ಗಂಗಾವತಿ: ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಪ್ರಕಟಿಸಿದ ೨೦೨೩-೨೪ನೇ ಸಾಲಿನ ಎನ್.ಇ.ಪಿ ಪಠ್ಯದ ಪದವಿ ಪರೀಕ್ಷೆಯಲ್ಲಿ ನಗರದ ಸಂಕಲ್ಪ ಪದವಿ ಕಾಲೇಜಿಗೆ ೭ ರ‍್ಯಾಂಕ್ ಮತ್ತು ೨ ಚಿನ್ನದ ಪದಕ ಲಭಿಸಿವೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ನಾಗರಾಜ ಗುತ್ತೇದಾರ ಹರ್ಷ ವ್ಯಕ್ತಪಡಿಸಿದರು.
ಕಾಲೇಜಿನ ಬಿ.ಕಾಂ ವಿಭಾಗದಲ್ಲಿ ಜೇಬಾ ಸೈಯದ್ ಖಲೀಲುಲ್ಲಾ ಖಾದ್ರಿ ಶೇ ೯೫.೪೬ ಅಂಕದೊಂದಿಗೆ ಪ್ರಥಮ ರ‍್ಯಾಂಕ್ ಮತ್ತು ಚಿನ್ನದ ಪದಕ, ಬಿ.ಎ ವಿಭಾಗದಲ್ಲಿ ಸುಭದ್ರಾ ವಿರೂಪಾಕ್ಷ ಬಢಿಗೇರ್ ಶೇ ೯೧.೧೭ ಅಂಕ ಪಡೆಯುವುದರೊಂದಿಗೆ ೬ನೇ ರ‍್ಯಾಂಕ್ ಮತ್ತು ವಿಷಯವಾರು ಐಚ್ಛಿಕ ಕನ್ನಡ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಬಿ.ಎ ವಿಭಾಗದಲ್ಲಿ ಉಮಾ ಉಡೇಗೋಳ ಯಂಕಪ್ಪ ಶೇ ೯೧೫೫ (೪ನೇ ರ‍್ಯಾಂಕ್), ಹನುಮಂತಿ ಹನುಮಂತಪ್ಪ ಶೇ ೯೧.೩೭ (೫ನೇ ರ‍್ಯಾಂಕ್), ಅನಿತಾ ಈರಪ್ಪ ಕೋರಿ ಶೇ ೯೦.೭೨ (೧೦ನೇ ರ‍್ಯಾಂಕ್), ಬಿ.ಕಾಂ ವಿಭಾಗದಲ್ಲಿ ಅಕ್ಷತಾ ಲಕ್ಷ್ಮಣ ದಾಸನೂರು ಶೇ ೯೪.೮೪ (೫ನೇ ರ‍್ಯಾಂಕ್), ಜಿ. ಜಯಶ್ರೀ ಅಮರೇಗೌಡ ಶೇ ೯೪.೭೯ (೬ನೇ ರ‍್ಯಾಂಕ್) ಅಂಕಗಳನ್ನು ಪಡೆಯುವುದರೊಂದಿಗೆ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಹೇಮಂತರಾಜ ಕಲ್ಮಂಗಿ, ಉಪಾಧ್ಯಕ್ಷರಾದ ಎಂ.ಆರ್. ಮಂಜುಸ್ವಾಮಿ, ಕಾರ್ಯದರ್ಶಿಗಳಾದ ಬಸವರಾಜ ಕೇಸರಹಟ್ಟಿ, ಕೋಶಾಧ್ಯಕ್ಷರಾದ ಮಲ್ಲಿಕಾರ್ಜುನ ಎಸ್. ಸಿಂಗನಾಳ, ನಿರ್ದೇಶಕರಾದ ಅಮಿತಕುಮಾರ ರೆಡ್ಡಿ, ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ಶಿರಿಗೇರಿ ಶುಭ ಹಾರೈಸಿದ್ದಾರೆ.