ಗಂಗಾವತಿ:ತಮ್ಮ ಗಾಯನದ ಮೂಲಕ ನಾಡಿಗೆ ಸೇವೆ ಸಲ್ಲಿಸಿದ ಶ್ರೇಷ್ಠ ಗಾಯಕರನ್ನು ಗೌರವಿಸುವ ಪರಂಪರೆಯನ್ನು ಸಂಗೀತ ಸ್ವರಾಂಜಲಿ ಕರೋಕೆ ಗಾಯಕರು ಮಾಡುತ್ತಿದ್ದಾರೆ. ಪ್ರತಿ ಗಾಯಕರನ್ನು ಸ್ಮರಣೆ ಮಾಡಲಾಗುತ್ತಿದೆ ಸ್ಥಳೀಯ ಗಾಯಕ ಸಾಬ ಹೇಳಿದರು.

ನಗರದ ಪರಶುರಾಮ ದೇವರಮನೆ ಕರೋಕೆ ಸ್ಟಡಿಯೋದಲ್ಲಿ ಮಹಮದ್ ರಫಿಯವರ ನೂರನೇಯ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮಹಮದ್ ರಫಿ ದೇಶದ ಜನಪ್ರೀಯ ಸಿನೆಮಾ ಗಾಯಕರಾಗಿ ಸಮಸ್ತ ದೇಶವಾಸಿಗಳ ಮನಸ್ಸನ್ನು ಗೆದ್ದಿದ್ದ ಅಪ್ಪಟ ದೇಶಭಕ್ತರಾಗಿದ್ದರು.
ಚೈನಾ ಭಾರತದ ಯುದ್ಧ ಸಂದರ್ಭದಲ್ಲಿ ಸೈನಿಕರು ಮತ್ತು ದೇಶದ ಜನರಿಗೆ ದೇಶ ಭಕ್ತಿಗೀತೆಗಳ ಮೂಲಕ ಪ್ರೇರಣೆ ನೀಡಿದ್ದ ಮಹಮದ್ ರಫಿಯವರು ಭಾರತ ಪಾಕಿಸ್ತಾನದ ವಿಭಜನೆಯ ಸಂದರ್ಭದಲ್ಲಿ ಸಂಬಂಧಿಕರು ಪಾಕಿಸ್ತಾನಕ್ಕೆ ಸ್ಥಳಾಂತರಗೊಂಡರೂ, ಮಹಮ್ಮದ್ ರಫಿ ಭಾರತದ ನೆಲವನ್ನು ಪ್ರೀತಿಸಿ ಇಲ್ಲೆ ಉಳಿದು ಭಾರತ ದೇಶವನ್ನು ಪ್ರೀತಿಸುವ ಭಕ್ತರಾದರು.
ದೇಶದ ಎಲ್ಲಾ ಭಾಷೆಗಳ ಸಿನೆಮಾಗಳ ಹಾಡುಗಳನ್ನು ಹಾಡಿದ್ದು, ಕನ್ನಡದಲ್ಲಿಯೂ ‘ನಿನೆಲ್ಲಿ ನಡೆವೆ ದೂರು ದೂರ’ ಎನ್ನುವ ಏಕೈಕ ಹಾಡನ್ನು ಹಾಡುವ ಮೂಲಕ ಕನ್ನಡಿಗರ ಮೇಲೆ ಅಪಾರ ಪ್ರೀತಿ ಗೌರವವನ್ನು ಮಹಮದ್ ಹೊಂದಿದ್ದರು. ಇಡೀ ವಿಶ್ವದಲ್ಲಿ ರಫಿಯವರನ್ನು ಪ್ರೀತಿಸುವ ಜನರಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕರ್ನೂಲ್ ಬಾಬಾ ದರ್ಗಾ ಪೀರಾ, ಕರೋಕೆ ಗಾಯಕರಾದ ಜಗನ್ನಾಥ, ಕೆ.ನಿಂಗಜ್ಜ, ವಿಜಯಕುಮಾರ, ಕಾಜಸಾಬ ಮಣ್ಣೂರು, ಹಾಜಿ, ಐಲಿ ಮಾರುತಿ, ಯಲ್ಲಪ್ಪ ಪೋಲಕಾಲ್, ಹನುಮೇಶ, ದುರುಗೇಶ, ಶರಣಪ್ಪ, ಮೇರಾಜ್, ಬಿ. ಕೃಷ್ಣ, ಮಂಜು ಸ್ವಾಮಿ, ಹನುಮಂತಪ್ಪ, ವಿಜಯಲಕ್ಷ್ಮಿ, ದುರುಗೇಶ, ಅಂಬಿಕಾ, ಪಿ. ವಿರೇಶ, ಧೂಳ್ ವೆಂಕಟೇಶ, ನಬಿಸಾಬ, ಶಾಮಣ್ಣ, ಮಂಜುನಾಥ ಗೋಡಿನಾಳ, ಕುರುಗೋಡು ವೆಂಕಟೇಶ, ಸತ್ಯನಾರಾಯಣ, ಗುತ್ತಿ, ಮರ್ದಾನ್ ಇದ್ದರು.