ಗಂಗಾವತಿ: ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಮ್ ಹಾಗೂ ಭಾರತ ವಿಕಾಸ ಸಂಗಮ ಮತ್ತು ವಿಕಾಸ ಅಕಾಡೆಮಿ ಕಲಬುರ್ಗಿ ಇವರು ಜನವರಿ-೨೯ ರಿಂದ ಫೆಬ್ರವರಿ-೦೬ ರವರೆಗೆ ಸೇಡಮ್‌ನ ಕಲಬುರ್ಗಿ ರಸ್ತೆಯ ಪ್ರಕೃತಿನಗರ ಬೀರನಹಳ್ಳಿಯಲ್ಲಿ ಜರುಗಿದ ೭ನೇ ಭಾರತೀಯ ಸಂಸ್ಕೃತಿ ಉತ್ಸವ ಮತ್ತು ಕೊತ್ತಲ ಸ್ವರ್ಣ ಜಯಂತಿಯ ಹಿನ್ನೆಲೆಯಲ್ಲಿ ಜನೇವರಿ-೦೪ ರಂದು ಆಯೋಜಿಸಿದ್ದ ಸಮಾರಂಭದಲ್ಲಿ ಶಿಕ್ಷಣ, ಸಮಾಜಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಪರಿಗಣಿಸಿ ಗಂಗಾವತಿಯ ಲಕ್ಷ್ಮೀಕಾಂತ್ ಹೇರೂರು ಅವರಿಗೆ ಕಲ್ಯಾಣ ಕರ್ನಾಟಕ ಗೌರವ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಲಕ್ಷ್ಮೀಕಾಂತ ಹೇರೂರು ಅವರು ಗೌರವ ಸ್ವೀಕರಿಸಿ, ೨೪೦ ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಆಯೋಜಿಸಿದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಮಕ್ಕಳ ಲೋಕ, ವಿಜ್ಞಾನ ಲೋಕ, ಕೃಷಿ ಲೋಕ, ತತ್ವ ಲೋಕ, ಕಾಯಕ ಲೋಕ, ಬಾಲ ಲೋಕ, ಸ್ವದೇಶಿ ಉದ್ಯಮ ಲೋಕ, ಉದ್ಯಮ ಲೋಕ, ಜ್ಞಾನಲೋಕ ಮುಂತಾದ ವಿವಿಧ ಆಯಾಮಗಳ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ನಿಜಕ್ಕೂ ಅವಿಸ್ಮರಣೀಯವಾದದ್ದು. ನನ್ನ ಪ್ರತಿಭೆಗೆ ಸದಾ ಪ್ರೋತ್ಸಾಹ, ಬೆಂಬಲ, ಮಾರ್ಗದರ್ಶನ ನೀಡುತ್ತಿರುವ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಎಲ್ಲಾ ಆಡಳಿತ ಮಂಡಳಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದರು.
ಇವರಿಗೆ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆ ತಿಳಿಸಿದ್ದಾರೆ.


