ಹಂಪಿ ಉತ್ಸವದಲ್ಲಿ ವಿಜಯನಗರ ಸಾಮ್ರಾಜ್ಯದ ಕುರಿತ “ಇನ್ ದಿ ಎಂಪೈರ್ ಆಫ್ ದಿ ಗಾಡ್ ಕಿಂಗ್” ಪುಸ್ತಕ ಗಣ್ಯಮಾನ್ಯರಿಂದ ಬಿಡುಗಡೆ

ಗಂಗಾವತಿ: ವಿಶ್ವವಿಖ್ಯಾತ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಆನೆಗುಂದಿ ಸಂಸ್ಥಾನದ ಮಹಾರಾಜರಾಗಿರುವ ಶ್ರೀ ಕೃಷ್ಣದೇವರಾಯ ಹಾಗೂ ಶ್ರೀಮತಿ ರತ್ನಶ್ರೀರಾಯ್ ಅವರ ಪುತ್ರರಾದ ತಿರುಮಲ ವೆಂಕಟದೇವರಾಯರು ವಿಜಯನಗರ ಸಾಮ್ರಾಜ್ಯದ ವೈಭವ ಕುರಿತು ಬರೆದಿರುವ “ಇನ್ ದಿ ಎಂಪೈರ್ ಆಫ್ ದಿ ಗಾಡ್ ಕಿಂಗ್” ಪುಸ್ತಕ ಫೆಬ್ರವರಿ-೨೮ ರ ಹಂಪಿ ಉತ್ಸವದಲ್ಲಿ ವಸತಿ ಹಾಗೂ ವಕ್ಫ್ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚವರಾದ ಶಿವರಾಜ ತಂಗಡಗಿಯವರು ಸೇರಿದಂತೆ ಗಣ್ಯಮಾನ್ಯರಿಂದ ಬಿಡುಗಡೆಯಾಯಿತು.

ತಿರುಮಲ ವೆಂಕಟರಾಯರು ಶ್ರೀಕೃಷ್ಣದೇವರಾಯರ ೨೦ನೇ ವಂಶಸ್ಥರು ಮತ್ತು ಆನೆಗುಂದಿ ಸಂಸ್ಥಾನದಲ್ಲಿ ವಿಜಯನಗರದ ಅರಸರ ಉತ್ತರಾಧಿಕಾರಿಯಾಗಿದ್ದು, ಇವರು ಆನೆಗುಂದಿಯ ರಾಜಾ ಶ್ರೀಕೃಷ್ಣದೇವರಾಯರ ಮಗ ಮತ್ತು ರಾಜ ಶ್ರೀ ಅಚ್ಯುತ ದೇವರಾಯರ ಮೊಮ್ಮಗರಾಗಿದ್ದಾರೆ. ಇವರು ಇಂಗ್ಲೆಂಡ್‌ನ ಡರ್ಹಾಮ್ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಪದವಿ ಪಡೆದಿದ್ದಾರೆ.

ಇದು ಇವರ ಮೊದಲ ಪುಸ್ತಕವಾಗಿದ್ದು, ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಆಕರ್ಷಕ ನಿರೂಪಣೆಯ ರೂಪದಲ್ಲಿ ಹೇಳುವ ಗುರಿಯನ್ನು ಪುಸ್ತಕ ಹೊಂದಿದೆ.

ಸದರಿ ಪುಸ್ತಕವು ಮಾರ್ಚ್ ಕೊನೆಯವಾರದ ನಂತರ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

Leave a Reply