ಡಿ.13 ಶುಕ್ರವಾರರಂದು ಗಂಗಾವತಿ ಚಾರಣ ಬಳಗ, ಪರಿಸರ ಸೇವಾ ಟ್ರಸ್ಟ್ ಹಾಗೂ ಕಿಷ್ಕಿಂದ ಯುವ ಚಾರಣ ಬಳಗ ವತಿಯಿಂದ ನಿರ್ಮಲಾ ತುಂಗಭದ್ರಾ ಅಭಿಯಾನ ಕುರಿತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಣವಾಳದಲ್ಲಿ ಪ್ರಾರ್ಥನಾ ಸಮಯದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದಡಿಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ನಾಡು ನುಡಿ, ಜಲಮೂಲ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ತ್ಯಾಜ್ಯ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು . ಈ ಸಮಯದಲ್ಲಿ ಶಿಕ್ಷಕರಾದ ರತ್ನಾ ಕೊಟ್ರಶೆಟ್ಟಿ, ಮೇನಕಾ, ಶರಣಪ್ಪ, ಮೈಲಾರಪ್ಪ ಬೂದಿಹಾಳ ಮತ್ತು ಅತಿಥಿ ಶಿಕ್ಷಕರು ಹಾಜರಿದ್ದರು.

