ಶ್ರೀ ದತ್ತ ಜಯಂತಿ ಉತ್ಸವ ಪ್ರಯುಕ್ತ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

ಗಂಗಾವತಿ: ನಗರದ ಶಂಕರ ಮಠದಲ್ಲಿ. ೧೫ನೇ ವರ್ಷದ ಶ್ರೀ ದತ್ತಾತ್ರೇಯ ಜಯಂತೋತ್ಸವ ಪ್ರಯುಕ್ತ ಶನಿವಾರದಂದು ಪೂರ್ವಭಾವಿ ಸಭೆಯನ್ನು. ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಜಗನ್ನಾಥ ಅಳವಂಡಿಕರ್ ವಹಿಸಿ ಮಾತನಾಡಿ ತ್ರಿಮೂರ್ತಿ ಅವತಾರ ಶ್ರೀ ದತ್ತಾತ್ರೇಯ ಗುರುಗಳ ಜಯಂತೋತ್ಸವ ಡಿಸೆಂಬರ್ ೧೪ ಮತ್ತು ೧೫ರಂದು ಎರಡು ದಿನಗಳ ಕಾಲ ಸಂಭ್ರಮ ಹಾಗೂ ಭಕ್ತಿ ಪೂರ್ವಕವಾಗಿ ಆಚರಿಸಲಾಗುತ್ತಿದ್ದು. ಇದಕ್ಕಾಗಿ ಹಲವು ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು. ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ವೇದಮೂರ್ತಿ ಮಹೇಶಭಟ್ಟ ಜೋಶಿ ಮಾತನಾಡಿ ಧಾರ್ಮಿಕ ಆಚರಣೆಯ ಜೊತೆಗೆ ಹಂಪಿಯ ಮೋಹನ್ ಭಟ್ ಅವರಿಂದ ದತ್ತಾತ್ರೇಯ ಕುರಿತು ಉಪನ್ಯಾಸ, ಗುರು ಚರಿತ್ರೆ, ಪಾರಾಯಣ ಅತ್ಯಂತ ಅರ್ಥಪೂರ್ಣವಾಗಿ ನಡೆಸಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾರದಾ ಶಂಕರ ಭಕ್ತ ಭಜನಾ ಮಂಡಳಿಯ ಪ್ರಧಾನ ಸಂಚಾಲಕಿ ಗಾಯತ್ರಿ ಅಳವಂಡಿಕರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀ ಶಂಕರಾಚರ‍್ಯರ ಸೇವಾ ಟ್ರಸ್ಟ್ ಸದಸ್ಯರು ಭಜನಾ ಮಂಡಳಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply