ಗಂಗಾವತಿ: ನಗರದ ಶಂಕರ ಮಠದಲ್ಲಿ ಶ್ರೀ ಶಾರದಾದೇವಿ 8ನೆಯ ವರ್ಷದ ಶರನ್ ನವರಾತ್ರಿ ಪ್ರಯುಕ್ತ ಹಾಗೂ ಶೃಂಗೇರಿ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ವಜ್ರೋತ್ಸವದ ಭಾರತಿ ಸಮಾರಂಭದ ಅಡಿಯಲ್ಲಿ ಶುಕ್ರವಾರದಂದು ಸಮಾಜಮುಖಿ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಜೊತೆಗೆ ವಿಶೇಷವಾಗಿ ನಗರದ ಮಹಿಳೆ ಒಬ್ಬಳು ಕಳೆದ ವರ್ಷ ತನ್ನ ಮಗಳ ಮದುವೆಗಾಗಿ ಹರಕೆ ಹೊತ್ತು ಹುಲಿಗೆಮ್ಮ ಎಂಬ ಮಗಳನ್ನು ಮದುವೆ ಮಾಡಿದ ಪ್ರಯುಕ್ತ ತಾಯಿ ಮತ್ತು ಮಗಳು 400 ಅಧಿಕ ಮಹಿಳೆಯರಿಗೆ ಅರಿಶಿಣ ಕುಂಕುಮ ಜೊತೆಗೆ ಹೂವು ಹಸಿರು ಬಳೆಗಳನ್ನು ಸಮರ್ಪಿಸಿದ್ದು ಅವರಲ್ಲಿನ ಶ್ರೀ ಶಾರದಾಂಬೆಯ ಬಗ್ಗೆ ಇರುವ ನಂಬಿಕೆ ಅನುಗ್ರಹ ಭಕ್ತಾದಿಗಳಿಗೆ ಸಾಕ್ಷಿ ಯಾಗಿ ಕಂಡುಬಂದಿತು
ಇದೇ ಸಂದರ್ಭದಲ್ಲಿ ಆಚಾರ ನರಸಾಪುರ ಗ್ರಾಮದ ನಾಟಿ ವೈದ್ಯ ಮಲ್ಲೇಶಪ್ಪ ಹಾಗೂ ಕುಟುಂಬಸ್ಥರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಸನ್ಮಾನಿಸಿ ಆಶೀರ್ವದಿಸಿದರು. ಸನ್ಮಾನ ಸ್ವೀಕರಿಸಿದ ಡಾ|| ಪ್ರವೀಣ್ ಮಾತನಾಡಿ, ಧರ್ಮದರ್ಶಿ ನಾರಾಯಣರಾವ್ ವೈದ್ಯ ಅವರ ವ್ಯಕ್ತಿತ್ವ ಅಪಾರವಾಗಿದ್ದು. ಅವರು ಬ್ಯಾಂಕಿನಲ್ಲಿನ ಸೇವೆ ಗ್ರಾಹಕರು ಅವರ ಮೇಲೆ ಇಟ್ಟ ಪ್ರೀತಿ ವಿಶ್ವಾಸ ಸ್ಮರಿಸಿ ಪ್ರಸ್ತುತ ಈಗ ಶ್ರೀ ಶಾರದಾ ಪೀಠದ ಧರ್ಮದರ್ಶಿಗಳಾಗಿ ಸಮಾಜದ ಎಲ್ಲಾ ವರ್ಗದ ಜನರನ್ನು ಆಹ್ವಾನಿಸಿ ಧಾರ್ಮಿಕತೆ ಜೊತೆಗೆ ಅವರ ಸಂಘಟನಾ ಮನೋಭಾವನೆಯನ್ನು ಮುಕ್ತ ಕಂಡದಿಂದ ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ನಾರಾಯಣರಾವ್ ಮಾತನಾಡಿ ಶ್ರೀದೇವಿಯ ಅನುಗ್ರಹ, ಗುರುಗಳ ಅನುಗ್ರಹದ ಮೇರೆಗೆ ಶಂಕರ ಮಠ 8ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಹಿರಿಯ ಸ್ವಾಮಿಗಳ 75 ವಜ್ರ ಮಹೋತ್ಸವ ಪ್ರಯುಕ್ತ ಧಾರ್ಮಿಕ ಆಚರಣೆ ಜೊತೆಗೆ ಸಮಾಜ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು.