ಯುವ ಜನಾಂಗದ ದೇಶದ ಶಕ್ತಿಯಾಗಲಿ – ಕಲ್ಮಠ ಶ್ರೀಗಳು

ಭಾರತಕ್ಕೆ ಸ್ವಾತಂತ್ರ್ಯ ದೊರೆತು 79 ವರ್ಷಗಳು ಕಳೆದಿವೆ.

ಈ ಸುದೀರ್ಘ ಅವಧಿಯಲ್ಲಿ ಭಾರತ ದೇಶವು ವಿಜ್ಞಾನ ,ತಂತ್ರಜ್ಞಾನ, ಆರೋಗ್ಯ ,ಶಿಕ್ಷಣ, ಬಹ್ಯಾಕಾಶ ಸಂಶೋಧನೆ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಯನ್ನು ಮಾಡಿ ಅಪಾರ ಪ್ರಗತಿಯನ್ನು ಸಾಧಿಸಿದೆ.

ಆದಾಗ್ಯೂ ಭಾರತವನ್ನು ಮತ್ತಷ್ಟು ಜಾಗತಿಕ ಶಕ್ತಿಯನ್ನಾಗಿ ರೂಪಿಸುವ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲೆ ಇದೆ.

ಯುವಜನತೆ ಹೊಸ ಹೊಸ ಆಲೋಚನೆ, ಕ್ರಿಯಾಶೀಲತೆ, ಅನನ್ಯ ಆವಿಷ್ಕಾರಗಳಿಂದ ದೇಶದ ಪ್ರಗತಿಗೆ ಚೈತನ್ಯ ಶಕ್ತಿಯನ್ನು ತುಂಬಬೇಕಾಗಿದೆ.

ವಿಶ್ವದಲ್ಲಿಯೇ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಭಾರತಕ್ಕೆ ಅದೇ ಭಾರವಾಗದೆ ದೇಶದ ಶಕ್ತಿಯಾಗಿ ಮಾರ್ಪಡಬೇಕೆಂದು ಗಂಗಾವತಿಯ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕೊಟ್ಟೂರು ಮಹಾಸ್ವಾಮಿಗಳು ಹೇಳಿದರು.

ಅವರು ಇಂದು ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆದ 79ನೇ ಭಾರತ ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

ಸಾಧನೆ ಮಾಡಿರುವ ಕಾಶಿ ವಿಶ್ವನಾಥ್ ಸಿರಿಗೇರಿ, ನಾಗರಾಜ್ ಇಂಗಳಗಿ, ಎಂ ಜೆ ಶ್ರೀನಿವಾಸ್, ಮತ್ತು ಹರೀಶ್ ಕುಲಕರ್ಣಿಯವರಿಗೆ ಈ ವರ್ಷದಿಂದ ಸಂಸ್ಥೆ ಪ್ರಾರಂಭಿಸಿದ ಕೊಟ್ಟೂರೇಶ್ವರ ಪ್ರಶಸ್ತಿ ಪ್ರಧಾನಿಸಿತು.

ಸಂಸ್ಥೆಗೆ ನೂತನ ಸದಸ್ಯರಾಗಿ ನೇಮಕಗೊಂಡ ರಾಚಯ್ಯ ಸ್ವಾಮಿ, ಹುಚ್ಚೇಶ್ವರ ಮಠ ಹಾಗೂ ಸಂಸ್ಥೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರದ ವಿ.ಜಿ. ಯಾವಗಲ್ ,ಪ್ರಕಾಶ್ ಗೌಡ ಪಾಟೀಲ್, ಬಾಲಪ್ಪ ರವರನ್ನು ಹಾಗೂ ಮುಂಬಡ್ತಿ ಪಡೆದ ಚಂದ್ರಶೇಖರ, ಯು.ಎಂ. ಬಸವರಾಜ್, ವಿಶ್ವನಾಥ್ ಹಿರೇಮಠರನ್ನು ಸನ್ಮಾನಿಸಲಾಯಿತು.

ಅದೇ ರೀತಿ ಕೊಟ್ಟೂರೇಶ್ವರ ಸಂಸ್ಥೆಯಲ್ಲಿ ಎಲ್ಕೆಜಿಯಿಂದ ಪಿಜಿ ಅವರಿಗೆ ಅಧ್ಯಯನ ಮಾಡಿದ ರಕ್ಷಿತಾ ಹಾಗೂ ಸುಬ್ರಮಣ್ಯರನ್ನು ಮತ್ತು 2024- 25 ನೇ ಸಾಲಿನಲ್ಲಿ ಶಾಲಾ-ಕಾಲೇಜುಗಳಿಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ್ ಪ್ರಸ್ತಾವಿಕವಾಗಿ ಮಾತನಾಡಿ ಸಂಸ್ಥೆ ನಡೆದು ಬಂದ ಹಾದಿಯನ್ನು ವಿವರಿಸಿದರು.

ದೈಹಿಕ ನಿರ್ದೇಶಕರಾದ ಹೊನ್ನಪ್ಪ ಮಾಸ್ತಮ್ಮ ನವರ ನೇತೃತ್ವದಲ್ಲಿ ಸೇವಾದಳ, ಸ್ಕೌಟ್ಸ್ ಎನ್ಎಸ್ಎಸ್, ತಂಡಗಳಿಂದ ಧ್ವಜ ಕವಾಯತು, ನೆರವೇರಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಕೆ ಚನ್ನಬಸಯ್ಯ ಸ್ವಾಮಿ, ಕಾರ್ಯದರ್ಶಿಗಳಾದ ಶರಣೇಗೌಡ ಮಾಲಿಪಾಟೀಲ್ ,ಕೋಶಾಧ್ಯಕ್ಷರಾದ ಸಿಂಗನಾಳ ಸುರೇಶ್, ನಿರ್ದೇಶಕರಾದ ಕಳಕನ ಗೌಡ ಪಾಟೀಲ್ ಲಿಂಗಪ್ಪಕಮತಗಿ ಹಾಗೂ ಎಲ್ಲಾ ಶಾಲಾ ಕಾಲೇಜುಗಳ ಪ್ರಾಚಾರ್ಯರು ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಶಿಕ್ಷಕರಾದ ಮುತ್ತನಗೌಡ ಮತ್ತು ರೇಣುಕಾ ನಿರ್ವಹಿಸಿದರು

ಶಿಕ್ಷಣದ ಜೊತೆಗೆ ಸಂಸ್ಕಾರವು ಅಗತ್ಯ: ನಾಗರಾಜ್ ಗುತ್ತೇದಾರ್

ಗಂಗಾವತಿ: ನಗರದ ಪ್ರತಿಷ್ಠಿತ ಸಂಕಲ್ಪ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವು ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಕಾರ್ಯಧ್ಯಕ್ಷರಾದ ನಾಗರಾಜ್ ಎಸ್ ಗುತ್ತೇದಾರ್ ವಕೀಲರು ನಮ್ಮ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಬದುಕಿಗೆ ಬೇಕಾದ ಮೌಲ್ಯಗಳನ್ನು ಕಲಿಸುವ ಮೂಲಕ ಉದಾತ್ತ ಮೌಲ್ಯಗಳನ್ನು ಪೋಷಿಸುವ ಹಾಗೂ ಅವುಗಳನ್ನು ಯಥಾವತ್ತಾಗಿ ಸಮಾಜಕ್ಕೆ ಮುಂದುವರಿಸುವ ಕಾರ್ಯವನ್ನು ಮಾಡುತ್ತಿದೆ.

ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೊತೆಗೆ ಜೀವನದ ಉದಾತ್ತ ಮೌಲ್ಯಗಳು, ಆದರ್ಶಗಳು, ಸಂಸ್ಕಾರಗಳು, ಹಾಗೂ ನಮ್ಮ ಹಿರಿಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಸಂದೇಶ ನೀಡಿದರು.

ಇಂದಿನ ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳ ಒತ್ತಡಕ್ಕೆ ವಿದ್ಯಾರ್ಥಿಗಳು ಒಳಗಾಗದೆ ಬದುಕಿನ ನೈಜ ತಿರುಳನ್ನು ಆಸ್ವಾದಿಸುವ ಕಡೆ ಗಮನಹರಿಸಬೇಕಿದೆ ಎಂದು ತಿಳಿಸಿದರು.

ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾಗಿದ್ದು ಈ ಹಂತದಲ್ಲಿ ಪ್ರತಿಯೊಬ್ಬರು ಏಕಾಗ್ರತೆಯಿಂದ ಅಧ್ಯಯನ ಮಾಡಿದಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಉನ್ನತ ಹುದ್ದೆಗೆ ಏರುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಹೇಮಂತ್ ರಾಜ್ ಕಲ್ಮಂಗಿಯವರು ವಿದ್ಯಾರ್ಥಿಗಳ ಸಾಧನೆಯನ್ನು ಮೆಲುಕುಹಾಕಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷರು, ಪ್ರಾಂಶುಪಾಲರಾದ ಎಂ.ಆರ್ ಮಂಜು ಸ್ವಾಮಿ ಅವರು ವಿದ್ಯಾರ್ಥಿಗಳು ಕಠಿಣ ಪರಿಶ್ರಮದೊಂದಿಗೆ ಕಾರ್ಯನಿರ್ವಹಿಸಿದಾಗ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯ.

ವಿದ್ಯಾರ್ಥಿಗಳು ಉತ್ತಮ ಜೀವನ ನಡೆಸಲು ಇಂದಿನ ಕಠಿಣ ಪರಿಶ್ರಮವೇ ಕಾರಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಅಮಿತ್ ಕುಮಾರ್ ರೆಡ್ಡಿ, ಪದವಿ ಕಾಲೇಜಿನ ಪ್ರಾಚಾರ್ಯ ಬಸಪ್ಪ ಶಿರಿಗೇರಿ, ಉಪನ್ಯಾಸಕರಾದ ಶಂಕರಲಿಂಗಪ್ಪ ಕೊಪ್ಪದ, ನಾಗರಾಜ್ ಹೆಚ್., ಅಶೋಕ್, ಶಂಕರ್ ವಗರನಾಳ, ಶರಣಬಸವ, ಬಸನಗೌಡ ಹಾಗೂ ಅಧ್ಯಾಪಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಅವರ ಪಾಲಕರನ್ನು ಸಂಸ್ಥೆಯ ವತಿಯಿಂದ ಗೌರವಿಸಿ ಸತ್ಕರಿಸಲಾಯಿತು.

ಮಾಹಿತಿಗಾಗಿ:
ಬಸಪ್ಪ ಶಿರಿಗೇರಿ
ಪ್ರಾಚಾರ್ಯರು,
ಸಂಕಲ್ಪ ಮಹಿಳಾ ಪದವಿ ಮಹಾವಿದ್ಯಾಲಯ ಗಂಗಾವತಿ
ಮೊ.ನಂ: ೯೦೧೯೧೯೮೦೬೭

ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ|| ಅಲ್ಲೂರಿ ಸತ್ಯನಾರಾಯಣರಾಜು ಅವರ ಜೀವನ ಕುರಿತ ಪುಸ್ತಕ ಬಿಡುಗಡೆ

ಗಂಗಾವತಿ: ೭೯ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಗಂಗಾವತಿ ಸಂಸ್ಥೆ, ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ್ ಮಾಲಿಪಾಟೀಲ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅಪ್ರತಿಮ ಸ್ವತಂತ್ರ ಹೋರಾಟಗಾರರಾದ ಶ್ರೀ ಅಲ್ಲೂರಿ ಸತ್ಯನಾರಾಯಣರಾಜು ಅವರ ಜೀವನ ಕುರಿತ ಎಸ್.ಡಿ.ವಿ ಅಜೀಜ್ ಅವರು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ ಪುಸ್ತಕ ಬಿಡುಗಡೆಯಾಯಿತು.

ಪುಸ್ತಕದ ಬಗ್ಗೆ ವಿವರವಾಗಿ ಖ್ಯಾತ ಕಣ್ಣಿನ ತಜ್ಞರಾದ ಡಾ|| ಹನುಮಂತಪ್ಪ ಹಾಗೂ ಡಾ|| ಶಿವಕುಮಾರ ಮಾಲಿಪಾಟೀಲ್ ಅವರು ಮಾತನಾಡಿದರು.

ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ ಅವರು, ದೇಶಪ್ರೇಮಿಯಾಗಿದ್ದ ಅಲ್ಲೂರಿ ಸತ್ಯನಾರಾಯಣರಾಜು ಅವರ ಪುಸ್ತಕ ಕನ್ನಡದಲ್ಲಿ ಬರಬೇಕು ಆಗ ಅಂತಹ ಹೋರಾಟಗಾರರ ಪರಿಚಯ ಕನ್ನಡಿಗರಿಗೂ ಆಗುತ್ತದೆ ಎಂದರು.

ಆದರ್ಶ ದಂಪತಿಗಳಾದ ದಿ. ಅಲ್ಲೂರಿ ಸತ್ಯನಾರಾಯಣರಾಜು ಹಾಗೂ ದಿ. ಅನ್ನಪೂರ್ಣಮ್ಮ ಅವರ ಪುತ್ರರಾದ ಡಾ. ಸೋಮರಾಜು, ಅವರ ತಂದೆಯವರ ಜೀವನ ಚರಿತ್ರೆಯನ್ನು ಪುಸ್ತಕ ರೂಪದಲ್ಲಿ ತಂದಿದ್ದು ಸಾರ್ಥಕ ಕೆಲಸವೆಂದುಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವೈದ್ಯರಾದ ಡಾ. ಚಂದ್ರಪ್ಪ ವಹಿಸಿದ್ದರು. ನಂತರ ವಸುಧಾ ಪೌಂಢೇಷನ್ ಹೈದರಾಬಾದ್ ಅವರು ದಾನವಾಗಿ ನೀಡಿದ ಬೆಡ್‌ಶೀಟು, ಸೀರೆಗಳನ್ನು ಅನಾಥಾಶ್ರಮಕ್ಕೆ ಹಸ್ತಾಂತರಿಸಲಾಯಿತು ಹಾಗೂ ವಿಕಲಚೇತನ ಶಾಲೆಯ ಮಕ್ಕಳಿಗೆ ಪುಸ್ತಕ, ಬೆಡ್‌ಶೀಟುಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ|| ಮಾದವಶೆಟ್ಟಿ, ಡಾ|| ಮಲ್ಲನಗೌಡ, ಡಾ|| ಸುಲೋಚನಾ ಚಿನಿವಾಲರ್, ಡಾ|| ಎ.ಎಸ್.ಎನ್ ರಾಜು, ಡಾ|| ನಾಗರಾಜ, ಸಿದ್ದನಗೌಡ ವಕೀಲರು, ಡಾ|| ಮಧುಸೂದನ್, ಡಾ|| ಪ್ರಶಾಂತ ದೇಸಾಯಿ, ರಾಜಶೇಖರ ಹೇರೂರ್, ಸುಭಾಷ್ ಬಂಬ್, ಚೇತನ ಹಿರೇಮಠ, ಲಯನ್ಸ್ ಕ್ಲಬ್ ಖಜಾಂಚಿ ಶಿವಪ್ಪ ಗಾಳಿ ಇತರರಿದ್ದರು.

ವರದಿ:
ಡಾ|| ಶಿವಕುಮಾರ ಮಾಲಿಪಾಟೀಲ್
ಅಧ್ಯಕ್ಷರು, ಲಯನ್ಸ್ ಕ್ಲಬ್, ಗಂಗಾವತಿ
ಮೊ ನಂ: ೯೪೪೮೩೦೨೭೭೫

ಮಹಾನ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ. ಸತ್ಯ ಧರ್ಮ ಪಾಲನೆಯ ಶ್ರೀ ಕೃಷ್ಣ ಜನ್ಮದಿನದ ಉದ್ದೇಶ: ಸವಿತಾ ನೇತ್ರಾಜ್ ಗುರುವಿನ ಮಠ.

ಗಂಗಾವತಿ ನಗರದ ಪ್ರತಿಷ್ಠಿತ ಶಾಲೆಯಾದ ಮಹಾನ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ.

ವಿಷ್ಣುವಿನ ದಶಾವತಾರದಲ್ಲಿ ಒಂದಾದ ಶ್ರೀ ಕೃಷ್ಣ ಪರಮಾತ್ಮ ಸತ್ಯಧರ್ಮನ್ಯಾಯ ಸಂದೇಶದ ಪ್ರತೀಕವಾಗಿ ಕಂಗೊಳಿಸುತ್ತಿದ್ದಾರೆ ಎಂದು ಮುಖ್ಯೋಪಾಧ್ಯಾಯನಿ ಸವಿತಾ ನೇತ್ರಾಜ್ ಗುರುವಿನಮಠ ಹೇಳಿದರು.

ಅವರು ಶಾಲೆಯಲ್ಲಿ ಆಯೋಜಿಸಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ದೇಶದ ಎರಡು ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಮಧ್ಯೆ ಜರುಗಿದ ಯುದ್ಧದಲ್ಲಿ ಶ್ರೀ ಕೃಷ್ಣನು ಧರ್ಮದ ಪರವಾಗಿ ಪಾಂಡವರಿಗೆ ಜಯಶಾಲಿ ಆಗುವಂತೆ ಹರಿಸಿದನು.

ಜೊತೆಗೆ ಅಧರ್ಮದಿಂದ ಕೂಡಿದ್ದ ಕೌರವರು ಸೋಲಲು ಶ್ರೀ ಕೃಷ್ಣನೇ ಕಾರಣರಾಗಿದ್ದು, ಅವರ ತತ್ವ ಸಿದ್ಧಾಂತಗಳನ್ನು ಬಾಲ್ಯದಲ್ಲಿ ಮಕ್ಕಳು ಅಳವಡಿಸಿಕೊಳ್ಳಬೇಕೆಂಬುವ ಉದ್ದೇಶದಿಂದ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಲಂಕಾರಗೊಳಿಸಿದ ತೊಟ್ಟಿಲಿಗೆ ಪೂಜಿ ಸಲ್ಲಿಸಿ ಶ್ರೀ ಕೃಷ್ಣ ಜಯಂತೋತ್ಸವ ಆಚರಿಸುವುದರ ಜೊತೆಗೆ ವೇಷಧಾರಿ ಶ್ರೀ ಕೃಷ್ಣ ಹಾಗೂ ರಾಧೆಯ ಬಾಲ್ಯ ತುಂಟತನ ಮೊಸರು ಗಡಿಗೆ ಆಟ ಬೆಣ್ಣೆ ಕದಿಯೋ ರೂಪಕಗಳನ್ನು ನೆರವೇರಿಸಿ, ಸೋದರ ಮೂಲಕ ಅರ್ಥಪೂರ್ಣ ಆಚರಣೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಮಹಾನ್ ಕಿಡ್ಸ್ ಶಾಲೆಯ ಮುಖ್ಯಸ್ಥರಾದ ನೇತ್ರಾಜ್ ಗುರುವಿನ ಮಠ, ಶಾಲೆಯ ಸಿಬ್ಬಂದಿ ವರ್ಗದವರಾದ ಪೂರ್ಣಿಮಾ, ಕುಮುದಿನಿ, ನಾಗರತ್ನ, ಲತಾಶ್ರೀ, ರೇಷ್ಮಾ, ಶಿಲ್ಪ, ವೈಷ್ಣವಿ, ಸುಮಾ, ಜ್ಯೋತಿ, ಮಂಜುನಾಥ, ಪಾಲಕರಾದ ಭೀಮರಾಯ, ಅಂತರಾಷ್ಟ್ರೀಯ ಕಲಾವಿದ ಭೀಮರಾಯ ವಕೀಲರು, ಜಾನವಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಾಹಿತಿಗಾಗಿ:
ನೇತ್ರಾಜ್ ಗುರುವಿನಮಠ
ಅಧ್ಯಕ್ಷರು, ಮಹಾನ್ ಕಿಡ್ಸ್ ಸ್ಕೂಲ್, ಗಂಗಾವತಿ.
ಮೊ.ನಂ: ೯೯೮೬೧೬೭೩೬೭

ರಾಂಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ.

ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ರಾಂಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯರಾದ ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ, ಶಿಕ್ಷಕರು, ಶಾಲಾ ಮಕ್ಕಳು, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಊರಿನ ಗುರುಹಿರಿಯರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿ, ಸ್ವಾತಂತ್ರ್ಯದ ಮಹತ್ವವನ್ನು ಹೊಗಳುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಂಡಿಸಿದರು.

ಗಂಗಾವತಿ ಮಾನ್ಯ ಶಾಸಕರಿಂದ ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ

ಇಂದು ಗಂಗಾವತಿ ತಾಲೂಕ ಪಂಚಾಯಿತಿ ಮತ್ತು ಗಂಗಾವತಿ ನಗರಸಭೆ ಹಾಗೂ ಗಂಗಾವತಿ ಕ್ಷೇತ್ರ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ತಾಲೂಕ ಕ್ರೀಡಾಂಗಣದಲ್ಲಿ ಜರುಗಿತು.

ಇದರ ಪ್ರಯುಕ್ತ ನಡೆದ ಅನೇಕ ಸ್ಪರ್ಧೆಗಳಲ್ಲಿ ಶ್ರೀ ಚನ್ನಬಸವ ಸ್ವಾಮಿ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಶ್ರೀಮತಿ ಗಂಗಮ್ಮ ಗುರುಪಾದಗೌಡ ಮಾಲಿ ಪಾಟೀಲ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕುಮಾರ್ ಮಣಿಕಂಠ ತಂದೆ ರಮೇಶ್ ಇವನು ಸ್ಥಳದಲ್ಲಿಯೇ ಪ್ರಬಂಧ ಬರೆದು ದ್ವಿತೀಯ ಬಹುಮಾನವನ್ನು ಪಡೆದಿರುತ್ತಾನೆ.

ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ ಗಂಗಾವತಿಯ ಶಾಸಕರು ಸನ್ಮಾನ್ಯ ಶ್ರೀ ಜನಾರ್ದನ್ ರೆಡ್ಡಿ ಅವರು ವಿದ್ಯಾರ್ಥಿಗೆ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ನೀಡಿ ಅಭಿನಂದಿಸಿದ್ದಾರೆ.

ಪ್ರಯುಕ್ತ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು ಸರ್ವ ಸದಸ್ಯರು ಮುಖ್ಯೋಪಾಧ್ಯಾಯರು ಈತನ ಪ್ರತಿಭೆಗೆ ಶ್ಲಾಘಿಸಿದ್ದಾರೆ.

ಗಂಗಾವತಿ ನಗರದ ಕೊಟ್ಟೂರು ಬಸವೇಶ್ವರ ಸಭಾಂಗಣ ಮುಂಬಾಗದಲ್ಲಿ ಕನ್ನಡ ಕನಸು ಯುಟ್ಯೂಬ್ ಚಾನೆಲ್ ಉದ್ಘಾಟನೆ

ಗಂಗಾವತಿ ನಗರದ ಕೊಟ್ಟೂರು ಬಸವೇಶ್ವರ ದೇವಾಲಯ ಮುಂಭಾಗದಲ್ಲಿ ಕನ್ನಡ ಕನಸು ಯುಟ್ಯೂಬ್ ಚಾನೆಲ್ ಉದ್ಘಾಟಸಿತು.

ಹುಸೇನಪ್ಪ ಹಂಚಿನಾಳ ವಕೀಲರು ಮಾಜಿ ನಗರಸಭೆ ಅಧ್ಯಕ್ಷ, ಈ ದಿನಮಾನಗಳಲ್ಲಿ ಇಂತಹ ನೂರಾರು ಯುಟ್ಯೂಬ್ ಚಾನೆಲ್ ಗಳು ಹುಟ್ಟುತ್ತವೆ.

ಆದರೆ ಆ ಚಾನೆಲ್ ಗಳು ತಾತ್ಕಾಲಿಕವಾಗಿ ಪ್ರಚಾರದಲ್ಲಿ ಇರುತ್ತದೆ. ಅದೇ ರೀತಿಯಾಗಿ ನಿಮ್ಮ ಚಾನೆಲ್ ಕೂಡ ಆ ರೀತಿ ಆಗಬಾರದು. ನೀವು ನೋಡಿಕೊಳ್ಳಬೇಕು ಎಂದರು.

ನೀವು ರಾಮಕೃಷ್ಣ ಅವರು ಮೊದಲಿನಿಂದ ವಿವಿಧ ವೃತ್ತಿಗಳ ಮೂಲಕವೇ ಪ್ರಸಿದ್ಧವಾದವರು ಮತ್ತು ಮಾಧ್ಯಮ ವೃತ್ತಿಯಲ್ಲಿ ಕೂಡ ಹೆಸರುವಾಸಿಯಾದವರು.

ಈಗ ಸ್ವಂತ ತಮ್ಮ ಕೈಚಳಕದಿಂದ ಕನ್ನಡ ಕನಸು ಎಂಬ ಹೊಸ ಯೂಟ್ಯೂಬ್ ಚಾನೆಲ್ ಚಾಲ್ತಿಗೆ ತಂದಿರುವುದು ತುಂಬಾ ಸಂತೋಷದ ವಿಷಯ.

ಈ ಚಾನೆಲ್ ಮುಂದಿನ ದಿನಮಾನಗಳಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲೆಂದು ಹಾರೈಸಿದರು.

ಅದೇ ರೀತಿಯಾಗಿ ವಿರುಪಾಕ್ಷಪ್ಪ ಸಿರವಾರ ಕಲಾವಿದರು ಮಾತನಾಡಿ ಕನ್ನಡ ನ್ಯೂಸ್ ಚಾನೆಲ್ ಗೆ ನಮ್ಮ ಗಂಗಾವತಿ ನಗರದಲ್ಲಿ ನಡೆಯುವಂತಹ ಸಾಂಸ್ಕೃತಿಕ ನಾಟಕಗಳು ಮತ್ತು ಸ್ಪೋರ್ಟ್ಸ್ ಗಳು ಇಂತಹ ಕಾರ್ಯಕ್ರಮಗಳಿಗೆ ಇವರನ್ನ ಆಹ್ವಾನಿಸಿ ಅವರಿಗೆ ಪ್ರಚಾರಪಡಿಸಲಿಕ್ಕೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ದಲಿತ ಹೋರಾಟಗಾರ ಹುಲುಗಪ್ಪ ಮಾಗಿ, ವೀರಭದ್ರಪ್ಪ ನಾಯಕ್, ರವಿಕುಮಾರ್ ನಿತ್ಯ ಕರ್ನಾಟಕ ಸಂಪಾದಕರು, ಪ್ರಕಾಶ್ ವಕೀಲರು, ರಮೇಶ್ ಕೋಟೆ, ಭೀಮ ಘರ್ಜನೆ ಸಂಪಾದಕರು, ಮಾರ್ಕಂಡೇಯ, ಆರ್ ಚನ್ನಬಸವ ವರದಿಗಾರರು, ಎಸ್ ಬಿ ಖಾದ್ರಿ.

ಶ್ರೀಮತಿ ಅರುಣ ದೇವಿ ಪ್ರಾಂಶುಪಾಲರು ವಿಸ್ಡಮ್ ಶಾಲೆ, ಅಕ್ಷರ ಪಬ್ಲಿಕ್ ಶಾಲೆಯ ಪ್ರಾಂಶುಪಾಲರು ಶ್ರೀಮತಿ ಹೀಮಾ ಸೇರಿದಂತೆ ಇತರರು ಚಾನೆಲ್ ಗೆ ಸಂತಸದಿಂದ ಶುಭ ಹಾರೈಸಿದರು.

ಕಾರಾಗೃಹದಲ್ಲಿ ಸೇವಾ ಭಾರತಿಯಿಂದ ರಕ್ಷಾ ಬಂಧನ ಸಮಾಜದಲ್ಲಿ ಸಾಮರಸ್ಯದ ಜಿವನಕ್ಕೆ ನಾಗರಾಜ್ ಗುತ್ತೇದಾರ ಸಂದೇಶ

ಕೊಪ್ಪಳ: ನಗರದ ಕೇಂದ್ರ ಕಾರಾಗೃಹದಲ್ಲಿ ಸೇವಾ ಭಾರತಿಯ ವಿದ್ಯಾ ವಿಕಾಸ ಪ್ರಕಲ್ಪದ ವತಿಯಿಂದ ರಕ್ಷಾಬಂಧನ ಆಚರಿಸಲಾಯಿತು.

ಸೇವಾಭಾರತಿ ಸಂಘಟನೆಯ ಜಿಲ್ಲಾ ಸಹಸಂಯೋಜಕ ನಾಗರಾಜ ಗುತ್ತೇದಾರ ಮಾತನಾಡಿ ಕಾರ್ಯಕ್ರಮದ ಉದ್ದೇಶ, ತಪ್ಪು ಮಾಡುವುದು ಸಹಜ, ಆದರೆ ತಪ್ಪನ್ನು ತಿದ್ದಿಕೊಂಡು ಉತ್ತಮ ಪ್ರಜೆಯಾಗಿ ಬದುಕು ನಡೆಸಬೇಕು ಎಂದರು.

ಅವರು ಮಂಗಳವಾರ ಕಾರಾಗೃಹದ ಸುಮಾರು ೧೫೦ಕ್ಕೂ ಹೆಚ್ಚು ಕೈದಿಗಳು ಮತ್ತು ಸಿಬ್ಬಂದಿಗಳಿಗೆ ರಕ್ಷೆ ಕಟ್ಟಿ ಆಚರಿಸಿದ ರಕ್ಷಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುರಾತನ ಕಾಲದಿಂದಲೂ ನಮ್ಮ ದೇಶದಲ್ಲಿ ರಕ್ಷಾ ಬಂಧನ ಆಚರಿಸಲಾಗುತ್ತದೆ.

ಮನೆ, ಮನೆಯಲ್ಲಿ ಮನಸ್ಸುಗಳನ್ನು ಜೋಡಿಸುವುದು ಮತ್ತು ಸಹೋದರಿಯರ ರಕ್ಷಣೆ ತಮ್ಮ ಜವಬ್ದಾರಿ ಎಂಬ ಸಂಕಲ್ಪ ಮಾಡುವ ಪುರುಷರು ಇದಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸಿರುವುದು ನಾವು ತಿಳಿದಿದ್ದೇವೆ.

ಪ್ರಸ್ತುತ ಎಲ್ಲರೂ ಪರಸ್ಪರ ರಕ್ಷೆ ಕಟ್ಟಿಕೊಂಡು ಉತ್ತಮ ನಾಗರೀಕರಾಗಿ ಸನ್ನಡತೆಯ ಜೀವನ ನಡೆಸಲು ಸಂಕಲ್ಪ ಮಾಡುವ ನಿಟ್ಟಿನಲ್ಲಿ ಇಂದು ರಕ್ಷಾ ಬಂಧನ ಆಚರಿಸುತ್ತಿದ್ದೇವೆ ಎಂದರು.

ಮುಂದಿನ ದಿನಗಳಲ್ಲಿ ಈ ಸುಧಾರಣಾ ಗ್ರಹದಲ್ಲಿ ಉತ್ತಮ ಸನ್ನಡತೆಯನ್ನು ಅಳವಡಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಸಹಬಾಳ್ವೆಯ ಜೀವನದಲ್ಲಿ ತೊಡಗಿಕೊಳ್ಳುವ ಮೂಲಕ ಸಮಾಜದ ಸಾಮರಸ್ಯ ಕಾಪಾಡುವ ಮೂಲಕ ಉತ್ತಮ ನಾಗರೀಕರಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸೇವಾ ಭಾರತಿ ಜಿಲ್ಲಾ ಸಮಿತಿ ಸದಸ್ಯೆ ಮಹಾಲಕ್ಷ್ಮಿ ಕಂದಾರಿ ಮಾತನಾಡಿ, ನಾವು ಮನೆಯಲ್ಲಿ ಅಣ್ಣ ತಮ್ಮಂದಿರರಿಗೆ ರಕ್ಷೆ ಕಟ್ಟಿ ಮನೆ ಮತ್ತು ಮನೆಯ ಸದಸ್ಯರ ರಕ್ಷಣೆ ಮಾಡುವಂತೆ ಕೊರುತ್ತೇವೆ.

ಆದರೆ ಹೊರಗಡೆ ದೇಶದ ರಕ್ಷಣೆ ಪ್ರತಿಯೊಬ್ಬರ ಮೇಲಿರುವುದರಿಂದ ಮತ್ತು ಎಲ್ಲರೂ ಸಮಾನರು, ಜಾತಿ, ಬೇಧ ಮರೆತು ಜೀವನ ನಡೆಸಬೇಕೆಂಬ ಸಂದೇಶ ಸಾರುವ ಹಿನ್ನೆಲೆಯಲ್ಲಿ ನಾವು ಎಲ್ಲಾ ಕಡೆಗಳಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಸುತ್ತೇವೆ ಎಂದರು.

ಕಾರಾಗೃಹದ ಅಧೀಕ್ಷಕ ಅಮರೇಶ ಪೂಜಾರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ೧೫೮ ಕೈದಿಗಳಿಗೆ ಮತ್ತು ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿ ಒಟ್ಟು ೧೭೫ ಜನರಿಗೆ ರಕ್ಷೆ ಕಟ್ಟಲಾಯಿತು.

ಕಾರ್ಯಕ್ರಮದಲ್ಲಿ ಸೇವಾ ಭಾರತಿಯ ಪ್ರಕಲ್ಪದ ಪ್ರಾಂತ ಸಂಯೋಜಕ ಪ್ರಾಣೇಶ ಜೋಶಿ, ಅಮರೇಶ್ ಪಾಟೀಲ್, ಮಂಜುನಾಥ ಕಟ್ಟಿಮನಿ, ವಿನಯ ಪಾಟಿಲ್ ಮತ್ತಿತರರು ಉಪಸ್ಥಿತರಿದ್ದರು.

ಮಾಹಿತಿಗಾಗಿ:
ನಾಗರಾಜ ಗುತ್ತೇದಾರ
ಮೊ.ನಂ: ೮೧೯೭೯೧೬೧೨೫

ಮಹಾನ್ ಕಿಡ್ಸ್ ಶಾಲೆ ಗಂಗಾವತಿ ಐದು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಅಖಂಡ ಗಂಗಾವತಿ ತಾಲೂಕಿನ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಟನ್ ಸ್ಪರ್ಧೆ ನಡೆಯಿತು.

14ನೇ ವಯೋಮಿತಿಯ ವಿದ್ಯಾರ್ಥಿಗಳಾದ ನಿವೇದ, ರಾಮ ಸೂರ್ಯ, ವೈಭವ್, ಶಿವಕುಮಾರ್, ಖುಶ್ ವಿದ್ಯಾರ್ಥಿಗಳು ವಿಜೇತರಾಗಿ ಮುಂದೆ ನಡೆಯುವ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.

ಮಹಾನ್ ಕಿಡ್ಸ್ ಶಾಲೆ ಗಂಗಾವತಿ ಮೂರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಅಖಂಡ ಗಂಗಾವತಿ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಹಾನ್ ಕಿಡ್ಸ್ ಶಾಲೆಯ ಮೂರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

14ನೇ ವಯೋಮಿತಿಯ ವಿದ್ಯಾರ್ಥಿಗಳಾದ ಶಿವರಾಜ್ 35 ಕೆಜಿ ತೂಕದ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ್ದಾನೆ.

ಹಾಗೂ 17ನೇ ವಯೋಮಿತಿಯಲ್ಲಿ ಮಹೇಶ್ 35 ಕೆಜಿ ತೂಕದ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ್ದಾನೆ.

ಹಾಗೂ ಮೀನಾಕ್ಷಿ 35 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಮುಂದೆ ನಡೆಯುವಂತಹ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಿಗೆ ಮಹಾನ್ ಕಿಡ್ಸ್ ಶಾಲೆಯ ಅಧ್ಯಕ್ಷರಾದ ಶ್ರೀ ನೇತ್ರಾಜ್ ಗುರುವಿನ ಮಠ ಹಾಗೂ ಶಾಲೆಯ ಪ್ರಾಂಶುಪಾಲರಾದ ಸವಿತಾ ಗುರುವಿನ ಮಠ ಮತ್ತು ದೈಹಿಕ ಶಿಕ್ಷಕರಾದ ಮಂಜುನಾಥ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು