ಸೇಬು ಹಣ್ಣಿನ ಸೇವನೆ ಆರೋಗ್ಯ ತುಂಬಾ ಒಳ್ಳೆಯದು. ಸೇಬು ಹಣ್ಣನ್ನು ನೇರವಾಗಿ ಸೇವಿಸಬಹುದು ಹಾಗೂ ಜ್ಯೂಸ್ ಮಾಡಿ ಕುಡಿಯಲೂ ಬಹುದು, ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯಕ್ಕೆ ಪ್ರಯೋಜನ ಎಂಬುದನ್ನು ನೋಡೋಣ.
ಪ್ರತಿ ದಿನ ಒಂದು ಸೇಬು ಹಣ್ಣು ಸೇವಿಸುವುದರಿಂದ ಆಸ್ಪತ್ರೆಯಿಂದ ದೂರವಿರಬಹುದು ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಸೇಬು ಹಣ್ಣಿಗೆ ಅನೇಕ ಕಾಯಿಲೆಗಳು ಬರದಂತೆ ತಡೆಯುವ ಶಕ್ತಿ ಇದೆ. ಅಂದರೆ ಹಣ್ಣುಗಳನ್ನು ಸೇವನೆ ಮಾಡುವುದು ಅಥವಾ ಅದರ ರಸ, ಜ್ಯೂಸ್ ಮಾಡಿ ಕುಡಿಯುವುದೋ ಎಂದು ಯೋಚಿಸುವವಋ ಸಂಖ್ಯೆಯೇ ಹೆಚ್ಚಾಗಿದೆ.
ಸಾಮಾನ್ಯವಾಗಿ ಆರೋಗ್ಯ ತಜ್ಞರು ಹೇಳುಂತೆ ಸೇಬು ಹಣ್ಣಿನ ರಸಕ್ಕಿಂತ ಹಣ್ಣುಗಳನ್ನು ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಸೇಬು ಹಣ್ಣುಗಳನ್ನು ತಿನ್ನುವುದರಿಂದ ಫೈಬರ್, ಜೀವಸತ್ವ ಮತ್ತು ಖನಿಜಗಳು ಸಿಗುತ್ತವೆ. ಆದರೆ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಇದಕ್ಕೆ ಸೇರಿಸುವ ಸಕ್ಕರೆಯಿಂದ ಕ್ಯಾಲೊರಿ ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸೇಬು ಹಣ್ಣುಗಳ ರಸದಲ್ಲಿ ಫೈಬರ್ ಅಂಶವೂ ಇರುವುದಿಲ್ಲ. ಸೇಬು ಹಣ್ಣು ಕಬ್ಬಿಣದಿಂದ ಸಮೃದ್ಧವಾಗಿದ್ದು, ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತದೆ.
Like this:
Like Loading...
Related