ಹಾಸನದ ಕಲಾಭವನದ ಹೊರ ಆವರಣದಲ್ಲಿ ಭಾನುವಾರ ಮತ್ತು ಸೋಮವಾರ ಎರಡು ದಿನ ಒಡನಾಡಿ ಚಿತ್ರಕಲಾ ಬಳಗ, ಚಿತ್ರಕಲಾ ಶಿಕ್ಷಕರು, ಕಲಾವಿದರು ವಸಂತಕುಮಾರ್ ರವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಆಯೋಜಿಸಿದ್ದರು.
ಈ ಪ್ರದರ್ಶನದಲ್ಲಿ ಕಲಾವಿದ ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ 27 ಕಲಾ ಕೃತಿಗಳು ವೀಕ್ಷಕರ ಗಮನ ಸೆಳೆದವು.
ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯಂದು ಅವರು ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣೆ ದಿನ ತಮ್ಮ ಹೊಸ ಚಿತ್ರಗಳ ಪ್ರದರ್ಶನ ಮಾಡುತ್ತಾರೆ.
ಈ ಬಾರಿ ವಿಶೇಷವಾಗಿ ವಸಂತಕುಮಾರ್ ಅವರು ತಮ್ಮ ಪೊಟ್ರೈಟ್ ವರ್ಕ್ಸ್ ನಲ್ಲಿ ಜಿಲ್ಲೆಯ ಸಾಧಕರ ಭಾವಚಿತ್ರಗಳನ್ನು ತಮ್ಮ ಕುಂಚಿಕೆಯಲ್ಲಿ ಸೆರೆ ಹಿಡಿದಿದರು.
ಡ್ರಾಯಿಂಗ್ ಶೀಟ್ ಪೆನ್ಸಿಲ್ ವರ್ಕ್ಸ್ ನಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಶ್ರೀಮತಿ ಭಾನು ಮುಷ್ತಾಕ್ ಅವರ ಚಿತ್ರವನ್ನು ಚಿತ್ರಿಸಿದ್ದಾರೆ.
ಚಾರ್ಕೋಲ್ ಪೆನ್ಸಿಲ್ ವರ್ಕ್ಸ್ ನಲ್ಲಿ ಭಾರತದ ಮಾಜಿ ಪ್ರಧಾನಿ ಶ್ರೀ ಹೆಚ್. ಡಿ. ದೇವೇಗೌಡರ ಭಾವಚಿತ್ರವನ್ನು ಸೃಷ್ಟಿಸಿದ್ದಾರೆ.
ಅಂತರಾಷ್ಟ್ರೀಯ ಕಲಾವಿದ ಕೆ. ಟಿ. ಶಿವಪ್ರಸಾದ್ ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಅವರ ಭಾವಚಿತ್ರಗಳು ಗಮನ ಸೆಳೆಯುವಂತಿವೆ.
ಹ್ಯಾಂಡ್ ಲ್ಯಾಂಡ್ ಸ್ಕೇಪ್ ಚಿತ್ರಣಕ್ಕಾಗಿ ಈ ಬಾರಿ ಅವರು ರಸ್ತೆ ಬದಿಯ ಮರಗಳನ್ನು ಆರಿಸಿಕೊಂಡು ಕಲಾ ಕೃತಿಗಳನ್ನು ಸೃಷ್ಟಿಸಿದರು.
ಅರಸೀಕೆರೆ ಹುಳಿಯಾರು ರಸ್ತೆಯ ಮಳೆಯ ಗಾಳಿಗೆ ಉರುಳುವ ಮೊದಲು ಮೂವರು ಮರಗಳ ಚಿತ್ರಣ ತೈಲವರ್ಣದಲ್ಲಿ ಮೂಡಿಬಂದಿವೆ.
ಚಿಂಡೇನಹಳ್ಳಿ ಗ್ರಾಮದಲ್ಲಿ ಕಂಡ ಮರಗಳು ಹ್ಯಾಂಡ್ ಮೇಡ್ ಶೀಟ್‌ನಲ್ಲಿ ಜಲವರ್ಣ ಮಾಧ್ಯಮದಲ್ಲಿ ಕಲಾತ್ಮಕವಾಗಿ ಮೂಡಿಬಂದಿವೆ.
ಎಂಟು ಚಾರ್ಕೋಲ್ ಶೀಟ್‌ಗಳಲ್ಲಿ ಚಾರ್ಕೋಲ್ ಪೆನ್ಸಿಲ್ ವರ್ಕ್, ಏಳು ಡ್ರಾಯಿಂಗ್ ಶೀಟ್‌ಗಳಲ್ಲಿ ಪೆನ್ಸಿಲ್ ವರ್ಕ್ ಪ್ರದರ್ಶನಕ್ಕಿಟ್ಟಿದ್ದರು.
ಮೂವರು ಕ್ಯಾನವಾಸ್ ಕ್ಲಾತ್ ನಲ್ಲಿ ಅಕ್ರಿಲಿಕ್ ಮಾಧ್ಯಮದ ನವೀನ ಕಲಾಕೃತಿಗಳು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಕಲಾ ಸಾಧನೆಗೆ ಜಿಲ್ಲಾಡಳಿತವು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಚಿತ್ರಕಲೆಯು ದುಬಾರಿ ಸಾಹಸವಾದ ಕಾರಣ ಅಕಾಡೆಮಿಯ ಸಹಕಾರ ಇಲ್ಲದಿದ್ದರೆ ಪ್ರದರ್ಶನ ನಡೆಸುವುದು ಅಸಾಧ್ಯವಾಗಿದೆ.
ವಸಂತಕುಮಾರ್ ತಮ್ಮ ಬಿಜಿ ಬದುಕಿನ ಮಧ್ಯೆ ಕೂಡ ಸೃಜನಶೀಲ ಕಲಾಕೃತಿಗಳನ್ನು ರಚಿಸಿ ಪ್ರದರ್ಶಿಸುತ್ತಿರುವುದು ಸೋಜಿಗದ ಸೂಜಿ ಮಲ್ಲಿಗೆಯೇ ಸೈ.
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.