ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳ ಮೂಲಭಾಷೆ: ಶರಣಬಸವ ತಾತನನವರು
ಗಂಗಾವತಿ: ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳ ಮೂಲಭಾಷೆಯಾಗಿದೆ. ಈ ಭಾಷೆಯು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ದೇವನಗರಲಿಪಿ ಎಂದು ಕರೆಯುತ್ತಾರೆ. ಈ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಭಾಷೆಯು ಯಾವುದೇ ಮತ, ಧರ್ಮಕ್ಕೆ ಮೀಸಲಾಗಿರುವುದಿಲ್ಲ. ಯಾರು ಬೇಕಾದರೂ ಕಲಿಯಬಹುದು, ಇದಕ್ಕೆ ವಯೋಮಿತಿ ಇರುವುದಿಲ್ಲ ಎಂದು ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪೂಜ್ಯ ಶ್ರೀ ಶರಣಬಸವ ತಾತನವರು ತಿಳಿಸಿದರು.ಅವರು ಡಿಸೆಂಬರ್-೮ ಭಾನುವಾರ ನಗರದ ಹೊಸಳ್ಳಿ ರಸ್ತೆಯ ಕನ್ನಡ ಜಾಗೃತಿ ಭವನದಲ್ಲಿ…