
ಅಧ್ಯಯನದ ಮೂಲಕ ಸಾಹಿತ್ಯ ರಚನೆಯಾಗಬೇಕು: ರುದ್ರೇಶ ಭಂಡಾರಿ
ಗಂಗಾವತಿ : ಚುಟುಕು ಸಾಹಿತ್ಯಗಳು ಸಮಾಜದ ಬದಲಾವಣೆಗೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದು, ಸಾಹಿತ್ಯವು ವಾಸ್ತವ ಸಂಗತಿಗಳ ಕೈಗನ್ನಡಿಯಾಗಿ ಮಾರ್ಪಡಬೇಕು. ಚುಟುಕು ಕವಿಗಳು ಅಧ್ಯಯನದ ಮೂಲಕ ಗಂಭೀರವಾಗಿ ಸಾಹಿತ್ಯ ರಚಿಸಬೇಕು ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರೇಶ ಭಂಡಾರಿ ಹೇಳಿದರು. ನಗರದ ಕಸಾಪ ಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಜೂನ್ ೨೧ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕವಿಗೋಷ್ಠಿಗೆ ಅರಳಹಳ್ಳಿ ಬೃಹನ್ಮಠದ ಪೂಜ್ಯ ಶ್ರೀ ರೇವಣಸಿದ್ದಯ್ಯತಾತನವರು ದಿವ್ಯಸಾನಿಧ್ಯ ವಹಿಸಿದ್ದರು….