ಸರಳತೆಯಿಂದ ಶ್ರೇಷ್ಠತೆಯೆಡೆಗೆ ಪಯಣಿಸಿದ ‘ದೇಶಪ್ರೇಮಿ- ಜನರಾಷ್ಟ್ರಪತಿ’ ಡಾ. ಎಪಿಜೆ ಅಬ್ದುಲ್ ಕಲಾಂ: ಪ್ರೊ. ಕರಿಗೂಳಿ
ತಾಲೂಕಿನ ಶ್ರೀರಾಮನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಅಬ್ದುಲ್ ಕಲಾಂ ರವರ ಜಯಂತಿ ಅಂಗವಾಗಿ ಸರಣಿ ಕಾರ್ಯಕ್ರಮಗಳ ಸಡಗರ ಸಂಭ್ರಮದಿಂದ ಜರುಗಿದವು. ನನ್ನ ಜನುಮದಿನಕ್ಕೂ ಹಾಗೂ ಪುಣ್ಯತಿಥಿಗೂ ರಜೆ ನೀಡಬೇಡಿ ನನ್ನನ್ನು ಹಾಗೂ ದೇಶವನ್ನು ಪ್ರೀತಿಸಿ ಗೌರವಿಸುವುದಾದರೆ ಹೆಚ್ಚು ಕೆಲಸ ಮಾಡಿ ಎಂದು ಹೇಳುವುದರ ಮೂಲಕ ಯುವಕರಿಗೆ ಚಿರಸ್ಫೂರ್ತಿಯಾಗಿರುವ ಡಾ. ಕಲಾಂ ರವರ ಆಶಯದಂತೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ನಮ್ಮ ಕಾಲೇಜು ಸ್ವಚ್ಛ ಕಾಲೇಜು ಅಭಿಯಾನದ ಅಡಿಯಲ್ಲಿ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ್ ಸರಕಾರಿ ಪ್ರಥಮ ದರ್ಜೆ…
