ಶ್ರೀ ಶಾರದಾ ಶರನ್‌ ನವರಾತ್ರಿ ಪ್ರಯುಕ್ತ ಅಕ್ಷರಭ್ಯಾಸ.

ಶ್ರೀ ಶಾರದಾ ಶರನ್‌ ನವರಾತ್ರಿ ಪ್ರಯುಕ್ತ ಅಕ್ಷರಭ್ಯಾಸ.

ಗಂಗಾವತಿ. ನಗರದ ಶಂಕರ ಮಠದ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಸೋಮವಾರದಂದು ಅಕ್ಷರಭ್ಯಾಸವನ್ನು ಮಕ್ಕಳಿಗೆ ಆಯೋಜಿಸಲಾಗಿತ್ತು.

ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ಹಾಗೂ ವಿನಾಯಕ್ ಭಟ್ ನೇತೃತ್ವದಲ್ಲಿ ಚಿಕ್ಕ ಮಕ್ಕಳ ಪಾಲಕರಿಗೆ ಮಹಾಸಂಕಲ್ಪ. ಗಣೇಶ ಪೂಜೆ. ಶ್ರೀ ಶಾರದಾ ದೇವಿಯ ಪೂಜೆಯೊಂದಿಗೆ ಪಾಲಕರ ಮಕ್ಕಳೊಂದಿಗೆ ಅಕ್ಷರಭ್ಯಾಸವನ್ನು ಭಕ್ತಿಯಿಂದ ನಡೆಸಲಾಯಿತು.

ಈ ಸಂದರ್ಭದಲ್ಲಿ ಪಾಲಕರ ಪರವಾಗಿ ಕಿನ್ನಾಳ ಗ್ರಾಮದಿಂದ ಆಗಮಿಸಿದ ಅನಿಲ್ ಕುಮಾರ್ ದಂಪತಿಗಳು ಮಾತನಾಡಿ, ಗಂಗಾವತಿಯ ಶೃಂಗೇರಿ ಶಂಕರ ಮಠವು ಶೃಂಗೇರಿ ಶಾರದಾಂಬ ಪದ್ಧತಿಗೆ ಅನುಗುಣವಾಗಿ ದೇವಸ್ಥಾನದ ಅರ್ಚಕರು ಕ್ರಮಬದ್ಧವಾಗಿ ಅಕ್ಷರಭ್ಯಾಸ ನಡೆಸಿದ್ದು ಸಂತಸದಾಯಕವಾಗಿದೆ. ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಯಾವುದೇ ಕೊರತೆ ಆಗದಂತೆ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಸದಸ್ಯರುಗಳು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದ್ದಾರೆ. ಒಟ್ಟಾರೆ ಶ್ರೀ ಶಾರದಾಂಬೆಯ ಅನುಗ್ರಹ ಎಲ್ಲಾ ಮಕ್ಕಳಿಗೆ ಲಭಿಸಲಿ ಎಂದು ಹೇಳಿದರು. ಒಟ್ಟು ಹತ್ತಕ್ಕೂ ಮಕ್ಕಳು ಹಾಗೂ ಪಾಲಕರು ಅಕ್ಷರಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ರಾಘವೇಂದ್ರ ಜೋಶಿ ಪಾರಾಯಣ ನಡೆಸಿದರು, ಧರ್ಮದರ್ಶಿ ನಾರಾಯಣರಾವ್ ವೈದ್ಯ ವ್ಯವಸ್ಥಾಪಕ Chart ಅಳವಂಡಿ. ಶ್ರೀನಿವಾಸ್ ಕರಮುಡಿ. ಶಿಕ್ಷಕಿ ಕವಿತಾ ದಿಗ್ಗಾವಿ ಉಪಸ್ಥಿತರಿದ್ದರು.

Leave a Reply