ಗಂಗಾವತಿ: ತಾಲೂಕಿನ ಹಿರೇಬೇಣಕಲ್ ಗ್ರಾಮದಲ್ಲಿ ಜನವರಿ-೧೨ ರವಿವಾರ ಶ್ರೀ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಕ್ರೀಡೆ ಮತ್ತು ಸಾಂಸ್ಕೃತಿಕ ಯುವಕ ಸಂಘ ಹಾಗೂ ಜಿಲ್ಲಾ ನೆಹರು ಯುವ ಕೇಂದ್ರ ಮತ್ತು ಯುವ ಸಬಲೀಕರಣ ಕ್ರೀಡಾ ಇಲಾಖೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತಶ್ರಯದಲ್ಲಿ ಶ್ರೇಷ್ಠ ಸಂತ ಶ್ರೀ ಸ್ವಾಮಿ ವಿವೇಕಾನಂದರ ೧೬೨ನೆಯ ಜಯಂತ್ಯೋತ್ಸವ ಕಾರ್ಯಕ್ರಮ ಜರುಗಿತು.
ಈ ಜಯಂತ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೆಬ್ಬಾಳ ಬೃಹನ್ಮಠದ ಪೂಜ್ಯ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗಂಗಾವತಿಯ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಸಿದ್ದಲಿಂಗಪ್ಪಗೌಡ ಆರ್ ಪಾಟೀಲ್ ಅವರು ಹಾಗೂ ವೇದಿಕೆ ಮೇಲಿನ ಎಲ್ಲ ಮಹನೀಯರಿಂದ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಸ್ವಾಮಿ ವಿವೇಕಾನಂದರ ಕುರಿತು ಶ್ರೀ ಶಾಂತವೀರಯ್ಯ ಸ್ವಾಮಿ ಗಂಧದ ಶಿಕ್ಷಕರಿಂದ ಉಪನ್ಯಾಸ ನೀಡಲಾಯಿತು. ಕಾರ್ಯಕ್ರಮಕ್ಕೆ ಸುಗಮ ಸಂಗೀತವನ್ನು ಶಿವಲಿಂಗಯ್ಯ ಶಾಸ್ತಿçಗಳು ಮತ್ತು ರಿಜ್ವಾನ್ ಮುದ್ದಬಳ್ಳಿಯವರು ನೆರವೇರಿಸಿದರು.
ಈ ಜಯಂತ್ಯೋತ್ಸವ ನಿಮಿತ್ಯ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಹಾಗೂ ಸಿದ್ದಗಂಗಾ ಶ್ರೀ ಮೆಲೋಡೀಸ್ ಆರ್ಕೆಸ್ಟಾç ವತಿಯಿಂದ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಬೇಣಕಲ್ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ವಿಶೇಷ ಆಹ್ವಾನಿತರಾಗಿ ಗಂಗಾವತಿಯ ದಂತವೈದ್ಯರಾದ ಡಾ|| ಶಿವಕುಮಾರ್ ಮಾಲಿಪಾಟೀಲ್, ಆನಂದ್ ಕೊಟ್ರಪ್ಪ ಅಕ್ಕಿ, ಅನ್ನಪೂರ್ಣ ಮೇಡಂ, ಬಸವರಾಜ್ ಹೇಮಗುಡ್ಡ ವಕೀಲರು, ಗ್ರಾಮದ ಸಮಸ್ತ ಹಿರಿಯರು, ಸಂಘದ ಸರ್ವ ಸದಸ್ಯರು ಈ ನಾಡಿನ ಹೆಸರಾಂತ ಕಲಾವಿದರು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಚಂದ್ರಶೇಖರ್ ಕುಂಬಾರ್ ನಿರ್ವಹಿಸಿದರೆ, ಪ್ರಾಸ್ತಾವಿಕ ನುಡಿಯನ್ನು ಶ್ರೀ ಕನಕನಗೌಡ ಬಸಾಪುರ ನುಡಿದರು. ಸ್ವಾಗತ ಭಾಷಣವನ್ನು ಶ್ರೀ ನಾಗರಾಜ್ ಡಣಪೂರ ಮಾಡಿದರು.
ಬಸನಗೌಡ ಹೊಸಳ್ಳಿ, ಮಾಲತೇಶ್ ಕುಕುನೂರ್ ಸೇರಿದಂತೆ ಸಮಸ್ತ ಹಿರೇಬೇಣಕಲ್ ಗ್ರಾಮದ ಯುವಕ ಮಿತ್ರರು, ಶಾಲೆಯ ಮುದ್ದು ಮಕ್ಕಳು, ತಾಯಂದಿರು ಭಾಗವಹಿಸಿದ ಈ ಕಾರ್ಯಕ್ರಮವು ಅತ್ಯಂತ ಅಚ್ಚುಕಟ್ಟಾಗಿ ಸಂಜೆ ೬ ರಿಂದ ರಾತ್ರಿ ಒಂದು ಗಂಟೆಯವರೆಗೆ ಯಶಸ್ವಿಯಾಗಿ ನೆರವೇರಿತು ಎಂದು ಶ್ರೀ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಕ್ರೀಡೆ ಮತ್ತು ಸಾಂಸ್ಕೃತಿಕ ಯುವಕ ಸಂಘದ ಅಧ್ಯಕ್ಷರಾದ ಬಸನಗೌಡ ಹೊಸಳ್ಳಿ ಇವರು ವರದಿ ನೀಡಿದರು.