ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಪುಲೆ: ರಮೇಶ್ ಗಬ್ಬುರ್

ಗಂಗಾವತಿ: ದೇಶ ಹಾಗೂ ಯಾವುದೇ ಒಂದು ಸಮಾಜ ಸರ್ವತೋಮುಖ ಅಭಿವೃದ್ಧಿಗೊಳ್ಳಬೇಕಾದರೆ. ಶಿಕ್ಷಣವನ್ನು ಕಲಿತಾಗ ಮಾತ್ರ ಸಾಧ್ಯ ಎಂದು. ಅತ್ಯಂತ ಬಲವಾಗಿ ನಂಬಿದ್ದ ಸಾವಿತ್ರಿಬಾಯಿ ಪುಲೆ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಎಂದು ಕರೆಯಲಾಗುತ್ತದೆ. ಹೀಗಾಗಿ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಿದರೂ ತಪ್ಪೇನಿಲ್ಲ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಗ್ರಂಥಪಾಲಕ ಸಂಗೀತ ಹಾಗೂ ನೃತ್ಯ ಅಕಾಡೆಮಿಯ ಸದಸ್ಯ ರಮೇಶ್ ಗಬ್ಬುರ್ ಅಭಿಪ್ರಾಯಪಟ್ಟರು.

ಶುಕ್ರವಾರದಂದು ಎಂ ಎನ್ ಎಂ. ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ ಸಾವಿತ್ರಿಬಾಯಿ ಪುಲೆ ಅವರ ಜನ್ಮೋತ್ಸವ. ಸಂಗೀತೋತ್ಸವ. ವರ್ಷದ ಕಾಲ ಉದಯವಾಣಿ ಪತ್ರಿಕೆಯನ್ನು ಶಾಲೆಗೆ ಉಚಿತವಾಗಿ ಶಾಲೆಗೆ ದೇಣಿಗೆ ನೀಡಿದ ಡಾ ಕೃಷ್ಣಕುಮಾರ್ ಅವರ ಸನ್ಮಾನ ಸಮಾರಂಭವನ್ನು ಹಾಗೂ ನಿರ್ಮಲ ತುಂಗಭದ್ರಾ ಅಭಿಯಾನದ ಪ್ರತಿಜ್ಞಾವಿಧಿ ಬೋಧನೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.. ಇದಕ್ಕೂ ಪೂರ್ವದಲ್ಲಿ. ಶಿಕ್ಷಣದ ಮಾತೆ ಸಾವಿತ್ರಿಬಾಯಿ ಪೂಲೆ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ. ಸಸಿಗಳಿಗೆ ನೀರು ಹಾಕುವುದರ ಮೂಲಕ ವೇದಿಕೆಯಲ್ಲಿನ ಗಣ್ಯರು ಚಾಲನೆಯನ್ನು ನೀಡಿದರು. ಬಳಿಕ ಸಮಾರಂಭವನ್ನು ಉದ್ದೇಶಿಸಿ ರಮೇಶ್ ಗಬ್ಬೂರು ಮಾತನಾಡಿ ಡಾ, ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮೋತ್ಸವವನ್ನು ದೇಶಾದ್ಯಂತ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿರುವುದು. ಒಂದೆಡೆ ಆದರೆ ಅವರಿಗಿಂತ ಇತಿಹಾಸದ ಪೂರ್ವ ಪುಟದಲ್ಲಿ ಹಲವು ದಶಕಗಳ ಕಾಲ ಮುಂಚೆ ಹುಟ್ಟಿದ ಸಾವಿತ್ರಿಬಾಯಿ ಪುಲೆ ಅವರು ಮಹಿಳೆಯರ ಶಿಕ್ಷಣಕ್ಕಾಗಿ ಹತ್ತು ಹಲವಾರು ಶಾಲೆಗಳನ್ನು ಆರಂಭಿಸಿ ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸುವುದರ ಮೂಲಕ ಮಹಿಳಾ ಸಬಲೀಕರಣಕ್ಕೆ ಅದ್ಭುತ ವ್ಯಕ್ತಿಯಾಗಿ ಶಕ್ತಿಯಾಗಿ ಕಂಗೊಳಿಸುತ್ತಿದ್ದಾರೆ ಎಂದು ಅವರ ಜೀವನ ಕುರಿತು.\ ತಮ್ಮ ಮಾತಿನ ಮೂಲಕ ಹಾಗೂ ಹಾಡಿನ ಮೂಲಕ ಸಮಗ್ರ ಮಾಹಿತಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸನ್ಮಾನಿತಗೊಂಡ ದಾನಿ ಡಾ ಕೃಷ್ಣಕುಮಾರ್ ಮಾತನಾಡಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಪ್ರಪಂಚಕ ಜ್ಞಾನ ಪಡೆದುಕೊಳ್ಳಲು ದಿನಪತ್ರಿಕೆಗಳು ಸಹಕಾರಿಯಾಗಿದೆ. ದೇಶ ನೋಡು ಇಲ್ಲವೇ ಕೋಶ ಓದು ಎಂಬ ಮಾತಿನಂತೆ ಜ್ಞಾನದ ಅಭಿವೃದ್ಧಿಗೆ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಎಂ ಎನ್ ಎಂ ಕಾಲೇಜಿನ ಪ್ರಾಚಾರ್ಯ ಶಾಂತಪ್ಪ. ಪ್ರಭಾರಿ ಮುಖ್ಯ ಗುರು ಸುಮಂಗಲ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಕೆ ನಿಂಗಜ್ಜ. ಎಫ್ ಎಂ ಕೇಂದ್ರದ ನಿರ್ದೇಶಕ ರಾಘವೇಂದ್ರ, ದೈಹಿಕ ನಿರ್ದೇಶಕಿ ಉಮಾದೇವಿ, ಮಲ್ಲಿಕಾರ್ಜುನ್, ವೀರಣ್ಣ, ಅಮರೇಶ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಂಗೀತ ಶಿಕ್ಷಕರ ನಿವೃತ್ತಿ ಹಿನ್ನೆಲೆಯಲ್ಲಿ ಸಂಗೀತೋತ್ಸವ ಕಾರ್ಯಕ್ರಮ ಅಡಿಯಲ್ಲಿ ಭಾವಗೀತೆಯ ಜನಪದ ಗೀತೆ ಹಾಗೂ ಪರಿಸರ ಕುರಿತು ಹಾಡುಗಳನ್ನು ಹಾಡಲಾಯಿತು. ಈರಣ್ಣ ಶಿಕ್ಷಕರು ಸ್ವಾಗತಿಸಿದರು ಮಲ್ಲಿಕಾರ್ಜುನ್ ಶಿಕ್ಷಕರು ವಂದಿಸಿದರು.

Leave a Reply