ಭಾರತಕ್ಕೆ ಸ್ವಾತಂತ್ರ್ಯ ದೊರೆತು 79 ವರ್ಷಗಳು ಕಳೆದಿವೆ.
ಈ ಸುದೀರ್ಘ ಅವಧಿಯಲ್ಲಿ ಭಾರತ ದೇಶವು ವಿಜ್ಞಾನ ,ತಂತ್ರಜ್ಞಾನ, ಆರೋಗ್ಯ ,ಶಿಕ್ಷಣ, ಬಹ್ಯಾಕಾಶ ಸಂಶೋಧನೆ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಯನ್ನು ಮಾಡಿ ಅಪಾರ ಪ್ರಗತಿಯನ್ನು ಸಾಧಿಸಿದೆ.
ಆದಾಗ್ಯೂ ಭಾರತವನ್ನು ಮತ್ತಷ್ಟು ಜಾಗತಿಕ ಶಕ್ತಿಯನ್ನಾಗಿ ರೂಪಿಸುವ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲೆ ಇದೆ.
ಯುವಜನತೆ ಹೊಸ ಹೊಸ ಆಲೋಚನೆ, ಕ್ರಿಯಾಶೀಲತೆ, ಅನನ್ಯ ಆವಿಷ್ಕಾರಗಳಿಂದ ದೇಶದ ಪ್ರಗತಿಗೆ ಚೈತನ್ಯ ಶಕ್ತಿಯನ್ನು ತುಂಬಬೇಕಾಗಿದೆ.
ವಿಶ್ವದಲ್ಲಿಯೇ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಭಾರತಕ್ಕೆ ಅದೇ ಭಾರವಾಗದೆ ದೇಶದ ಶಕ್ತಿಯಾಗಿ ಮಾರ್ಪಡಬೇಕೆಂದು ಗಂಗಾವತಿಯ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕೊಟ್ಟೂರು ಮಹಾಸ್ವಾಮಿಗಳು ಹೇಳಿದರು.
ಅವರು ಇಂದು ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆದ 79ನೇ ಭಾರತ ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಸಾಧನೆ ಮಾಡಿರುವ ಕಾಶಿ ವಿಶ್ವನಾಥ್ ಸಿರಿಗೇರಿ, ನಾಗರಾಜ್ ಇಂಗಳಗಿ, ಎಂ ಜೆ ಶ್ರೀನಿವಾಸ್, ಮತ್ತು ಹರೀಶ್ ಕುಲಕರ್ಣಿಯವರಿಗೆ ಈ ವರ್ಷದಿಂದ ಸಂಸ್ಥೆ ಪ್ರಾರಂಭಿಸಿದ ಕೊಟ್ಟೂರೇಶ್ವರ ಪ್ರಶಸ್ತಿ ಪ್ರಧಾನಿಸಿತು.
ಸಂಸ್ಥೆಗೆ ನೂತನ ಸದಸ್ಯರಾಗಿ ನೇಮಕಗೊಂಡ ರಾಚಯ್ಯ ಸ್ವಾಮಿ, ಹುಚ್ಚೇಶ್ವರ ಮಠ ಹಾಗೂ ಸಂಸ್ಥೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರದ ವಿ.ಜಿ. ಯಾವಗಲ್ ,ಪ್ರಕಾಶ್ ಗೌಡ ಪಾಟೀಲ್, ಬಾಲಪ್ಪ ರವರನ್ನು ಹಾಗೂ ಮುಂಬಡ್ತಿ ಪಡೆದ ಚಂದ್ರಶೇಖರ, ಯು.ಎಂ. ಬಸವರಾಜ್, ವಿಶ್ವನಾಥ್ ಹಿರೇಮಠರನ್ನು ಸನ್ಮಾನಿಸಲಾಯಿತು.
ಅದೇ ರೀತಿ ಕೊಟ್ಟೂರೇಶ್ವರ ಸಂಸ್ಥೆಯಲ್ಲಿ ಎಲ್ಕೆಜಿಯಿಂದ ಪಿಜಿ ಅವರಿಗೆ ಅಧ್ಯಯನ ಮಾಡಿದ ರಕ್ಷಿತಾ ಹಾಗೂ ಸುಬ್ರಮಣ್ಯರನ್ನು ಮತ್ತು 2024- 25 ನೇ ಸಾಲಿನಲ್ಲಿ ಶಾಲಾ-ಕಾಲೇಜುಗಳಿಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ್ ಪ್ರಸ್ತಾವಿಕವಾಗಿ ಮಾತನಾಡಿ ಸಂಸ್ಥೆ ನಡೆದು ಬಂದ ಹಾದಿಯನ್ನು ವಿವರಿಸಿದರು.
ದೈಹಿಕ ನಿರ್ದೇಶಕರಾದ ಹೊನ್ನಪ್ಪ ಮಾಸ್ತಮ್ಮ ನವರ ನೇತೃತ್ವದಲ್ಲಿ ಸೇವಾದಳ, ಸ್ಕೌಟ್ಸ್ ಎನ್ಎಸ್ಎಸ್, ತಂಡಗಳಿಂದ ಧ್ವಜ ಕವಾಯತು, ನೆರವೇರಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಕೆ ಚನ್ನಬಸಯ್ಯ ಸ್ವಾಮಿ, ಕಾರ್ಯದರ್ಶಿಗಳಾದ ಶರಣೇಗೌಡ ಮಾಲಿಪಾಟೀಲ್ ,ಕೋಶಾಧ್ಯಕ್ಷರಾದ ಸಿಂಗನಾಳ ಸುರೇಶ್, ನಿರ್ದೇಶಕರಾದ ಕಳಕನ ಗೌಡ ಪಾಟೀಲ್ ಲಿಂಗಪ್ಪಕಮತಗಿ ಹಾಗೂ ಎಲ್ಲಾ ಶಾಲಾ ಕಾಲೇಜುಗಳ ಪ್ರಾಚಾರ್ಯರು ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಶಿಕ್ಷಕರಾದ ಮುತ್ತನಗೌಡ ಮತ್ತು ರೇಣುಕಾ ನಿರ್ವಹಿಸಿದರು