನ್ನ ಹೆಸರು ಅಶ್ವಿನಿ ಹರೀಶ್. ನಾನು 25-4-1984 ರಂದು ಹೊನ್ನವಳ್ಳಿಯಲ್ಲಿ ಜನಿಸಿದ್ದೇನೆ. ಈ ಊರು ಚಲನಚಿತ್ರ ಹಾಸ್ಯನಟ ಹೊನ್ನವಳ್ಳಿ ಕೃಷ್ಣ ಅವರ ಹುಟ್ಟೂರು.

ನನ್ನ ತಂದೆ-ತಾಯಿಗೆ ಎಂಟು ಮಂದಿ ಮಕ್ಕಳಿದ್ದು, ನಾನು ಏಳನೇ ಸ್ಥಾನದಲ್ಲಿದ್ದೇನೆ. ನಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಹೇಮಾವತಿ ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ್ದೇನೆ.

ಚಿಕ್ಕಂದಿನಿಂದಲೇ ನನಗೆ ಹಾಡು ಹಾಡುವುದು ಬಹಳ ಇಷ್ಟವಾಗಿತ್ತು. ಶಾಲಾ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದೆ.

ಹೊಲದ ಹತ್ತಿರ ಕೆಲಸ ಮಾಡುವಾಗ ದನ ಮೇಯಿಸುವಾಗ ನನಗೆ ನಾನೇ ಹಾಡಿಕೊಳ್ಳುತ್ತಿದೆ. ಮನೆಯಲ್ಲಿ ಕೆಲಸ ಮಾಡುವಾಗಲು ಪಾತ್ರೆ ತೊಳೆಯುವಾಗಲು ಮನೆ ಸಾರಿಸುವಾಗಲೂ ಹಾಡು ಹೇಳುತ್ತಲೇ ಇದ್ದೆ.

ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಅರಕಲಗೂಡು ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಸೇರಿದ್ದೆ. ಆದರೆ ಆ ವೇಳೆ ನನ್ನ ತಂದೆ ನಿಧನರಾದರು.

ಕುಟುಂಬದ ಆರ್ಥಿಕ ತೊಂದರೆಗಳಿಂದಾಗಿ ವಿದ್ಯಾಭ್ಯಾಸ ಮುಂದುವರಿಯಲಿಲ್ಲ. ಆದರೂ ನಾನು ಹಾಡು ಹೋದ ಹಾದಿಯನ್ನು ತೊರೆದಿಲ್ಲ.

2006 ರಲ್ಲಿ “ಈ ಟಿವಿಯ ಹಾಡಿಗೊಂದು ಹಾಡು” ಕಾರ್ಯಕ್ರಮದ ಆಡಿಶನ್‌ ನಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದಿದ್ದೆ.

ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕಿ ಬಿ.ಆರ್. ಛಾಯ ಮತ್ತು ರವಿಶಂಕರ್ ಜ್ಯೂರಿಯಾಗಿ ಭಾಗವಹಿಸಿದ್ದರು.

ಅರಕಲಗೂಡಿಗೆ ಮನೆ ಬದಲಾಯಿಸಿದ ನಂತರ, ಜನಪದ ಕಲಾವಿದ ದೇವಾನಂದ್ ವರಪ್ರಸಾದ್ ಅವರು ಬೇಸಿಗೆ ಶಿಬಿರ ಆಯೋಜಿಸಿದ್ದರು.

ಅವರಿಗೆ ನನ್ನ ಮಗಳನ್ನು ಸೇರಿಸಲು ಹೋಗಿ ನನ್ನಲ್ಲಿದ್ದ ಗಾಯನ ಆಸಕ್ತಿಯನ್ನು ನೋಡಿ, ಅವರಿಗೆ ಹಾಡಲು ಅವಕಾಶ ನೀಡಿದರು.

ಮೈಸೂರು ದಸರಾ, ಕೋಟಿ ಕಂಠ ಗೀತೆ, YESHTEL ಟಿವಿ ಕಾರ್ಯಕ್ರಮಗಳಲ್ಲಿ ಜನಪದ ಗೀತೆಗಳನ್ನು ಹಾಡಿದ್ದೇನೆ.

ಮೈಸೂರು ಕಿರು ರಂಗಮಂದಿರದ ಜಾನಪದ ಹಬ್ಬದಲ್ಲಿ ‘ಸೋಜಿಗಾದ ಸೂಜುಮಲ್ಲಿಗೆ’ ಹಾಡು ಹಾಡಿ ಶ್ರೋತೃಗಳ ಮನಗೆದ್ದಿದ್ದೆ.

ದೇವಾನಂದ್ ಅವರ ಸಂಗೀತ ಸಂಯೋಜನೆಯಲ್ಲಿ “ದೂರದ ಬೆಟ್ಟ ನುಣ್ಣಗೆ” ಎಂಬ ನಾಟಕದಲ್ಲಿ ನಾನು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದೆ.

ಸೋಬಾನೆ, ರಾಗಿ ಬೀಸೋ ಪದಗಳ ತರಬೇತಿ ಅವರು ನೀಡಿದರು. ಅವರ ಮಾರ್ಗದರ್ಶನದಿಂದ ನಾನು ಹೊಸ ಶೈಲಿಗಳನ್ನು ಕಲಿತೆ.

ಶೇಖರ್ ಅವರು ನನ್ನ ಚಲನಚಿತ್ರ ಗೀತೆಗಳ ಗಾಯನದ ಶೈಲಿಗೆ ಮಾರ್ಗದರ್ಶನ ನೀಡಿದ್ದಾರೆ. ಕರೋಕೆ ಪಾಠ ಕಲಿಸಿದ್ದಾರೆ.

ಅವರು ಆಯೋಜಿಸಿದ್ದ “ಸ್ವರ ಸಂಭ್ರಮ” ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿ ಬಹುಮಾನ ಹಾಗೂ ಸ್ಮರಣಿಕೆಗಳನ್ನು ಗಳಿಸಿದ್ದೆ.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಯೂತ್ ಮೇಳದಲ್ಲಿ ಜಿಲ್ಲಾ ಮಟ್ಟ, ವಿಭಾಗ ಮಟ್ಟ ಜಯಗಳಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾದೆ.

ಆದರೆ ಕೋವಿಡ್ ಕಾರಣದಿಂದ ಭಾಗವಹಿಸಲು ಸಾಧ್ಯವಾಗಲಿಲ್ಲ. ಇದು ನನ್ನ ಸಂಗೀತ ಪಯಣದಲ್ಲಿ ಒಂದು ನಿರಾಸೆಯ ಹಂತವಾಯಿತು.

‘ಲಹರಿ’ ಎಂಬ ತಂಡವನ್ನು ತಯಾರಿಸಿ ವಿವಿಧ ಹಬ್ಬಗಳಲ್ಲಿ ಭಾಗವಹಿಸಿದ್ದೆ. ಹಳ್ಳಿ ಸಂಸ್ಕೃತಿ ಹಬ್ಬದಲ್ಲಿ ನನ್ನ ಮಗಳು ಹಾಗೂ ಮಕ್ಕಳು ಸೇರಿಕೊಂಡಿದ್ದೆವು.

ಅಲ್ಲಿ ಭಜನೆ, ನೃತ್ಯ, ಜನಪದ ಗೀತೆಗಳು, ಆರತಿ ಶಾಸ್ತ್ರದ ಹಾಡುಗಳೊಂದಿಗೆ ಪ್ರಥಮ ದ್ವಿತೀಯ ಬಹುಮಾನ ಗಳಿಸಿದ್ದೆವು.

ಅರಕಲಗೂಡು ದಸರಾ, ಗಣೇಶೋತ್ಸವ, ಶಿಕ್ಷಕರ ದಿನಾಚರಣೆಯಲ್ಲಿ ನಮ್ಮ ತಂಡದಿಂದ ಹಾಡುಗಳನ್ನು ಪ್ರಸ್ತುತಪಡಿಸಿದ್ದೆವು.

ಹಾಸನ ಜಿಲ್ಲೆಯ ಬರಹಗಾರರ ಸಂಘದ ಅಧ್ಯಕ್ಷ ಸುಂದರೇಶ್ ಡಿ. ಉಡುವಾರೆ ಅವರು ಕರೀಂಖಾನ್ ಪ್ರಶಸ್ತಿ ನೀಡಿ ಗೌರವಿಸಿದರು.

ಕರ್ನಾಟಕ ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧು ನಾಯಕ್ ಲಂಬಾಣಿ ಅವರು ನಡೆಸಿದ ಆನ್‌ಲೈನ್ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಗೌರವ ಪಡೆದೆ.

2024ರ ಶಿವಮೊಗ್ಗ “ಕನ್ನಡ ನುಡಿ ವೈಭವ” ಕಾರ್ಯಕ್ರಮದಲ್ಲಿ ನನಗೆ ‘ಗಾನಕೋಗಿಲೆ’ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಗೊರೂರು ಅನಂತರಾಜು, ಹಾಸನ.
9449462879
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3 ನೇ ಕ್ರಾಸ್,
ಶ್ರೀ ಶನೈಶ್ಚರ ದೇವಸ್ಥಾನ ರಸ್ತೆ,
ಹಾಸನ-573201