ಹಾಸನಾಂಬ ಕಲಾಕ್ಷೇತ್ರದಲ್ಲಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವಾಯಿತು.

ಹಾಸನಾಂಬ ಕಲಾಕ್ಷೇತ್ರದಲ್ಲಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವಾಯಿತು.

ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಶ್ರೀ ವೀರಾಂಜನೇಯ ಕೃಪಾ ಪೋಷಿತ ನಾಟಕ ಮಂಡಳಿ, ಹಾಸನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಸನ. ಇವರ ಸಹಯೋಗದಲ್ಲಿ ಯುವ ನಿರ್ದೇಶಕ ಹೇಮಂತ್ ದೇವರಾಜ್ ನಿರ್ದೇಶನದಲ್ಲಿ ಬಂದೂರು ಶ್ರೀ ಸಿದ್ಧಲಿಂಗೇಶ್ವರ ಡ್ರಾಮ ಸೀನರಿಯ ರಂಗಸಜ್ಜಿಕೆಯಲ್ಲಿ ಪ್ರದರ್ಶಿತವಾದ ಸಂಪೂರ್ಣ ರಾಮಾಯಣ ನಾಟಕದಲ್ಲಿ ದಶರಥನ ಪಾತ್ರದಲ್ಲಿ ನವಿಲುಹಳ್ಳಿ ವಾಸುದೇವ್ ಉತ್ತಮ ಅಭಿನಯದಿಂದ ಪ್ರೇಕ್ಷಕರ ಮನ ಸೆಳೆದರು. ಕೈಕೆ ಪಾತ್ರದಲ್ಲಿ ಲಕ್ಷ್ಮೀ ಶ್ರೀಧರ್ ನಟಿಸಿದರು.

Read More
ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಗಂಗಾವತಿ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಗಂಗಾವತಿಯ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಸವನದುರ್ಗದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಛತ್ರಪ್ಪ ತಂಬೂರಿ ಅವರು ವಿದ್ಯಾರ್ಥಿಗಳಿಗೆ ಯೋಗವನ್ನು ವಿವರಿಸಿದರು. ಅವರು ಯೋಗ, ಪ್ರಾಣಾಯಾಮ ಹಾಗೂ ಆರೋಗ್ಯದ ಮಹತ್ವವನ್ನು ವಿವರಿಸುತ್ತಾ, ವಿದ್ಯಾರ್ಥಿಗಳ ಓದು ಮತ್ತು ಏಕಾಗ್ರತೆಯ ಅಭಿವೃದ್ಧಿಗೆ ಯೋಗ ಮತ್ತು ಧ್ಯಾನ ಹೇಗೆ ಸಹಾಯಕವಾಗಬಹುದು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ತಿಳಿಸಿದರು.ಯೋಗ ಮತ್ತು ಪ್ರಾಣಾಯಮದ ಆಸನಗಳನ್ನು ಮಾಡಿ ತೋರಿಸಿ,…

Read More
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ  ರಮೇಶ್ ಕೋಟಿ ನೇಮಕ

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ರಮೇಶ್ ಕೋಟಿ ನೇಮಕ

ಗಂಗಾವತಿ: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ (ರಿ) ಬೆಂಗಳೂರು ರಾಜ್ಯ ಅಧ್ಯಕ್ಷ ಜಿ.ಎಮ್.ರಾಜಶೇಖರ್ ಇವರ ಆದೇಶದ ಮೇರೆಗೆ ಭೀಮ ಘರ್ಜನೆ ಸಂಪಾದಕ ರಮೇಶ ಕೋಟಿ ಇವರನ್ನು ಕೊಪ್ಪಳ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇಂದಿನಿಂದ ಅವರು ಕೊಪ್ಪಳ ಜಿಲ್ಲೆಯಲ್ಲಿ ನಮ್ಮ ಸಂಘದ ಸಂಘಟನೆ ಮಾಡಲು ಮತ್ತು ವೃತ್ತಿಪರ ಪತ್ರಕರ್ತರನ್ನು ಸಂಘದ ಸದಸ್ಯತ್ವ ಮಾಡಲು ಮತ್ತು ಸಂಘದ ಹೆಸರಿಗೆ ಚ್ಯುತಿ ಬರದಂತೆ ಕೆಲಸ ಮಾಡಲು ಮುಂದಾಗಲು ತಿಳಿಸಲಾಗಿದೆ.

Read More
ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆ ಯೋಗ

ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆ ಯೋಗ

ಯೋಗವು ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಹುಟ್ಟಿಕೊಂಡ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಾಧನೆ. ಯೋಗವು ಭಾರತೀಯ ಸಂಸ್ಕೃತಿಯ ಮಹತ್ವದ ಕೊಡುಗೆಗಳಲ್ಲಿ ಒಂದು. ಇದು ನಮ್ಮ ದೇಹ, ಮನಸ್ಸು ಹಾಗೂ ಆತ್ಮ ಸಮತೋಲನ ಸಾಧಿಸುವ ಪ್ರಾಚೀನ ಶಿಸ್ತು ಸಂಯಮದ ಪಾಠ. ಯೋಗ ಎನ್ನುವ ಪದ ಸಂಸ್ಕೃತದ ಯುಜ್‌ ಧಾತುವಿನಿಂದ ಹುಟ್ಟಿದೆ.  ಯುಜ್ ಎಂದರೆ ಜೋಡಿಸು, ಕೂಡಿಸು, ಸಂಬಂಧಿಸು. ದೇಹ ಮತ್ತು ಮನಸ್ಸಿನ ಏಕತೆ ಪ್ರತಿನಿಧಿಸುವ ಯೋಗಾಭ್ಯಾಸ ವೇದ ಕಾಲದಿಂದ ಇಂದಿನವರೆಗೂ ಮುಂದುವರೆದು ಬಂದಿದೆ. ಕ್ರಿ.ಶ. 400 ರಲ್ಲಿ ಪತಂಜಲಿ…

Read More
ಹಾಸನದ ವಸಂತಕುಮಾರ್ ಅವರ ಲ್ಯಾಂಡ್ ಸ್ಕೇಪ್ ಏಕವ್ಯಕ್ತಿ ಚಿತ್ರ ಪ್ರದರ್ಶನ

ಹಾಸನದ ವಸಂತಕುಮಾರ್ ಅವರ ಲ್ಯಾಂಡ್ ಸ್ಕೇಪ್ ಏಕವ್ಯಕ್ತಿ ಚಿತ್ರ ಪ್ರದರ್ಶನ

ಹಾಸನದ ಚಿತ್ರಕಲಾ ಶಿಕ್ಷಕರು ಮತ್ತು ಕಲಾವಿದರು ಆದ ವಸಂತಕುಮಾರ್ ಅವರ ವಾಟರ್ ಕಲರ್, ಲ್ಯಾಂಡ್ ಸ್ಕೇಪ್, ಬಾರ್ಕೋಲ್ ಮತ್ತು ಪೆನ್ಸಿಲ್ ವರ್ಕ್ಸ್ ಗಳ ಏಕ ವ್ಯಕ್ತಿ ಚಿತ್ರ ಕಲಾ ಪ್ರದರ್ಶನವನ್ನು ಹಾಸನದ ಒಡನಾಡಿ ಚಿತ್ರ ಕಲಾ ಬಳಗದಿಂದ ವಿಶ್ವ ಪರಿಸರ ದಿನದ ಪ್ರಯುಕ್ತ ದಿನಾಂಕ 22-6-2025ರ ಭಾನುವಾರ ಬೆ 11ಕ್ಕೆ ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಿದೆ.ಹಾಸನ ಕ್ಷೇತ್ರದ ಶಾಸಕರು ಶ್ರೀ ಹೆಚ್.ಪಿ.ಸ್ವರೂಪ್ ಕಾರ್ಯಕ್ರಮ ಉದ್ಘಾಟಿಸುವರು. ಅಂತರಾಷ್ಟ್ರೀಯ ಚಿತ್ರ ಕಲಾವಿದರಾದ ಶ್ರೀ ಕೆ.ಟಿ.ಶಿವಪ್ರಸಾದ್ ವಿಶ್ವ ಪರಿಸರ ದಿನದಂದು…

Read More
ಹಾಸನ ಕಲಾವಿದರಿಂದ ಮಲೈಮಹದೇಶ್ವರ ಬೆಟ್ಟದಲ್ಲಿ ಕುರುಕ್ಷೇತ್ರ ನಾಟಕ

ಹಾಸನ ಕಲಾವಿದರಿಂದ ಮಲೈಮಹದೇಶ್ವರ ಬೆಟ್ಟದಲ್ಲಿ ಕುರುಕ್ಷೇತ್ರ ನಾಟಕ

ಹಾಸನದ ಶ್ರೀ ಶಾರದ ಕಲಾಸಂಘದ ಕಲಾವಿದರು ಶ್ರೀ ಹೆಚ್.ಜಿ. ಗ೦ಗಾಧರ್ ನೇತೃತ್ವದಲ್ಲಿ ನಂಜನಗೂಡಿನ ಶಿವರಂಜಿನಿ ಸಾಂಸ್ಕೃತಿಕ ಕಲಾ ಬಳಗರವರು ಅಮಾವಾಸ್ಯೆ ಜಾತ್ರಾ ಮಹೋತ್ಸವ ಪ್ರಯುಕ್ತ ಚಾಮರಾಜನಗರ ಜಿಲ್ಲೆ, ಹನೂರು ತಾಲೂಕು, ಮಹದೇಶ್ವರ ಬೆಟ್ಟದ ದೇವಸ್ಥಾನದ ರಂಗ ಮಂದಿರದಲ್ಲಿ ಏರ್ಪಡಿಸಿರುವ ನಾಟಕೋತ್ಸವದಲ್ಲಿ ದಿನಾಂಕ 21-6-2025 ರ ಶನಿವಾರ ರಾತ್ರಿ 8 ಗಂಟೆಗೆ ಎ.ಸಿ. ರಾಜು ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶಿಸುವರು.ಉದ್ಘಾಟನೆ ಶ್ರೀ. ಸುನೀಲ್ ಬೋಸ್, ಸಂಸದರು,ಚಾಮರಾಜನಗರ ಜಿಲ್ಲೆ. ಅಧ್ಯಕ್ಷತೆ ಶ್ರೀ ಹೆಚ್.ಸಿ. ಮಹದೇವಪ್ಪರವರು, ಸಚಿವರು, ಸಮಾಜ ಕಲ್ಯಾಣ ಇಲಾಖೆ….

Read More
ಆರ್ಯವೈಶ್ಯ ಸಮಾಜದಿಂದ ನಾಲ್ಕನೇ ವರ್ಷದ ಮಂತ್ರಾಲಯ ಪಾದಯಾತ್ರೆ, ಯೋಧರ ಹಾಗೂ ರೈತರ ಹಿತ ರಕ್ಷಣೆಗಾಗಿ ಪ್ರಾರ್ಥಿಸಿ: ದರೋಜಿ ನಾಗರಾಜ್ ಶೆಟ್ಟಿ

ಆರ್ಯವೈಶ್ಯ ಸಮಾಜದಿಂದ ನಾಲ್ಕನೇ ವರ್ಷದ ಮಂತ್ರಾಲಯ ಪಾದಯಾತ್ರೆ, ಯೋಧರ ಹಾಗೂ ರೈತರ ಹಿತ ರಕ್ಷಣೆಗಾಗಿ ಪ್ರಾರ್ಥಿಸಿ: ದರೋಜಿ ನಾಗರಾಜ್ ಶೆಟ್ಟಿ

ಗಂಗಾವತಿ 15: ನಗರದ ಹಿರೇಜಂತಕಲ್ ವಿರುಪಾಪುರದ ಆರ್ಯವೈಶ್ಯ ಸಮಾಜದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ನಾಲ್ಕನೇ ವರ್ಷದ ಪಾದಯಾತ್ರೆಯನ್ನು ನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ರವಿವಾರ ದಿನದಂದು ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಸಂಕಲ್ಪ, ಭಜನೆ ಮಾಡುವುದರ ಮುಖಾಂತರ ಪಾದಯಾತ್ರೆಯನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಮಾತನಾಡಿ ದೇಶ ಕಾಯುವ ಯೋಧ ಹಾಗೂ ಅನ್ನದಾತ ರೈತರ ಹಿತ ಕಾಯುವಂತೆ ಪ್ರಾರ್ಥಿಸಿ ನಾಲ್ಕನೇ ವರ್ಷದ ಪಾದಯಾತ್ರೆಯನ್ನು ತಾಯಿ ಶ್ರೀ ಕನ್ನಿಕಾ…

Read More
ಸಿದ್ದು ಪೂಣ೯ಚಂದ್ರರ ಹೊಸ ಸಿನಿಮಾ ಪುಟ್ಟಣ್ಣನ ಕತ್ತೆ

ಸಿದ್ದು ಪೂಣ೯ಚಂದ್ರರ ಹೊಸ ಸಿನಿಮಾ ಪುಟ್ಟಣ್ಣನ ಕತ್ತೆ

“ದಾರಿ ಯಾವುದಯ್ಯ ವೈಕುಂಠಕೆ ಎಂಬ ಉತ್ತಮ ಚಿತ್ರವನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಸಿದ್ದು ಪೂರ್ಣಚಂದ್ರರವರು ಸದಾ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಹಲವು ವಿಭಿನ್ನ ಚಿತ್ರಗಳನ್ನು ಈಗಾಗಲೇ ನಿರ್ದೇಶನ ಮಾಡಿದ್ದಾರೆ. ಬ್ರಹ್ಮಕಮಲ, ತಾರಿಣಿ, ಈ ಪಾದ ಪುಣ್ಯ ಪಾದ, ಇವುಗಳ ಸಾಲಿಗೆ ಮತ್ತೊಂದು ಹೊಸ ಚಿತ್ರ ಪುಟ್ಟಣ್ಣನ ಕತ್ತೆ ಎಂಬ ಚಿತ್ರವೂ ಸೇರಿಕೊಳ್ಳುತ್ತದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನವರಾದ ಸಿದ್ದು ಪೂರ್ಣಚಂದ್ರ ಮತ್ತು ನನ್ನ ಸ್ನೇಹ ಕೆಲ ವರ್ಷಗಳಿಂದ ಆತ್ಮೀಯವಾಗಿ ಬೆಳೆದಿದೆ. ಇಂದು ಫೋನ್ ಗೆ ಸಿಕ್ಕರು….

Read More
ಭಾರತೀಯ ಪ್ರಜಾಸೇನೆಯ ನೂತನ ಜಿಲ್ಲಾಧ್ಯಕ್ಷರಾಗಿ ನರಸಿಂಹಲು ಚಿಂತಲಕುಂಟ ನೇಮಕ-ಪಂಪಾಪತಿ ಸಿದ್ದಾಪುರ

ಭಾರತೀಯ ಪ್ರಜಾಸೇನೆಯ ನೂತನ ಜಿಲ್ಲಾಧ್ಯಕ್ಷರಾಗಿ ನರಸಿಂಹಲು ಚಿಂತಲಕುಂಟ ನೇಮಕ-ಪಂಪಾಪತಿ ಸಿದ್ದಾಪುರ

ಗಂಗಾವತಿ: ಭಾರತೀಯ ಪ್ರಜಾ ಸೇನೆಯ ಸಂಸ್ಥಾಪಕರು ಮಂಜುನಾಥ್ ಆರ್., ರಾಜ್ಯ ಅಧ್ಯಕ್ಷರಾದ ಟಿ ವೇಣುಗೋಪಾಲ್ ಅವರ ಆದೇಶದ ಮೇರೆಗೆ ಜೂನ್-೦೪ ಬುಧವಾರ ನಗರದ ಹಳೆ ಪ್ರವಾಸಿ ಮಂದಿರದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಂಪಾಪತಿ ಸಿದ್ದಾಪುರ, ವಿಭಾಗೀಯ ಕಾರ್ಯದರ್ಶಿ ಹುಲುಗಪ್ಪ ಕೊಜ್ಜಿಯವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷರನ್ನಾಗಿ ನರಸಿಂಹಲು ಚಿಂತಲಕುಂಟ ಅವರನ್ನು ನೇಮಕ ಮಾಡಲಾಗಿದೆ. ನೇಮಕಾತಿ ಆದೇಶ ಪತ್ರ ನೀಡಿ ಮಾತನಾಡಿದ ಪಂಪಾಪತಿ ಸಿದ್ದಾಪುರ ಅವರು, ಕೊಪ್ಪಳ ಜಿಲ್ಲಾ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಬಡವರ, ದೀನ ದಲಿತರ, ಅನ್ಯಾಯಕ್ಕೊಳಗಾದವರ,…

Read More
ಗಂಗಾವತಿ ತಾಲೂಕು ಹಡಪದ ಅಪ್ಪಣ್ಣ ಸಮಾಜದ ನೂತನ ಅಧ್ಯಕ್ಷರಾಗಿ ನಿರುಪಾದಿ ಕೇಸರಹಟ್ಟಿ ನೇಮಕ

ಗಂಗಾವತಿ ತಾಲೂಕು ಹಡಪದ ಅಪ್ಪಣ್ಣ ಸಮಾಜದ ನೂತನ ಅಧ್ಯಕ್ಷರಾಗಿ ನಿರುಪಾದಿ ಕೇಸರಹಟ್ಟಿ ನೇಮಕ

ಗಂಗಾವತಿ: ಗಂಗಾವತಿ ತಾಲೂಕು ಕಾರ್ಯಕಾರಣಿ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಗಂಗಾವತಿ ತಾಲೂಕು ನೂತನ ಅಧ್ಯಕ್ಷರನ್ನಾಗಿ ನಿರುಪಾದಿ ಕೇಸರಹಟ್ಟಿ ಇವರನ್ನು ಆಯ್ಕೆ ಮಾಡಲಾಯಿತು. ಈ ನೇಮಕಾತಿಯು ಜೂನ್-೦೩ ಮಂಗಳವಾರ ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ಉಳ್ಳಿಡಗ್ಗಿಯಲ್ಲಿ ಹಡಪದ ಅಪ್ಪಣ್ಣ ಸಮಾಜದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಹನುಮಂತಪ್ಪ ಸರಿಗಮ ಇವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಭೀಮನಗೌಡ, ಪ್ರಧಾನ ಕಾರ್ಯದರ್ಶಿಗಳಾದ ಶಿವಣ್ಣ ನೀಲಕಮಲ್, ಶರಣಪ್ಪ ಬಂಗಾರದ ಅಂಗಡಿ, ಶರಣಪ್ಪ ಡಿಸ್ಕೋ, ಬಸವರಾಜ್ ಎಸ್.ಬಿ ನಗರ್, ವೀರಭದ್ರಪ್ಪ ಅಮಾತೆಪ್ಪ, ಪಂಪಾಪತಿ ಹೊಸಳ್ಳಿ,…

Read More

VISHWAROOPA NEWS BLOG

Infinite

Skip to content ↓