ಗಂಗಾವತಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ೨೦೨೪-೨೫ನೇ ಸಾಲಿನ ಬಿ.ಎ ಮತ್ತು ಬಿಕಾಂ ಅಂತಿಮ ವರ್ಷದ ಫಲಿತಾಂಶ ಪ್ರಕಟಿಸಲಾಗಿದೆ.
ಗಂಗಾವತಿಯ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಅಮೋಘ ಸಾಧನೆ ಮಾಡಿದ್ದಾರೆ.
ಬಿ.ಎ ಪದವಿಯಲ್ಲಿ ಒಟ್ಟು ೭೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ.
ನೇಹಾ ತಂದೆ ಯಮನೂರ್ ಸಾಬ ಶೇ ೯೩.೩೮%, ರೇವತಿ ತಂದೆ ಜಯಣ್ಣ ಹೆಬ್ಬಾಳ್ ಶೇ ೯೩.೭%, ತಿರುಮಲ ತಂದೆ ಪಾಮಣ್ಣ ಪೂಜಾರಿ ಶೇ ೯೨.೯೨%, ಚೈತ್ರ ತಂದೆ ಲಕ್ಷ್ಮೀಪತಿ ಶೇ ೯೨.೭೬% ಫಲಿತಾಂಶ ಪಡೆದಿದ್ದಾರೆ.
ಅದೇ ರೀತಿ ಬಿಕಾಂ ಪದವಿಯಲ್ಲಿ ಒಟ್ಟು ೬೪ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿನಿಯರು ಉನ್ನತ ಶ್ರೇಣಿ ಗಳಿಸಿದ್ದಾರೆ.
ಪೂರ್ಣಿಮಾ ತಂದೆ ಶೇಖರಪ್ಪ ಮಡಿವಾಳ್ ಶೇ ೯೭.೦೭%, ಸಾಕ್ಷಿಪ್ರಿಯ ತಂದೆ ಮಂಜುನಾಥ್ ಶೆಟ್ಟಿ ಶಹಪುರ್ ಶೇ ೯೭.೦೭%, ಯಾಮಿನಿ ತಂದೆ ಪಿ ಕೃಷ್ಣ ಶೇ ೯೬.೩೧% ಹಾಗೂ ಅನಂತಲಕ್ಷ್ಮಿ ತಂದೆ ಆನಂತ್ಲ್ಯಾಕ್ಷ್ಮಿ ದೊಡ್ಡಮಲ್ಲಪ್ಪ ಶೇ ೯೫.೮೪% ಫಲಿತಾಂಶದೊಂದಿಗೆ ಅಗ್ರಸ್ಥಾನ ಪಡೆಯುವುದರ ಮೂಲಕ ವಿದ್ಯಾರ್ಥಿನಿಯರು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೇಮಂತರಾಜ ಜಿ. ಕಲ್ಮಂಗಿ, ಕಾರ್ಯಾಧ್ಯಕ್ಷರಾದ ನಾಗರಾಜ ಎಸ್ ಗುತ್ತೇದಾರ, ಉಪಾಧ್ಯಕ್ಷರಾದ ಡಾ. ಎಂ.ಆರ್ ಮಂಜುಸ್ವಾಮಿ, ಕಾರ್ಯದರ್ಶಿಗಳಾದ ಬಸವರಾಜ ಎಲ್ ಕೇಸರಹಟ್ಟಿ, ಕೋಶಾಧ್ಯಕ್ಷರಾದ ಮಲ್ಲಿಕಾರ್ಜುನ ಸಿಂಗನಾಳ, ನಿರ್ದೇಶಕರಾದ ಡಾ. ಅಮಿತ್ ಕುಮಾರ್ ರೆಡ್ಡಿ ಹಾಗೂ ಪ್ರಾಚಾರ್ಯರಾದ ಬಸಪ್ಪ ಶಿರಿಗೇರಿ ಹಾಗೂ ಮಹಾವಿದ್ಯಾಲಯದ ಎಲ್ಲಾ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಅವರ ಭವಿಷ್ಯ ಉಜ್ವಲವಾಗಲೆಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯು ವಿಶೇಷವಾಗಿ ಪ್ರೋತ್ಸಾಹಿಸಿದ ಪಾಲಕರಿಗೆ ಹಾಗೂ ಉತ್ತಮ ಬೋಧನೆ ಮಾಡಿ ವಿದ್ಯಾರ್ಥಿನಿಯರ ಸಾಧನೆಗೆ ಕಾರಣರಾದ ಉಪನ್ಯಾಸಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದೆ.
ಮಾಹಿತಿಗಾಗಿ
ಬಸಪ್ಪ ಶಿರಿಗೇರಿ
ಪ್ರಾಚಾರ್ಯರು,
ಸಂಕಲ್ಪ ಪ್ರಥಮ ದರ್ಜೆ ಮಹಾವಿದ್ಯಾಲಯ ಗಂಗಾವತಿ.
ಅeಟಟ: ೯೦೧೯೧೯೮೦೬೭