ಗಂಗಾವತಿ: ಶಂಕರ ಮಠದಲ್ಲಿ ನೂಲು ಹುಣ್ಣಿಮೆಯ ಪ್ರಯುಕ್ತ, ನೂತನ ಉಪಕರ್ಮ ಹಾಗೂ ಜನಿವಾರಧಾರಣೆ ಧಾರ್ಮಿಕವಾಗಿ ನೆರವೇರಿತು.
ಈ ಸಂದರ್ಭದಲ್ಲಿ ಉಪನಯನಗೊಂಡ ಎರಡು ಮಕ್ಕಳಿಗೆ ಉಪಕರ್ಮ ಹಾಗೂ ಸಮಾಜ ಬಾಂಧವರ ಜನಿವಾರಧಾರಣೆ ವಿಧಿಗಳನ್ನು ವೇದಮೂರ್ತಿ ಮಹೇಶ್ ಭಟ್ ಜೋಶಿ ನೆರವೇರಿಸಿದರು.
ವೇದಮೂರ್ತಿ ಮಹೇಶ್ ಭಟ್ ಜೋಶಿ ಅವರು, ಸನಾತನ ಸಂಸ್ಕೃತಿಯಲ್ಲಿ ಆಶ್ರಮ ಧರ್ಮಗಳು ಹಿಂದಿನ ಕಾಲದಲ್ಲಿ ಅತ್ಯಂತ ಮಹತ್ವದ್ದಾಗಿದ್ದವು ಎಂದು ಹೇಳಿದರು.
ಉಪನಯನಗೊಂಡ ವಟುಗಳಿಗೆ ಶಿಕ್ಷಣ ಕಲಿಯುವ ಅವಕಾಶ ದೊರಕುತ್ತಿದ್ದ ಪರಂಪರೆ ಇಂದಿಗೂ ಜೀವಂತವಾಗಿದೆ ಎಂದು ಅವರು ಉಲ್ಲೇಖಿಸಿದರು.
ಅವರು ಜನಿವಾರಧಾರಣೆ ಸನಾತನ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಅಗತ್ಯವಾದ ಆಚರಣೆ ಎಂದು ವಿವರಿಸಿದರು.
ಧಾರ್ಮಿಕ ಆಚರಣೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸನಾತನ ಧರ್ಮದ ರಕ್ಷಣೆಗೆ ನಾವು ಕೈಜೋಡಿಸಬಹುದು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪಕರ್ಮ ಹೋಮ, ಗಾಯತ್ರಿ ಮಂತ್ರ ಪಾರಾಯಣ ಮತ್ತು ಇತರೆ ಪೂಜಾ ಕಾರ್ಯಕ್ರಮಗಳು ಶನಿವಾರ ಬೆಳಿಗ್ಗೆ ನೆರವೇರಿಸಲಾಯಿತು.
ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿ ಕರ್. ಸುರೇಶ್. ಅನಿಲ್ ಅಳವಂಡಿ. . . ಶೇಷಗಿರಿ ಗಡಾದ್. ಇತರರು ಪಾಲ್ಗೊಂಡಿದ್ದರು
ವರದಿ : ಸುದರ್ಶನ ವೈದ್ಯ
ಫೋಟೊ : ಶ್ರೀನಿವಾಸ ಕರಮುಡಿ