ಗಂಗಾವತಿ: ಗಂಗಾವತಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ವೇದಿಕೆಗೆ ದಿವಂಗತ ರಾಜಾ ಶ್ರೀರಂಗದೇವರಾಯಲು ರವರ ಹೆಸರನ್ನು ಇಟ್ಟಿದ್ದಕ್ಕಾಗಿ ಸಮ್ಮೇಳನದ ಸರ್ವಾಧ್ಯಕ್ಷರಾದ ಲಿಂಗಾರೆಡ್ಡಿ ಆಲೂರು ಮತ್ತು ಗಂಗಾವತಿಯ ಜನಪ್ರಿಯ ಶಾಸಕರಾದ ಜನಾರ್ಧನ್‌ರೆಡ್ಡಿ ಅವರಿಗೆ ಸಂಗಾಪುರ ಗ್ರಾಮದ ಶ್ರೀರಂಗದೇವರಾಯ ಕಾಲೋನಿಯ ನಾಗರಿಕರು, ರೈತರು ಹಾಗೂ ಶ್ರೀರಂಗದೇವರಾಯಲುರವರ ಅಭಿಮಾನಿಗಳು ಗೌರವಪೂರ್ವಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜವಂಶಸ್ಥೆ ಶ್ರೀಮತಿ ಲಲಿತಾರಾಣಿಯವರು ಈ ಜಿಲ್ಲಾ ಸಾಹಿತ್ಯ ಸಮ್ಮೇಳನದ ವೇದಿಕೆಗೆ ದಿವಂಗತ ಶ್ರೀರಂಗದೇವರಾಯಲು ಅವರ ಹೆಸರನ್ನು ಇಟ್ಟಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ಅಜಾತಶತೃ ದಿವಂಗತ ಶ್ರೀರಂಗದೇವರಾಯಲುರವರು ಕನಕಗಿರಿ, ಗಂಗಾವತಿ ವಿಧಾನಸಭಾ ಕ್ಷೇತ್ರಗಳಲ್ಲಿ ಮಾಡಿದ ಕೆಲಸಗಳು ಇವತ್ತಿಗೂ ಚಿರಸ್ಮರಣೀಯವಾಗಿದ್ದು, ಅವರ ಹೆಸರನ್ನು ಇವತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸ್ಮರಣೆ ಮಾಡಿಕೊಂಡು ವೇದಿಕೆಗೆ ಹೆಸರಿಟ್ಟಿರೋದು ಬಹಳ ತುಂಬಾ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೆಚ್.ಎಂ. ಸಿದ್ದರಾಮಸ್ವಾಮಿ, ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ಮುಖಂಡರಾದ ಹೆಚ್.ಎಂ. ವಿರುಪಾಕ್ಷಯ್ಯ ಸ್ವಾಮಿ ಹಾಗೂ ಸಂಗಾಪುರ ಗ್ರಾ.ಪಂ ಉಪಾಧ್ಯಕ್ಷರಾದ ಈ ರಾಘು, ಅಗಸರ ಯಮನೂರು, ರವಿ ನಾಯಕ್, ಉಪ್ಪಾರ್ ಕೃಷ್ಣ, ಅಡವಿ ಕೃಷ್ಣ, ಗೋವಿಂದ, ಶ್ರೀನಿವಾಸಬಾಬು, ಮಲ್ಲಾಪುರ ಶರಣಪ್ಪ, ಪರಶುರಾಮ ಹಾಗೂ ಇನ್ನಿತರ ಗ್ರಾಮದ ಮುಖಸ್ಥರು ಉಪಸ್ಥಿತರಿದ್ದರು.