ಸನಾತನಕ್ಕೆ ಅಂತ್ಯ ಎಂಬುದು ಇಲ್ಲವೇ ಇಲ್ಲ. ಅದು ನಿರಂತರ ಶಾಶ್ವತ ಅಜರಾಮರ: ಪರಮಪೂಜ್ಯ ಶ್ರೀ ವಿದುಶೇಖರ ಮಹಾಸ್ವಾಮಿಗಳು

ಗಂಗಾವತಿ: ಅವಸಾನದ ಅಂಚಿನಲ್ಲಿದ್ದ ಸನಾತನ ಹಿಂದೂ ಧರ್ಮದ ಸಂರಕ್ಷಣೆಗಾಗಿ ಜನ್ಮ ತಾಳಿದ ಆದಿ ಗುರು ಶಂಕರಾಚಾರ್ಯರು ದೇಶದ ನಾಲ್ಕು ಭಾಗಗಳಲ್ಲಿ ಪೀಠಗಳನ್ನು ಸ್ಥಾಪಿಸುವುದರ ಮೂಲಕ ಸನಾತನ ಧರ್ಮದ ಸಂರಕ್ಷಕರಾಗಿ ಶ್ರೀಮಠದ ಪರಂಪರೆ ಮುಂದುವರೆಯುತ್ತಿದ್ದು ಹೀಗಾಗಿ ಸನಾತನಕ್ಕೆ ಅಂತ್ಯವೇ ಇಲ್ಲ ಅದು ಶಾಶ್ವತ ಅಜರಾಮರ ಎಂದು ಶೃಂಗೇರಿಯ ಕಿರಿಯ ಪೀಠಾಧಿಕಾರಿಗಳಾದ ಶ್ರೀ ವಿದುಶೇಖರ ಭಾರತೀಯ ತೀರ್ಥ ಸ್ವಾಮಿಗಳು ಆಶೀರ್ವಚನದಲ್ಲಿ ನುಡಿದರು.

ಅವರು ಶೃಂಗೇರಿಯ ಹಿರಿಯ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಅವರ ಸನ್ಯಾಸ ಸ್ವೀಕಾರ ಸುವರ್ಣೋತ್ಸವ ಸಂಭ್ರಮಾಚರಣೆ ಹಾಗೂ ವಿಜಯ ಯಾತ್ರೆ ಪ್ರಯುಕ್ತ ಗಂಗಾವತಿಯ ಶಂಕರ ಮಠಕ್ಕೆ ಆಗಮಿಸಿ ಮಂಗಳವಾರದಂದು ಧರ್ಮಸಭೆಯನ್ನು ಉದ್ದೇಶಿಸಿ ಆಶೀರ್ವದಿಸಿದರು. ಸನಾತನ ಎಂಬುದು ನಮ್ಮ ದೇಶದ ಪರಂಪರೆ ಹಾಗೂ ಸಂಸ್ಕೃತಿಯಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ವಿದೇಶಿಗರು ಸಹ ಇಲ್ಲಿಯ ಪದ್ಧತಿಗಳನ್ನು ಅನುಸರಿಸಿಕೊಳ್ಳುತ್ತಿರುವುದು ಕಾಣಬಹುದಾಗಿದೆ. ಇತರೆ ಅನ್ಯ ಧರ್ಮೀಯರ ಕಾಲದ ಸಂಕಷ್ಟದ ಸಂದರ್ಭದಲ್ಲಿ ಪುನರ್ ಸ್ಥಾಪಿಸಿದ ಕೀರ್ತಿಗೆ ಆದಿ ಗುರು ಶ್ರೀ ಶಂಕರಾಚಾರ್ಯರು ಪ್ರಥಮರು ಎಂದು ಹೇಳಬಹುದು. ಪುನರಪಿ ಜನನಂ ಪುನರಪಿ ಮರಣಂ ಎನ್ನುವಂತೆ ಹುಟ್ಟಿದ ಜನ್ಮ ಸಾರ್ಥಕವಾಗಲೂ ಗುಣಮಟ್ಟದ ಸಂಸ್ಕಾರಗಳನ್ನು ಮಾನವೀಯ ಮೌಲ್ಯಗಳನ್ನು. ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ. ಫಲವತ್ತಾದ ಭೂಮಿ ಒಂದಕ್ಕೆ ಯಾವ ಬೀಜವನ್ನು ನಾವು ಹಾಕಿ ನೀರು ಹಾಕಿ ಬೆಳೆಸುವುದು ಎಷ್ಟು ಮುಖ್ಯವೋ ಆ ಬೀಜದಲ್ಲಿರುವ ಗುಣಮಟ್ಟ ಅಂದರೆ ಸಂಸ್ಕಾರ ಅವಶ್ಯವಾಗಿರುತ್ತದೆ ಎಂದು ಹತ್ತು ಹಲವಾರು ಸಂದೇಶದ ಮಹಾತ್ಮಗಳನ್ನು ಕುರಿತು ಮಾಹಿತಿ ನೀಡಿದರು. ಜೊತೆಗೆ ಶೃಂಗೇರಿ ಪೀಠದ ೧೨ನೇ ಜಗದ್ಗುರುಗಳಾದ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳವರ ಅನುಗ್ರಹದಿಂದ ೧೩೩೬ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೊಳ್ಳುವುದರ ಮೂಲಕ ಸನಾತನದ ಸಂರಕ್ಷಣೆಗೆ ಆಳ್ವಿಕೆಯ ನಾಲ್ಕು ಮನೆತನಗಳು ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಹೀಗಾಗಿ ಅವರ ಹೆಸರನ್ನು ಶಂಕರ ಮಠದಲ್ಲಿ ನವೀಕೃತಗೊಂಡ ಭವನಕ್ಕೆ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳ ಹೆಸರನ್ನು ನಾಮಕರಣಗೊಳಿಸಬೇಕೆಂದು ಸಲಹೆ ನೀಡಿದರು. ಒಟ್ಟಾರೆ ದೇವರು ಒಬ್ಬನೇ ನಾಮ ಹಲವು ಎಂಬಂತೆ ಹರಿ ಹಾಗೂ ಹರ ದುಷ್ಟರ ಸಂಹಾರಕ್ಕಾಗಿ, ಶಿಷ್ಟರ ಸಂರಕ್ಷಣೆಗಾಗಿ ವಿವಿಧ ನಾಮದ ಅಡಿಯಲ್ಲಿ ದೇವರುಗಳಿಗೆ ಪ್ರಾರ್ಥಿಸಿಕೊಳ್ಳಲಾಗುತ್ತದೆ ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಶ್ರೀ ಮಠದ ಪರವಾಗಿ ಹಾಗೂ ಗಂಗಾವತಿಯ ಸಮಸ್ತ ನಾಗರೀಕರ ಪರವಾಗಿ ಅಭಿನಂದನಾ ಪತ್ರ ನೀಡಿ, ಗೌರವ ಸಮರ್ಪಣೆಯನ್ನು ನಾರಾಯಣರಾವ್. ವೈದ್ಯ ಹಾಗೂ ಮಹೇಶ್ ಭಟ್ ಜೋಶಿ ನೆರವೇರಿಸಿ ಗುರುಗಳ ಆಶೀರ್ವಾದ ಪಡೆದುಕೊಂಡರು. ಸಾವಿರಾರು ಭಕ್ತಾದಿಗಳು, ಆಸ್ತಿಕ ಬಂಧುಗಳು, ವಿವಿಧ ಸಮಾಜದ ಮುಖಂಡರು, ಅನ್ಯರೂ ಪಡೆದುಕೊಂಡರು.

Leave a Reply