ರಾಂಪುರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರ ೧೩೪ನೇ ಹಾಗೂ ಡಾ. ಬಾಬು ಜಗಜೀವನರಾಮ್‌ರವರ ೧೧೮ನೇ ಜನ್ಮದಿನಾಚರಣೆ ಸಮಾರಂಭ ಅದ್ಧೂರಿ ಆಚರಣೆ.

ರಾಂಪುರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರ ೧೩೪ನೇ ಹಾಗೂ  ಡಾ. ಬಾಬು ಜಗಜೀವನರಾಮ್‌ರವರ ೧೧೮ನೇ ಜನ್ಮದಿನಾಚರಣೆ ಸಮಾರಂಭ ಅದ್ಧೂರಿ ಆಚರಣೆ.

ಗಂಗಾವತಿ: ತಾಲೂಕಿನ ರಾಂಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್‌ರವರ ೧೩೪ನೇ ಜಯಂತಿ ಹಾಗೂ ಡಾ. ಬಾಬು ಜಗಜೀವನರಾಮ್ ರವರ ೧೧೮ನೇ ಜನ್ಮ ದಿನಾಚರಣೆ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಗ್ರಾ.ಪಂ ಸದಸ್ಯರಾದ ಗೋವಿಂದಪ್ಪ ವಹಿಸಿದ್ದರು. ಗೌರವಾಧ್ಯಕ್ಷರಾಗಿ ರಾಂಪುರ ಗ್ರಾಮದ ಹನುಮಂತಪ್ಪ ಪಂಚಾಯಿತಿ ಆಗಮಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಇರಕಲ್‌ಗಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾದ ಡಾ. ಶಿವರಾಜ್ ನೆರವೇರಿಸಿ ಮುಖ್ಯ ಭಾಷಣಕಾರರಾಗಿ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಗ್ರಾಮೀಣ ಪೊಲೀಸ್ ಠಾಣೆಯ ಎ.ಎಸ್.ಐ ಚೌಹಾನ್, ಮಾದಿಗ ದಂಡೋರ ರಾಜ್ಯಾಧ್ಯಕ್ಷರಾದ ಹುಸೇನಪ್ಪ, ಮಲ್ಲಾಪುರ ಗ್ರಾ.ಪಂ ಅಧ್ಯಕ್ಷರಾದ ಛತ್ರಪ್ಪ ಭಾಗವಹಿಸಿದ್ದರು.

ಸಂಜೆ ೬ಕ್ಕೆ ಡಾ. ಬಿ.ಆರ್. ಅಂಬೇಡ್ಕರ್‌ರವರ ಜೀವನ ಚರಿತ್ರೆ “ಮಹಾನಾಯಕ” ಚಲನಚಿತ್ರ ಪ್ರದರ್ಶನ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಕೊಪ್ಪಳ ಜಿಲ್ಲಾ ಸಂಚಾಲಕರಾದ ಮರಿಯಪ್ಪ ಕುಂಟೋಜಿ, ವಸಂತರಾವ್, ನಾಗರಾಜ, ಗಂಗಾವತಿ ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಪರಮಾನಂದ, ವೆಂಕಟೇಶ, ಭೀಮಣ್ಣ, ಕರಿಯಣ್ಣ, ಮಧು, ಭಾಗ್ಯವ್ವ, ಅಬ್ಬಾಸ್, ಪ್ರಸಾದ್, ಪಿ. ಶಾಂತ, ಅಗ್ರಿಪ್, ಎ. ರಾಜು, ಆಂಜನೇಯ, ದೇವರಾಜ, ರಾಜು, ಸಣ್ಣರಾಜ, ಯೇಶಿಫ್, ತಿಪ್ಪಣ್ಣ ಅರಗಿದ್ದ, ರವೀಂದ್ರ, ಅಭಿಷೇಕ, ಮಾಜಿ ಗ್ರಾ.ಪಂ ಅಧ್ಯಕ್ಷ ಕೃಷ್ಣ ಸೇರಿದಂತೆ ಊರಿನ ಗುರು ಹಿರಿಯರು ಮತ್ತು ಮಾದಿಗ ಸಮಾಜದ ಬಂಧುಗಳು, ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.

Leave a Reply