ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ 50ನೇ ವರ್ಷದ ಶ್ರೀ ಶರಣಬಸವೇಶ್ವರ ಪುರಾಣ, ಸಾಮೂಹಿಕ ವಿವಾಹ ಹಾಗೂ ಜಾತ್ರಾ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.

ಗಂಗಾವತಿ: ತಾಲೂಕಿನ ಡಣಾಪೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಾನಗಲ್ ಶ್ರೀಗಳ 11 ದಿನದ ಪುರಾಣ ಕಾರ್ಯಕ್ರಮ ಜರುಗಿಸಲಾಯಿತು.

ಜಾತ್ರಾ ದಿನದ ಅಂಗವಾಗಿ ಶರಣ ಬಸವೇಶ್ವರ ಮೂರ್ತಿಗೆ ಪೂಜಾ ಪುನಸ್ಕಾರ ಹಾಗೂ ಹೋಮ ಹವನಗಳನ್ನು ಅರ್ಚಕರಿಂದ ನೆರೆವೆರಿಸಲಾಯಿತು.

ಬೆಳಗಿನ ಜಾವ ವದುವರರನ್ನು ಕರೆತಂದು ಡಣಾಪೂರ ಗ್ರಾಮದ ತುಂಗಾಭದ್ರ ನದಿಗೆ ತೆರಳಿ ಕುಂಭಕಳಸಗಳಿಂದ ಪೂಜಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಗ್ರಾಮದ ರಾಜ ಬೀದಿಯಲ್ಲಿ ಸಕಲವಾದ್ಯವೃಂದಗಳಿಂದ, ಡೊಳ್ಳು, ವಿವಿದ ಮೇಳಗಳಿಂದ ಶರಣ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಸಕಲ ಭಕ್ತಾದಿಗಳೊಳಗೊಂಡ ಧರ್ಮ ಸಭೆಯಲ್ಲಿ ಮೂರು ನವಜೋಡಿಗಳು ಸಾಮೂಹಿಕ ವಿವಾಹಿತರಾಗಿ ಶ್ರೀ ಶರಣ ಬಸವೇಶ್ವರ ಭಕ್ತಿಗೆ ಪಾತ್ರರಾದರು.  ಬಳಿಕ ಶರಣ ಬಸವೇಶ್ವರ ಜಾತ್ರಮಹೋತ್ಸವಕ್ಕೆ ಆಗಮಿಸಿದ ಸಕಲ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರೆವೆರಿಸಲಾಯಿತು. ವಿಶೇಷವಾಗಿ ಅನ್ನಸಂತಪರ್ಣೆಯಲ್ಲಿ ಪ್ಲಾಸ್ಟಿಕ್ ಮುಕ್ತವಾಗಿ ಭಕ್ತಾದಿಗಳಿಗೆ ನೀರನ್ನು ಲೋಟದಲ್ಲಿ ಸರಬರಾಜು ಮಾಡಿ ಪ್ಲಾಸ್ಟಿಕ್ ಮುಕ್ತ ಮಾಡಲಾಗಿದ್ದು ವಿಶೇಷ, ಗ್ರಾಮದ ಸಕಲರು ಭಾಗಿಯಾಗಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನೆರೆವೆರಿಸಿದರು.

ಸಂಜೆ ಶ್ರೀಶರಣ ಬಸವೇಶ್ವರ ಮಹಾರಥೋತ್ಸವಕ್ಕೆ ಹೆಬ್ಬಾಳ ಶ್ರೀಗಳು ಚಾಲನೆ ನೀಡಿದರು. ಈ ವೇಳೆ ತಿರುಪತ್ತೆಪ್ಪ ತಾತನವರು, ಅಯೋದ್ಯ ಹಾಲಮಠ ಗುರುಗಳು ಗ್ರಾಮದ ಹಿರಿಯರು ಭಾಗಿ ಇದ್ದು ಯಶಸ್ವಿಗೊಳಿಸಿದರು.

Leave a Reply