ಗಂಗಾವತಿ: ಭಾರತೀಯ ಕ್ರೀಡಾ ಪ್ರಾಧಿಕಾರದ ಶೈಕ್ಷಣಿಕ ವಿಭಾಗವಾದ ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆಯು ನಡೆಸುತ್ತಿರುವ ಎನ್.ಐ.ಎಸ್ ಕೋರ್ಸ್ ಯೋಗಾಸನ ತರಬೇತಿಗಾರರ ತರಬೇತಿಗೆ ಗಂಗಾವತಿಯ ಯೋಗ ಶಿಕ್ಷಕರಾದ ಎನ್. ಭಾನುಪ್ರಸಾದ್ ರವರು ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ.
ಈ ಯೋಗ ತರಬೇತಿಯು ಪಂಜಾಬ್‌ನ ಪಟಿಯಾಲದಲ್ಲಿ ಮುಂದಿನ ತಿಂಗಳು ಮೇ-೬ ರಿಂದ ಆರು ವಾರಗಳ ಕಾಲ ನಡೆಯಲಿದೆ.
ಈ ಯೋಗ ತರಬೇತಿಗೆ ಆಯ್ಕೆಯಾದ ಎನ್. ಭಾನುಪ್ರಸಾದ ಅವರಿಗೆ ಪ್ರಜ್ವಲ ಯೋಗ ಕೇಂದ್ರ, ಸ್ನೇಹ ಬಳಗ ಯೋಗ ಸಂಸ್ಥೆ ಹಾಗೂ ಪ್ರಗತಿ ಕ್ರೀಡಾ ಸಂಸ್ಥೆ ಗಂಗಾವತಿ ಹಾಗೂ ನಿರ್ದೇಶಕರಾದ ಶ್ರೀ ಜಗನ್ನಾಥ ಅಲಂಪಲ್ಲಿ, ಕುಟುಂಬ ವರ್ಗ ಮತ್ತು ಸ್ನೇಹಿತರು ಸೇರಿದಂತೆ ಎಲ್ಲಾ ಯೋಗ ಬಂಧುಗಳು ಹರ್ಷ ವ್ಯಕ್ತಪಡಿಸಿದ್ದಾರೆ.