ಗಂಗಾವತಿಯ ವಿಸ್ಡಂ ಎಲಿಮೆಂಟರಿ ಶಾಲೆಯಲ್ಲಿ ವಿನೂತನ ವಿದ್ಯಾರ್ಥಿಗಳ ನೇತೃತ್ವದ ಸಮ್ಮೇಳನ

ಗಂಗಾವತಿ: ಫೆಬ್ರವರಿ-೨೮ ಶುಕ್ರವಾರದಂದು ಜಯನಗರದಲ್ಲಿರುವ ವಿಸ್ಡಂ ಎಲಿಮೆಂಟರಿ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ನೇತೃತ್ವದ ಸಮ್ಮೇಳನ ಕಾರ್ಯಕ್ರಮ ಎಂದರೆ ವಿದ್ಯಾರ್ಥಿಗಳು ಒಂದು ದಿನದ ಶಿಕ್ಷಕರಾಗುತ್ತಾರೆ ಮತ್ತು ಅವರು ತಮ್ಮ ಆಯ್ಕೆಯ ವಿಷಯದ ಬಗ್ಗೆ ಒಂದು ಪರಿಕಲ್ಪನೆಯನ್ನು ವಿವರಿಸುತ್ತಾರೆ ಅಥವಾ ಸಣ್ಣ ಪ್ರಾತ್ಯಕ್ಷಿಕೆಯನ್ನು ನೀಡುತ್ತಾರೆ.

ಭಾಗವಹಿಸುವಾಗ ವಿದ್ಯಾರ್ಥಿಗಳು ಒಂದು ಪರಿಕಲ್ಪನೆಯನ್ನು ಉತ್ತಮವಾಗಿ ಕಲಿಯಲು ಪ್ರೇರೇಪಿಸಲ್ಪಡುತ್ತಾರೆ. ಪ್ರೇಕ್ಷಕರ ಮುಂದೆ ನಿರಾಳವಾಗಿರುವುದು ಕಷ್ಟ. ಅದಕ್ಕಾಗಿಯೇ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಅವರಿಗೆ ಸವಾಲು ಹಾಕುವ ಮೂಲಕ ಅವರ ಸಂವಹನ ಮತ್ತು ಪ್ರಸ್ತುತಿ ಕೌಶಲ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ವಿದ್ಯಾರ್ಥಿಗಳು ಸಾಮಾನ್ಯ ಪಠ್ಯಪುಸ್ತಕಗಳನ್ನು ಮೀರಿ ಯೋಚಿಸಲು ಪ್ರೋತ್ಸಾಹಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಿಷಯವನ್ನು ಆರಿಸಿಕೊಂಡು ಅದನ್ನು ತಮಗೆ ಇಷ್ಟವಾದ ಸೃಜನಶೀಲ ರೀತಿಯಲ್ಲಿ ಪ್ರಸ್ತುತಪಡಿಸುತ್ತಾರೆ.

ಈ ಒಂದು ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ಪೋಷಕರಾಗಿ ಆಗಮಿಸಿದ ಡಾ|| ಹೇಮಲತಾ ಹಾಗೂ ಡಾ|| ನಾಗರಾಜ್ ಅವರು ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಈ ಒಂದು ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಕಾರ್ಯದರ್ಶಿಗಳಾದ ರಾಜಕಿರಣ್ ಇಂಗಳಹಳ್ಳಿ ಹಾಗೂ ಶ್ರೀಮತಿ ಐಶ್ವರ್ಯ ರಾಜಕಿರಣ್ ಇಂಗಳಹಳ್ಳಿ ಹಾಗೂ ನಮ್ಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅರುಣದೇವಿ ಮೇಡಂ ಅವರು ಕೂಡ ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ನೀಡುವುದರ ಮುಖಾಂತರ ಪ್ರೋತ್ಸಾಹಿಸಿದರು.

ಹಾಗೆಯೇ ವಿದ್ಯಾರ್ಥಿಗಳ ನೇತೃತ್ವ ಸಮ್ಮೇಳನದ ಕಾರ್ಯಕ್ರಮದಲ್ಲಿ ಸಮುದಾಯ ಸಹಾಯಕರು, ಮಕ್ಕಳು ವಿವಿಧ ವೇಷಭೂಷಣಗಳನ್ನು ಧರಿಸಿ ತಮಗೆ ಕೊಟ್ಟಿರುವಂತಹ ವಿಷಯಗಳ ಬಗ್ಗೆ ವಿವರಿಸಿ ಪೋಷಕರ ಗಮನ ಸೆಳೆದರು.

ತದನಂತರ ಎರಡನೆಯ ತರಗತಿಯ ಮಕ್ಕಳು ಭಾರತದ ಏಳು ಅದ್ಭುತಗಳ ಬಗ್ಗೆ ವಿವರಿಸಿದರು. ಅದರಲ್ಲಿ ತಾಜ್‌ಮಹಲ್ ಹಾಗೂ ಹಂಪಿಯ ಚಿತ್ರಗಳು ತುಂಬಾ ಆಕರ್ಷಣೀಯವಾಗಿ ಗಮನಿಸಳೆದವು ಹಾಗೂ ಸಂಚಾರ ಸಂಕೇತಗಳು, ಪ್ರಾಣಿಗಳ ಆಶ್ರಯ, ಗ್ರಾಮೀಣ ಮತ್ತು ನಗರಗಳು ಹಾಗೂ ವಿಧಾನಸೌಧದ ಮಾದರಿಗಳು ಕೇಂದ್ರಬಿಂದುಗಳಾಗಿ ನೋಡುಗರ ಗಮನಸೆಳೆದವು.
ಹಾಗೆ ಮಕ್ಕಳು ಕೇವಲ ಒಂದು ವಿಷಯಕ್ಕೆ ಸೀಮಿತವಾಗದೆ ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜ ವಿಜ್ಞಾನ, ಕಂಪ್ಯೂಟರ್, ವಿಷಯಗಳಲ್ಲಿ ತೊಡಗಿಸಿಕೊಂಡು ತಮ್ಮ ಚಾಕಚಾತುರ್ಯವನ್ನು ಹೊರಹಾಕಿದರು.

ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿದಂತಹ ಪೋಷಕರು ಮಕ್ಕಳು ತಯಾರಿಸಿದ ಎಲ್ಲಾ ಮಾದರಿಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply