ಗಂಗಾವತಿ: ರಂಜು ಆರ್ಟ್ಸ್ ಯೋಗ ಟ್ರಸ್ಟ್ ಹಂಪಿ ಮತ್ತು ಆಯುಷ್ ಇಲಾಖೆ ವಿಜಯನಗರ ಜಿಲ್ಲಾ ಸಂಘಟಿತ ೨ನೇ ರಾಜ್ಯ ಮುಕ್ತ ಯೋಗಾಸನ ಚಾಂಪಿಯನ್‌ಶಿಪ್ ಫೆಬ್ರವರಿ-೧೬ ಭಾನುವಾರ ಹಂಪಿಯ ಶಿವರಾಮ ಅವಧೂತ ಮಂಟಪದಲ್ಲಿ ನಡೆಯಿತು.
ಈ ಚಾಂಪಿಯನ್‌ಶಿಪ್‌ನಲ್ಲಿ ಗಂಗಾವತಿಯ ಪ್ರಜ್ವಲ ಯೋಗ ಕೇಂದ್ರದ ೧೪ ಸ್ಪರ್ದಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು ಎಂದು ಯೋಗ ತರಬೇತಿದಾರರಾದ ಎನ್. ಭಾನುಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದರು.
ಅದರಲ್ಲಿ ೮ ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸಾನಿಧ್ಯ, ದ್ವಿತೀಯ ಸ್ಥಾನವನ್ನು ಆವಂತಿಕಾ ಪಡೆದರೆ, ಬಾಲಕರ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಹೃತ್ವಿಕ್ ಪಡೆದರು. ಅದೇರೀತಿ ೮ ರಿಂದ ೧೦ ವಯಸ್ಸಿನ ವರ್ಗದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬಿ. ನಿತಿಕಾ, ದ್ವಿತೀಯ ಸ್ಥಾನವನ್ನು ಶ್ರೇಯಾ ಕುಲಕರ್ಣಿ ಪಡೆದರೆ, ಬಾಲಕರ ವಿಭಾಗದಲ್ಲಿ ನಿತಿನ್ ಎರಡನೇ ಸ್ಥಾನ ಪಡೆದು ಚಾಂಪಿಯನ್ ಆಪ್ ದಿ ಚಾಂಪಿಯನ್ ಆಗಿ ಹಂಪಿ ಕುಮಾರ ಎನ್ನುವ ಪ್ರಶಸ್ತಿ ಪಡೆದರು. ಅದೇರೀತಿ ೧೧ ರಿಂದ ೧೪ ವಯಸ್ಸಿನ ವರ್ಗದಲ್ಲಿ ಪ್ರಥಮ ಸ್ಥಾನವನ್ನು ಕೆ ಪ್ರಬಂಜನ್ ಪಡೆದರು. ಈ ಸ್ಪರ್ಧೆಯಲ್ಲಿ ಇನ್ನಿತರ ವಿದ್ಯಾರ್ಥಿಗಳಾಗಿ ಭಾರ್ಗವಿ, ವಿನಯ್, ಅನುಷಾ, ವಿಶಾಲ್, ನಿಹಾರಿಕಾ, ಎನ್ ಚೇತನ್ ಕೃಷ್ಣಾ ರೆಡ್ಡಿ, ಕೆ ಅನನ್ಯಾ ಭಾಗವಹಿಸಿ ಪ್ರಮಾಣಪತ್ರ ಮತ್ತು ಪದಕ ಪಡೆದರು.
ಈ ವಿದ್ಯಾರ್ಥಿಗಳಿಗೆ ಪ್ರಗತಿ ಕ್ರೀಡಾ ಅಕಾಡೆಮಿಯ ಅಧ್ಯಕ್ಷರಾದ ಅಬ್ದುಲ್ ರಜಾಕ್ ಟೇಲರ್, ನಿರ್ದೇಶಕರಾದ ಜಗನ್ನಾಥ ಆಲಂಪಲ್ಲಿ ಅವರು, ಯೋಗ ತರಬೇತುದಾರರಾದ ಎನ್. ಭಾನುಪ್ರಸಾದ್ ಮತ್ತು ಸಹಕರಿಸಿದ ಪೋಷಕರಿಗೆ ಅಭಿನಂದನೆಗಳನ್ನು ತಿಳಿಸಿದರು.