VISHWAROOPA NEWS BLOG

ನಿರ್ಮಲ ತುಂಗಭದ್ರಾ ಅಭಿಯಾನದ ಪೋಸ್ಟರ್ ಬಿಡುಗಡೆ

ಗಂಗಾವತಿ: ಇಂದು ಲಯನ್ಸ್ ಕ್ಲಬ್‌ನಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಸಂಘ-ಸಂಸ್ಥೆಗಳೊಂದಿಗೆ ನಡೆದ ಸಂವಾದ ಅತ್ಯಂತ ಯಶಸ್ವಿಯಾಯಿತು. ನಿರ್ಮಲ ತುಂಗಭದ್ರಾ ಅಭಿಯಾನದ ಪ್ರಮುಖರಾದ ಮಾಧವನ್ ಸಿ.ಪಿ ಹಾಗೂ ರಾಘವ್ ಗೋ-ಸಿರಿ ಅವರು ತುಂಗಭದ್ರಾ ಅಭಿಯಾನದ ಪಾದಯಾತ್ರೆ ಬಗ್ಗೆ ಮಾಹಿತಿ ಹಂಚಿಕೊಂಡರು.ಈ ಸಂದರ್ಭದಲ್ಲಿ ಹಿರಿಯ ವೈದ್ಯರು, ಪರಿಸರವಾದಿಗಳಾದ ಡಾ|| ಎ. ಸೋಮರಾಜು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ|| ಜಿ. ಚಂದ್ರಪ್ಪ ಅವರು ನಿರ್ಮಲ ತುಂಗಭದ್ರಾ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿದರು.ಗಂಗಾವತಿಯ ಪ್ರಮುಖ ಸಂಸ್ಥೆಗಳಾದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್…

Read More

ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳ ಮೂಲಭಾಷೆ: ಶರಣಬಸವ ತಾತನನವರು

ಗಂಗಾವತಿ: ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳ ಮೂಲಭಾಷೆಯಾಗಿದೆ. ಈ ಭಾಷೆಯು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ದೇವನಗರಲಿಪಿ ಎಂದು ಕರೆಯುತ್ತಾರೆ. ಈ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಭಾಷೆಯು ಯಾವುದೇ ಮತ, ಧರ್ಮಕ್ಕೆ ಮೀಸಲಾಗಿರುವುದಿಲ್ಲ. ಯಾರು ಬೇಕಾದರೂ ಕಲಿಯಬಹುದು, ಇದಕ್ಕೆ ವಯೋಮಿತಿ ಇರುವುದಿಲ್ಲ ಎಂದು ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪೂಜ್ಯ ಶ್ರೀ ಶರಣಬಸವ ತಾತನವರು ತಿಳಿಸಿದರು.ಅವರು ಡಿಸೆಂಬರ್-೮ ಭಾನುವಾರ ನಗರದ ಹೊಸಳ್ಳಿ ರಸ್ತೆಯ ಕನ್ನಡ ಜಾಗೃತಿ ಭವನದಲ್ಲಿ…

Read More

ನಮ್ಮ ದೇಶದಲ್ಲಿ ಇರುವ ಜಾತಿ ವ್ಯವಸ್ಥೆ ತೊಲಗಿಸಿ ನಾವೆಲ್ಲರೂ ಸಮಾನವಾಗಿ ಬಾಳೋಣ: ಬೋದಿದತ್ತ ಥೇರೋ ಬಂತೇಜಿ

ಗಂಗಾವತಿ: ಮನುಷ್ಯನಿಗೆ ತಾಳ್ಮೆ ಬಹಳ ಮುಖ್ಯ. ತಾಳ್ಮೆ ಇದ್ದರೆ ನಾವು ಅಂದುಕೊಂಡಿದ್ದೆಲ್ಲ ಸಾಧಿಸಲು ಸಾಧ್ಯ ಎಂದು ಪೂಜ್ಯ ಬೋದಿದತ್ತ ಥೇರೋ ಬಂತೇಜಿಯವರು ಬಂತೇಜಿ ಹೇಳಿದರು.ಗಂಗಾವತಿ ನಗರದ ೨೮ನೇ ವಾರ್ಡ್ ಚಲವಾದಿ ಓಣಿ, ಹಿರೇಜಂತಕಲ್ ಬೌದ್ಧ ಅನುಯಾಯಿಗಳು ಹಮ್ಮಿಕೊಂಡಿದ್ದ ಸನ್ನತಿ ಪಂಚಶೀಲ ಪಾದಯಾತ್ರೆಯ ಸ್ವಾಗತ ಸಮಾರಂಭದಲ್ಲಿ ಮಾತನಾಡಿ ಬಂತೇಜಿ ಪಂಚಶೀಲ ಪಠಣ ಮಾಡಿ ಅದರ ಮಹತ್ವವನ್ನು ತಿಳಿಸಿದರು. ಯಾವುದೇ ವ್ಯಕ್ತಿ ಕಳ್ಳತನ ಮಾಡಬಾರದು. ಮೋಸ, ವಂಚನೆ ಇಂತಹ ಕೆಟ್ಟ ದುಶ್ಚಟಗಳನ್ನು ಮಾಡಬಾರದೆಂದು ಬೌದ್ಧ ಬಂತೇಜಿ ಹೇಳಿದರು. ಈ ಪಂಚಶೀಲಯಾತ್ರೆಯ…

Read More

ವಿಶ್ವಕರ್ಮ ಸಮಾಜದ ಮೌನೇಶ್ವರ ದೇವಸ್ಥಾನದಲ್ಲಿ ಪಲ್ಲಕ್ಕಿ ಸೇವೆ ಹಾಗೂ ನೂತನ ಕಾರ್ಯಕಾರಿ ಮಂಡಳಿ ರಚನೆ.

ಗಂಗಾವತಿ: ನಗರದ ಹೊಸಳ್ಳಿ ರಸ್ತೆಯಲ್ಲಿರುವ ಶ್ರೀಗುರು ಮೌನೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್-೯ ಸೋಮವಾರ ಸಂಜೆ ೭:೩೦ ಕ್ಕೆ ಪಲ್ಲಕ್ಕಿ ಸೇವೆ ನಡೆಯಿತು. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾದ ನಾಗೇಶಕುಮಾರ ಕಂಸಾಲ ರವರ ನೇತೃತ್ವದಲ್ಲಿ ಗಂಗಾವತಿ ತಾಲೂಕ ವಿಶ್ವಕರ್ಮ ಸಮಾಜದ ಕಾರ್ಯಕಾರಿ ಮಂಡಳಿ ರಚನೆ ಮಾಡಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.ಕಾರ್ಯಕಾರಿ ಮಂಡಳಿ ರಚನೆ ಮಾಡಿ ಮಾತನಾಡಿದ ನಾಗೇಶಕುಮಾರ ಕಂಸಾಲರವರು ನಮ್ಮ ವಿಶ್ವಕರ್ಮ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿದ್ದು, ಸಮಾಜವನ್ನು ಬಲಪಡಿಸಿ ಶ್ರೇಯೋಭಿವೃದ್ದಿಗೊಳಿಸುವುದು ಅತ್ಯವಶ್ಯಕವಾಗಿದೆ. ಈ…

Read More

ಚಂಪಾ ಸೃಷ್ಟಿ ಪ್ರಯುಕ್ತ. ಶ್ರೀ ಕನ್ನಿಕಾ ಪರಮೇಶ್ವರಿ ದೇವಿಗೆ ಕಾರ್ತಿಕೋತ್ಸವದ

ಗಂಗಾವತಿ.. ನಗರದ ಹಿರೇಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜದ ನೇತೃತ್ವದಲ್ಲಿ. ಕಾರ್ತಿಕ ಮಾಸದ ಕೊನೆಯ ದಿನವಾದ ಶನಿವಾರದಂದು ಚಂಪಾ ಸೃಷ್ಟಿ, ( ಶ್ರೀ ಸುಬ್ರಹ್ಮಣ್ಯೇಶ್ವರ ಆಚರಣೆ) ಪ್ರಯುಕ್ತ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಗೆ ದೀಪೋತ್ಸವ ಅಪಾರ ಭಕ್ತಾದಿಗಳ ಮಧ್ಯೆ. ಶ್ರದ್ಧೆ ಭಕ್ತಿಯಿಂದ ಜರುಗಿತು.ಇದಕ್ಕೂ ಪೂರ್ವದಲ್ಲಿ. ಅಮ್ಮನವರಿಗೆ. ವಿಶೇಷ ಅಲಂಕಾರ. ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರು ಸಾಂಗತವಾಗಿ ನಡೆಸಿಕೊಟ್ಟರು. ಬಳಿಕ ವಾಸವಿ ಮಹಿಳಾ ಮಂಡಳಿಯ ಸದಸ್ಯರಿಂದ ಭಜನೆ, ಲಲಿತ ಸಹಸ್ರ ಪಾರಾಯಣ ಪಠಣ. ಇತರೆ ಕಾರ್ಯಕ್ರಮಗಳು ಜರುಗಿದವು. ಬಳಿಕ….

Read More

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಡಿಸೆಂಬರ್-10 ರಂದು ಬೆಳಗಾವಿ ಅಧಿವೇಶಕ್ಕೆ ಮುತ್ತಿಗೆ

ಗಂಗಾವತಿ: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಡಿಸೆಂಬರ್-10 ರಂದು ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಅನುಷ್ಠಾನಕ್ಕೆ ಒತ್ತಾಯಿಸಲಾಗುವುದು ಎಂದು ಪಂಚಮಸಾಲಿ ಸಮಾಜದ ಅಧ್ಯಕ್ಷ ನ್ಯಾಯವಾದಿ ಶಿವಪ್ಪ ಯಲಬುರ್ಗಿ ಹೇಳಿದರು. ಅವರು ಶನಿವಾರದಂದು ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕೂಡಲಸಂಗಮ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮಿಯವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪಂಚಮಸಾಲಿ ಸಮಾಜ ಬಾಂಧವರು ಬೆಳಗಾವಿ ಚಲೋ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 5000 ಅಧಿಕ ಸಮಾಜ ಬಾಂಧವರು…

Read More

ಮಾನಸ ಬುದ್ಧಿಮಾಂದ್ಯ ಶಾಲೆಯ ಮಕ್ಕಳ ಸಾಧನೆ. ಜಿಲ್ಲಾ ಮಟ್ಟಕ್ಕೆ ಪ್ರಥಮ.

ಕೊಪ್ಪಳ: ಅಂಗವಿಕಲರ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಯುಕ್ತಾಶ್ರಯದಲ್ಲಿ ಡಿಸೆಂಬರ್‌-3 ರಂದು ಜಿಲ್ಲಾ ಮಟ್ಟದ ವಿಶ್ವ ವಿಕಲಚೇತನ ದಿನಾಚರಣೆಯು ಕೊಪ್ಪಳ ಸಾವ೯ಜನಿಕ ಕ್ರೀಡಾಂಗಣದಲ್ಲಿ ನೇರೆವೇರಿದ ಕಾರ್ಯಕ್ರಮದಲ್ಲಿ ನಮ್ಮ ಅಂಗವಿಕಲರ ಪುನಶ್ಚೇತನ ಸಂಸ್ಥೆ A R.D ಮಾನಸಬುದ್ಧಿ ಮಾಂದ್ಯಮಕ್ಕಳು ಕ್ರೀಡೆಯಲ್ಲಿ 15 ಬಹುಮಾನ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಹಾಗೂ ಇದೆ ಸಂದರ್ಭದಲ್ಲಿ ಆಮೀರ ಹುಸೇನ್ ಎಂಬ ಬುದ್ಧಿ ಮಾಂದ್ಯ ವಿದ್ಯಾರ್ಥಿ ಹತ್ತನೇ ತರಗತಿಯಲ್ಲಿ ತೇರ್ಗಡೆ ಹೊಂದಿದ್ದು ಈ ಸಂದರ್ಭದಲ್ಲಿ ಸನ್ಮಾನಿಸಿ…

Read More

ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಾಧಕರಿಗೆ ಸನ್ಮಾನ.

ಗಂಗಾವತಿ: ಇಂದು ಗಂಗಾವತಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅಲ್ಲಮಪ್ರಭು ಬೆಟ್ಟದೂರು ಮತ್ತು ಸುವರ್ಣ ಕರ್ನಾಟಕ ಸಂಭ್ರಮ ಪ್ರಶಸ್ತಿ ಪಡೆದ ಡಾ|| ಚಂದ್ರಪ್ಪ ಇವರನ್ನು ಸನ್ಮಾನಿಸಲಾಯಿತು. ರಾಜ್ಯೋತ್ಸವದ ಅಂಗವಾಗಿ ಸಂಸ್ಥೆಯಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಲ್ಲಮಪ್ರಭು ಬೆಟ್ಟದೂರು ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡುತ್ತಾ ತಮ್ಮ ಬದುಕಿನ ಹಲವು ಘಟನೆಗಳನ್ನು ಹಂಚಿಕೊಳ್ಳುತ್ತ “ಕೊಪ್ಪಳ ಜಿಲ್ಲೆ ಮಾಡುವಾಗ ಎಲ್ಲರೂ ನಮ್ಮನ್ನು…

Read More

ಡಿಸೆಂಬರ್ 6 ರಂದು ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥಾಪನಾ ದಿನಾಚರಣೆ: ಶ್ರೀ ಕೊಟ್ಟೂರು ಮಹಾಸ್ವಾಮಿಗಳು.

ಗಂಗಾವತಿ. ನಗರದ ಅತ್ಯಂತ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥಾಪರ ದಿನಾಚರಣೆ ಡಿಸೆಂಬರ್ 6 ರಂದು ಶ್ರೀ ಕೊಟ್ಟೂರೇಶ್ವರ ಕಾಲೇಜಿನ ಆವರಣದಲ್ಲಿ ಬೆಳಿಗ್ಗೆ 10:30 ಕ್ಕೆ ಜರುಗಲಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಕಲ್ಮಠದ ಡಾ. ಕೊಟ್ಟೂರು ಮಹಾಸ್ವಾಮಿಗಳು ಹೇಳಿದರು. ಅವರು ಮಂಗಳವಾರದಂದು. ಕಾಲೇಜಿನ ಕಾರ್ಯಾಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥೆಯ ಸಂಸ್ಥಾಪಕ ಚೇತನರಾದ ಲಿಂಗೈಕ್ಯ ಶ್ರೀ ಚನ್ನಬಸವ ಸ್ವಾಮಿಗಳು ಕಲ್ಮಠ ಇವರ ಸಂಸ್ಕಣೆಯಲ್ಲಿ ಎರಡನೇ ವರ್ಷದ…

Read More
ಲೋಕಕಲ್ಯಾಣಾರ್ಥವಾಗಿ ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಆಚರಣೆ.

ಲೋಕಕಲ್ಯಾಣಾರ್ಥವಾಗಿ ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಆಚರಣೆ.

ಗಂಗಾವತಿ: ನಗರದ ಆನೆಗುಂದಿ ರಸ್ತೆಯ ಲಲಿತ್ ಮಹಲ್ ಹೋಟಲ್ ಎದುರಿನಲ್ಲಿರುವ ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ರವಿವಾರ ಲೋಕಕಲ್ಯಾಣಾರ್ಥವಾಗಿ ದೇವಸ್ಥಾನದ ಸಕಲ ಭಕ್ತಾದಿಗಳಿಂದ ದೀಪ ಬೆಳಗಿಸುವ ಮೂಲಕ ಕಾರ್ತಿಕೋತ್ಸವವನ್ನು ವಿಜೃಂಭಣೆಯಿAದ ನೆರವೇರಿಸಲಾಯಿತು ಎಂದು ಶ್ರೀ ತ್ರಯಂಬಕೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿಯಾದ ಆದಯ್ಯಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ವಕೀಲರು ದೀಪ ಬೆಳಗಿಸುವುದರ ಮೂಲಕ ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡು, ಕರುಣಾಳು ಬಾ ಬೆಳಕೆ ಮುಸುಕಿದೆ ಮಬ್ಬಿನಲಿ ಎಂಬ ಹಾಡಿನ ಮೂಲಕ ಕತ್ತಲಿನಿಂದ ಬೆಳಕಿನೆಡೆಗೆ ಹೋಗುವ ಉದ್ದೇಶದಿಂದ ಇಂದು…

Read More