ಲೋಕಕಲ್ಯಾಣಾರ್ಥವಾಗಿ ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಆಚರಣೆ.

ಗಂಗಾವತಿ: ನಗರದ ಆನೆಗುಂದಿ ರಸ್ತೆಯ ಲಲಿತ್ ಮಹಲ್ ಹೋಟಲ್ ಎದುರಿನಲ್ಲಿರುವ ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ರವಿವಾರ ಲೋಕಕಲ್ಯಾಣಾರ್ಥವಾಗಿ ದೇವಸ್ಥಾನದ ಸಕಲ ಭಕ್ತಾದಿಗಳಿಂದ ದೀಪ ಬೆಳಗಿಸುವ ಮೂಲಕ ಕಾರ್ತಿಕೋತ್ಸವವನ್ನು ವಿಜೃಂಭಣೆಯಿAದ ನೆರವೇರಿಸಲಾಯಿತು ಎಂದು ಶ್ರೀ ತ್ರಯಂಬಕೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿಯಾದ ಆದಯ್ಯಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ವಕೀಲರು ದೀಪ ಬೆಳಗಿಸುವುದರ ಮೂಲಕ ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡು, ಕರುಣಾಳು ಬಾ ಬೆಳಕೆ ಮುಸುಕಿದೆ ಮಬ್ಬಿನಲಿ ಎಂಬ ಹಾಡಿನ ಮೂಲಕ ಕತ್ತಲಿನಿಂದ ಬೆಳಕಿನೆಡೆಗೆ ಹೋಗುವ ಉದ್ದೇಶದಿಂದ ಇಂದು ತ್ರಯಂಬಕೇಶ್ವರನ ಸನ್ನಿಧಿಯಲ್ಲಿ ಈ ದೀಪ ಬೆಳಗಿಸುವ ಮೂಲಕ ಕಾರ್ತಿಕೋತ್ಸವ ಆಚರಿಸಲಾಗುತ್ತಿದೆ. ಈ ತ್ರಯಂಬೇಶ್ವರ ದೇವಸ್ಥಾನದ ಅಭಿವೃದ್ಧಿಯಾಗಬೇಕಾಗಿದೆ ಹಾಗೂ ಕಲ್ಯಾಣ ಮಂಟಪವನ್ನು ಕೂಡಾ ನಿರ್ಮಾಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ಶಾಸಕರ ಗಮನಕ್ಕೆ ತರಲಾಗುವುದು ಎಂದರು. ನಂತರ ಸತತ ಎರಡನೇ ಬಾರಿ ವಕೀಲರ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಮಂಜುನಾಥ ಹೆಚ್.ಎಂ ವಕೀಲರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ರೇವಣಸಿದ್ದಯ್ಯ ತಾತನವರು, ಶಂಕರಯ್ಯಸ್ವಾಮಿ ಹಿರೇಮಠ, ಎಸ್.ಬಿ ಹಿರೇಮಠ, ಸಂಗಯ್ಯಸ್ವಾಮಿ ಸಂಶೀಮಠ, ಮಲ್ಲಯ್ಯಸ್ವಾಮಿ ಹಿರೇಮಠ, ಕುಮಾರಸ್ವಾಮಿ ವಿಭೂತಿ, ಅಮರೇಶ ಸೊಪ್ಪಿಮಠ, ಗಿರೀಶ ಬಳ್ಳಾರಿ, ಶಿವಾನಂದಸ್ವಾಮಿ ಟಿ.ಎಂ., ರಮೇಶ ಹಿರೇಮಠ, ಗಂಗಾಧರ ಕೋರಿಯರ್, ಮಹಿಳಾ ಘಟಕದ ಸದಸ್ಯರಾದ ಶ್ರೀಮತಿ ಸಹನಾ ಹಿರೇಮಠ, ಲಕ್ಷಿ ಗೌಡರ್, ಲಕ್ಷ್ಮಿದೇವಿ, ಸಂಗೀತಾ ಹಿರೇಮಠ, ಶ್ರೀಮತಿ ಸರಸ್ವತಿ ಮಂಜುನಾಥ, ಕಸ್ತೂರಿ, ರೇಣುಕಾ ವಿಭೂತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು ಶ್ರೀ ತ್ರಯಂಬಕೇಶ್ವರ ದರ್ಶನ ಪಡೆದರು.

Leave a Reply