ಆಗಸ್ಟ್ 10 ರಿಂದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೆಯ ಆರಾಧನಾ ಮಹೋತ್ಸವ… ಗುರುರಾಜ್ ಆಚಾರ.

ಗಂಗಾವತಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಗಸ್ಟ್ 10ರಿಂದ ಮೂರು ದಿನಗಳ ಕಾಲ ಆರಾಧನಾ ಮಹೋತ್ಸವ ಜರುಗಲಿದೆ.

ಈ ಮಹೋತ್ಸವವು ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 354ನೇ ಆರಾಧನೆಗೆ ಸಮರ್ಪಿತವಾಗಿದೆ.

ಶ್ರೀಮಠದ ವ್ಯವಸ್ಥಾಪಕ ಸಾಮವೇದಿ ಗುರುರಾಜ ಆಚಾರ್ ಹಾಗೂ ಪ್ರಧಾನ ಅರ್ಚಕ ಭೀಮಸೇನ್ ಆಚಾರ್ ಮಾಧ್ಯಮದೊಂದಿಗೆ ಮಾತನಾಡಿ ಕಾರ್ಯಕ್ರಮದ ವಿವರ ನೀಡಿದರು.

ಅವರು ಮಂತ್ರಾಲಯದ ಪೀಠಾಧಿಕಾರಿಗಳಾದ ಶ್ರೀ ಶುಭೋದಯ ಶ್ರೀ ಸುಬುಧ್ಯೇಂದ್ರ ತೀರ್ಥ ಶ್ರೀ ಪಾದಂಗಳವರ ಅಜ್ಞಾನುಸಾರವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಆರಾಧನಾ ಮೋತ್ಸವ ಜರುಗಲಿದೆ.

ಮಹೋತ್ಸವದ ಅವಧಿಯಲ್ಲಿ ಪ್ರತಿದಿನ ಅಷ್ಟೋತ್ತರ ಶತನಾಮಾವಳಿ ಪಾರಾಯಣ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ. ಭಜನೆ, ಅಲಂಕಾರ ಹಾಗೂ ಬ್ರಾಹ್ಮಣರ ಸೇವೆ ಜರುಗಲಿದೆ.

ಆರಾಧನೆಯ ಮುಖ್ಯ ದಿನವಾದ ಆಗಸ್ಟ್ 11 ರಂದು ಮಧ್ಯರಾದನೆ ನಡೆಯಲಿದ್ದು, ಆಗಸ್ಟ್‌ 12 ರಂದು ಉತ್ತರಾಧನೆ ನಡೆಯಲಿದೆ.

ಶ್ರೀ ರಾಘವೇಂದ್ರ ಸ್ವಾಮಿಗಳವರ ಸರ್ವಲಾಂಕೃತ ಭವ್ಯ ರಥೋತ್ಸವ ಸಕಲ ವಾದ್ಯ ವೈಭವದೊಂದಿಗೆ ಹಾಗೂ ವಿವಿಧ ಭಜನಾ ಮಂಡಳಿ ಅವರಿಂದ ಜರುಗಲಿದೆ.

ಸಕಲ ಭಕ್ತಾದಿಗಳು ಭಾಗವಹಿಸಿ ಶ್ರೀ ರಾಯರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ಜರುಗಲಿದೆ ಎಂದು ಶ್ರೀಮಠದ ವ್ಯವಸ್ಥಾಪಕ ಸಾಮವೇದಿ ಗುರುರಾಜ ಆಚಾರ್ ಹಾಗೂ ಪ್ರಧಾನ ಅರ್ಚಕ ಭೀಮಸೇನ್ ಆಚಾರ್ ಹೇಳಿದರು.

ಅವರು ಶ್ರೀಮಠದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಮಂತ್ರಾಲಯದ ಪೀಠಾಧಿಕಾರಿಗಳಾದ ಶ್ರೀ ಶುಭೋದಯ ಶ್ರೀ.ಸುಬು ಧ್ಯೇoದ್ರ ತೀರ್ಥ ಶ್ರೀ ಪಾದಂಗಳವರ ಅಜ್ಞಾನುಸಾರವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಆರಾಧನಾ ಮೋತ್ಸವ ಜರುಗಲಿದ್ದು.

ದಿನಂಪ್ರತಿ ಅಷ್ಟೋತ್ತರ ಶತನಾಮಾವಳಿಯೊಂದಿಗೆ ರಾಯರ ಬೃಂದಾವನಕ್ಕೆ ಕ್ಷೀರಾಭಿಷೇಕ ಪಂಚಾಮೃತ ಅಭಿಷೇಕ, ಭಜನೆ ಅಲಂಕಾರ ಬ್ರಾಹ್ಮಣರ ಸೇವೆ ಜರುಗಲಿದೆ.

ದಿನಾಂಕ 11 ಸೋಮವಾರ ಮಧ್ಯರಾಧನೆ, ದಿನಾಂಕ 12 ಮಂಗಳವಾರ ಉತ್ತರಾಧನೆ, ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳವರ ಸರ್ವಲಾಂಕೃತ ಭವ್ಯ ರಥೋತ್ಸವ ಸಕಲ ವಾದ್ಯ ವೈಭವದೊಂದಿಗೆ ಹಾಗೂ ವಿವಿಧ ಭಜನಾ ಮಂಡಳಿ ಅವರಿಂದ ಜರುಗಲಿದ್ದು ಸಕಲ ಭಕ್ತಾದಿಗಳು ಭಾಗವಹಿಸಿ ಶ್ರೀ ರಾಯರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

೨೦೨೪-೨೫ನೇ ಸಾಲಿನ ವಿಜಯಪುರ ಮಹಿಳಾ ವಿಶ್ವಾವಿದ್ಯಾಲಯದ ಫಲಿತಾಂಶದಲ್ಲಿ ಗಂಗಾವತಿಯ ಸಂಕಲ್ಪ ಪ್ರ.ದ.ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಮೋಘ ಸಾಧನೆ

ಗಂಗಾವತಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ೨೦೨೪-೨೫ನೇ ಸಾಲಿನ ಬಿ.ಎ ಮತ್ತು ಬಿಕಾಂ ಅಂತಿಮ ವರ್ಷದ ಫಲಿತಾಂಶ ಪ್ರಕಟಿಸಲಾಗಿದೆ.

ಗಂಗಾವತಿಯ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಅಮೋಘ ಸಾಧನೆ ಮಾಡಿದ್ದಾರೆ.

ಬಿ.ಎ ಪದವಿಯಲ್ಲಿ ಒಟ್ಟು ೭೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ.

ನೇಹಾ ತಂದೆ ಯಮನೂರ್‌ ಸಾಬ ಶೇ ೯೩.೩೮%, ರೇವತಿ ತಂದೆ ಜಯಣ್ಣ ಹೆಬ್ಬಾಳ್ ಶೇ ೯೩.೭%, ತಿರುಮಲ ತಂದೆ ಪಾಮಣ್ಣ ಪೂಜಾರಿ ಶೇ ೯೨.೯೨%, ಚೈತ್ರ ತಂದೆ ಲಕ್ಷ್ಮೀಪತಿ ಶೇ ೯೨.೭೬% ಫಲಿತಾಂಶ ಪಡೆದಿದ್ದಾರೆ.

ಅದೇ ರೀತಿ ಬಿಕಾಂ ಪದವಿಯಲ್ಲಿ ಒಟ್ಟು ೬೪ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿನಿಯರು ಉನ್ನತ ಶ್ರೇಣಿ ಗಳಿಸಿದ್ದಾರೆ.

ಪೂರ್ಣಿಮಾ ತಂದೆ ಶೇಖರಪ್ಪ ಮಡಿವಾಳ್ ಶೇ ೯೭.೦೭%, ಸಾಕ್ಷಿಪ್ರಿಯ ತಂದೆ ಮಂಜುನಾಥ್ ಶೆಟ್ಟಿ ಶಹಪುರ್ ಶೇ ೯೭.೦೭%, ಯಾಮಿನಿ ತಂದೆ ಪಿ ಕೃಷ್ಣ ಶೇ ೯೬.೩೧% ಹಾಗೂ ಅನಂತಲಕ್ಷ್ಮಿ ತಂದೆ ಆನಂತ್ಲ್ಯಾಕ್ಷ್ಮಿ ದೊಡ್ಡಮಲ್ಲಪ್ಪ ಶೇ ೯೫.೮೪% ಫಲಿತಾಂಶದೊಂದಿಗೆ ಅಗ್ರಸ್ಥಾನ ಪಡೆಯುವುದರ ಮೂಲಕ ವಿದ್ಯಾರ್ಥಿನಿಯರು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೇಮಂತರಾಜ ಜಿ. ಕಲ್ಮಂಗಿ, ಕಾರ್ಯಾಧ್ಯಕ್ಷರಾದ ನಾಗರಾಜ ಎಸ್ ಗುತ್ತೇದಾರ, ಉಪಾಧ್ಯಕ್ಷರಾದ ಡಾ. ಎಂ.ಆರ್ ಮಂಜುಸ್ವಾಮಿ, ಕಾರ್ಯದರ್ಶಿಗಳಾದ ಬಸವರಾಜ ಎಲ್ ಕೇಸರಹಟ್ಟಿ, ಕೋಶಾಧ್ಯಕ್ಷರಾದ ಮಲ್ಲಿಕಾರ್ಜುನ ಸಿಂಗನಾಳ, ನಿರ್ದೇಶಕರಾದ ಡಾ. ಅಮಿತ್ ಕುಮಾರ್ ರೆಡ್ಡಿ ಹಾಗೂ ಪ್ರಾಚಾರ್ಯರಾದ ಬಸಪ್ಪ ಶಿರಿಗೇರಿ ಹಾಗೂ ಮಹಾವಿದ್ಯಾಲಯದ ಎಲ್ಲಾ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಅವರ ಭವಿಷ್ಯ ಉಜ್ವಲವಾಗಲೆಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯು ವಿಶೇಷವಾಗಿ ಪ್ರೋತ್ಸಾಹಿಸಿದ ಪಾಲಕರಿಗೆ ಹಾಗೂ ಉತ್ತಮ ಬೋಧನೆ ಮಾಡಿ ವಿದ್ಯಾರ್ಥಿನಿಯರ ಸಾಧನೆಗೆ ಕಾರಣರಾದ ಉಪನ್ಯಾಸಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದೆ.

ಮಾಹಿತಿಗಾಗಿ
ಬಸಪ್ಪ ಶಿರಿಗೇರಿ
ಪ್ರಾಚಾರ್ಯರು,
ಸಂಕಲ್ಪ ಪ್ರಥಮ ದರ್ಜೆ ಮಹಾವಿದ್ಯಾಲಯ ಗಂಗಾವತಿ.
ಅeಟಟ: ೯೦೧೯೧೯೮೦೬೭

ಗಂಡುಗಲಿ ಕುಮಾರರಾಮನ ಶೌರ್ಯ, ಸಾಹಸ, ಅಪ್ರತಿಮ ಹೋರಾಟ ಜನಮಾನಸದಲ್ಲಿ ಬೇರೂರಿವೆ: ಸೋಮನಾಥ ಎಸ್. ಹೆಬ್ಬಡದ

ಗಂಗಾವತಿ: ಇಂದು ಜುಲೈ-೯ ಶನಿವಾರ ಶ್ರೀಮತಿ ಈರಮ್ಮ ಸಿದ್ದಪ್ಪ ಸಿದ್ದಾಪುರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗಂಡುಗಲಿ ಕುಮಾರರಾಮನ ಜಯಂತಿಯನ್ನು ಆಚರಿಸಲಾಯಿತು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿ ಸಮಿತಿಯ ವತಿಯಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿಗಳು ಮತ್ತು ಪದಾಧಿಕಾರಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು .

ಜಯಂತಿಯ ಅಂಗವಾಗಿ, ಶ್ರೀ ಸೋಮನಾಥ ಎಸ್. ಹೆಬ್ಬಡದ ಅವರು ಗಂಡುಗಲಿ ಕುಮಾರರಾಮನ ಇತಿಹಾಸ ಹಾಗೂ ಅವನ ಶೌರ್ಯ, ಸಾಹಸ, ಅಪ್ರತಿಮ ಹೋರಾಟ ಮನೋಭಾವ ಕುರಿತು ಉಪನ್ಯಾಸ ನೀಡಿದರು.

ಅವರು ಕುಮಾರರಾಮನ ತ್ಯಾಗ ಬಲಿದಾನದ ಬಗ್ಗೆ ಹಾಗೂ ಸದ್ಗುಣಗಳ ಕಾರಣದಿಂದ ಇಂದಿಗೂ ಜನಮಾನಸದಲ್ಲಿ ಬೇರೂರಿದ್ದು, ಇಂದಿಗೂ ಆತನನ್ನು ಪೂಜಿಸಲಾಗುತ್ತಿದೆ ಎಂದು ವಿವರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪ್ರಾಂತ ಕಾರ್ಯಕಾರಣಿ ಮಂಡಳಿಯ ಸದಸ್ಯರಾದ ಅಶೋಕ್ ರಾಯಕರ್, ಇತಿಹಾಸವನ್ನು ತಿರುಚುವ ಅಪಾಯದ ಬಗ್ಗೆ ಎಚ್ಚರಿಸಿದರು.

ಮೈಸೂರಿನ ಕನ್ನಂಬಾಡಿ ಕಟ್ಟೆಯ ಇತಿಹಾಸವನ್ನು ತಪ್ಪಾಗಿ ಜನರಿಗೆ ತಿಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂಬುದನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಡಾ|| ಮಾನಸ ಡಿ.ಎ. ಅವರು, ವಿದ್ಯಾರ್ಥಿಗಳಿಗೆ ಹೋರಾಟಗಾರರ ಜೀವನ ಚರಿತ್ರೆ ಪರಿಚಯಿಸುವ ಪರಿಷತ್ತಿನ ಪ್ರಯತ್ನಕ್ಕೆ ಧನ್ಯವಾದ ಅರ್ಪಿಸಿದರು.

ಅವರು ಈ ಕಾರ್ಯಕ್ರಮಗಳು ಯುವಕರಲ್ಲಿ ದೇಶಭಕ್ತಿ ಮತ್ತು ಸಂಸ್ಕೃತಿ ಅರಿವು ಬೆಳೆಸಲು ಸಹಾಯ ಮಾಡುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಯಂಕಪ್ಪ ಕಟ್ಟಿಮಣಿ, ರಾಜೇಶ್ ನಾಯಕ್ ದೊರೆ ಮತ್ತು ಹರನಾಯಕ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಅವರು ಗಂಡುಗಲಿ ಕುಮಾರರಾಮನ ಹೋರಾಟ ಇಂದಿನ ಪೀಳಿಗೆಗೆ ಪ್ರೇರಣೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷ ಎನ್. ಜಡೆಪ್ಪ ಮೆಟ್ರಿ, ಯುವಕರು ದುಶ್ಚಟಗಳಿಂದ ದೂರವಿದ್ದು ದೇಶದ ಗರಿಮೆ ಉಳಿಸಿ ಬೆಳೆಸುವ ಕಾಯಕದಲ್ಲಿ ನಿರತರಾಗಬೇಕು ಎಂದು ಕರೆ ನೀಡಿದರು.

ಅವರು ಸಾಹಿತ್ಯ ಮತ್ತು ಸಂಸ್ಕೃತಿ ರಕ್ಷಣೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಕುಮಾರಿ ಸೌಮ್ಯ ನಿರ್ವಹಿಸಿದರು, ಶ್ರೀ ಮಹದೇವ್ ಮೋಟಿ ಅವರು ಕಾರ್ಗಿಲ್ ಯೋಧರಿಗೆ ನಮನ ಸಲ್ಲಿಸುವ ದೇಶಭಕ್ತಿ ಗೀತೆ ಹಾಡಿದರು.

ಸ್ವಾಗತವನ್ನು ಯಲ್ಲಪ್ಪ ಕಲಾಲ್ ಮಾಡಿದರು. ವಂದನಾರ್ಪಣೆಯನ್ನು ಬಳ್ಳಾರಿ ವಿಭಾಗಿಯ ಸಂಯೋಜಕರಾದ ಶ್ರೀಧರ್. ಟಿ ಸಲ್ಲಿಸಿ ಶಾಂತಿ ಮಂತ್ರ ಪಠಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳಾದ ಪ್ರಕಾಶ್ ಪಾಟೀಲ್, ಶಿವನಗೌಡ ತೆಗ್ಗಿ, ಶ್ರವಣಕುಮಾರ ರಾಯಕರ್, ಉಪನ್ಯಾಸಕರಾದ ಬಾಳಪ್ಪ, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಂಕರ ಮಠದಲ್ಲಿ ನೂತನ ಉಪಕರ್ಮ ಹಾಗೂ ಜನಿವಾರ ಧಾರಣೆ.

ಗಂಗಾವತಿ: ಶಂಕರ ಮಠದಲ್ಲಿ ನೂಲು ಹುಣ್ಣಿಮೆಯ ಪ್ರಯುಕ್ತ, ನೂತನ ಉಪಕರ್ಮ ಹಾಗೂ ಜನಿವಾರಧಾರಣೆ ಧಾರ್ಮಿಕವಾಗಿ ನೆರವೇರಿತು.

ಈ ಸಂದರ್ಭದಲ್ಲಿ ಉಪನಯನಗೊಂಡ ಎರಡು ಮಕ್ಕಳಿಗೆ ಉಪಕರ್ಮ ಹಾಗೂ ಸಮಾಜ ಬಾಂಧವರ ಜನಿವಾರಧಾರಣೆ ವಿಧಿಗಳನ್ನು ವೇದಮೂರ್ತಿ ಮಹೇಶ್ ಭಟ್ ಜೋಶಿ ನೆರವೇರಿಸಿದರು.

ವೇದಮೂರ್ತಿ ಮಹೇಶ್ ಭಟ್ ಜೋಶಿ ಅವರು, ಸನಾತನ ಸಂಸ್ಕೃತಿಯಲ್ಲಿ ಆಶ್ರಮ ಧರ್ಮಗಳು ಹಿಂದಿನ ಕಾಲದಲ್ಲಿ ಅತ್ಯಂತ ಮಹತ್ವದ್ದಾಗಿದ್ದವು ಎಂದು ಹೇಳಿದರು.

ಉಪನಯನಗೊಂಡ ವಟುಗಳಿಗೆ ಶಿಕ್ಷಣ ಕಲಿಯುವ ಅವಕಾಶ ದೊರಕುತ್ತಿದ್ದ ಪರಂಪರೆ ಇಂದಿಗೂ ಜೀವಂತವಾಗಿದೆ ಎಂದು ಅವರು ಉಲ್ಲೇಖಿಸಿದರು.

ಅವರು ಜನಿವಾರಧಾರಣೆ ಸನಾತನ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಅಗತ್ಯವಾದ ಆಚರಣೆ ಎಂದು ವಿವರಿಸಿದರು.

ಧಾರ್ಮಿಕ ಆಚರಣೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸನಾತನ ಧರ್ಮದ ರಕ್ಷಣೆಗೆ ನಾವು ಕೈಜೋಡಿಸಬಹುದು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉಪಕರ್ಮ ಹೋಮ, ಗಾಯತ್ರಿ ಮಂತ್ರ ಪಾರಾಯಣ ಮತ್ತು ಇತರೆ ಪೂಜಾ ಕಾರ್ಯಕ್ರಮಗಳು ಶನಿವಾರ ಬೆಳಿಗ್ಗೆ ನೆರವೇರಿಸಲಾಯಿತು.

ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿ ಕರ್. ಸುರೇಶ್. ಅನಿಲ್ ಅಳವಂಡಿ. . . ಶೇಷಗಿರಿ ಗಡಾದ್. ಇತರರು ಪಾಲ್ಗೊಂಡಿದ್ದರು

ವರದಿ : ಸುದರ್ಶನ ವೈದ್ಯ

ಫೋಟೊ : ಶ್ರೀನಿವಾಸ ಕರಮುಡಿ