ಕಾರಾಗೃಹದಲ್ಲಿ ಸೇವಾ ಭಾರತಿಯಿಂದ ರಕ್ಷಾ ಬಂಧನ ಸಮಾಜದಲ್ಲಿ ಸಾಮರಸ್ಯದ ಜಿವನಕ್ಕೆ ನಾಗರಾಜ್ ಗುತ್ತೇದಾರ ಸಂದೇಶ

ಕಾರಾಗೃಹದಲ್ಲಿ ಸೇವಾ ಭಾರತಿಯಿಂದ ರಕ್ಷಾ ಬಂಧನ ಸಮಾಜದಲ್ಲಿ ಸಾಮರಸ್ಯದ ಜಿವನಕ್ಕೆ ನಾಗರಾಜ್ ಗುತ್ತೇದಾರ ಸಂದೇಶ

ಕೊಪ್ಪಳ: ನಗರದ ಕೇಂದ್ರ ಕಾರಾಗೃಹದಲ್ಲಿ ಸೇವಾ ಭಾರತಿಯ ವಿದ್ಯಾ ವಿಕಾಸ ಪ್ರಕಲ್ಪದ ವತಿಯಿಂದ ರಕ್ಷಾಬಂಧನ ಆಚರಿಸಲಾಯಿತು.

ಸೇವಾಭಾರತಿ ಸಂಘಟನೆಯ ಜಿಲ್ಲಾ ಸಹಸಂಯೋಜಕ ನಾಗರಾಜ ಗುತ್ತೇದಾರ ಮಾತನಾಡಿ ಕಾರ್ಯಕ್ರಮದ ಉದ್ದೇಶ, ತಪ್ಪು ಮಾಡುವುದು ಸಹಜ, ಆದರೆ ತಪ್ಪನ್ನು ತಿದ್ದಿಕೊಂಡು ಉತ್ತಮ ಪ್ರಜೆಯಾಗಿ ಬದುಕು ನಡೆಸಬೇಕು ಎಂದರು.

ಅವರು ಮಂಗಳವಾರ ಕಾರಾಗೃಹದ ಸುಮಾರು ೧೫೦ಕ್ಕೂ ಹೆಚ್ಚು ಕೈದಿಗಳು ಮತ್ತು ಸಿಬ್ಬಂದಿಗಳಿಗೆ ರಕ್ಷೆ ಕಟ್ಟಿ ಆಚರಿಸಿದ ರಕ್ಷಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುರಾತನ ಕಾಲದಿಂದಲೂ ನಮ್ಮ ದೇಶದಲ್ಲಿ ರಕ್ಷಾ ಬಂಧನ ಆಚರಿಸಲಾಗುತ್ತದೆ.

ಮನೆ, ಮನೆಯಲ್ಲಿ ಮನಸ್ಸುಗಳನ್ನು ಜೋಡಿಸುವುದು ಮತ್ತು ಸಹೋದರಿಯರ ರಕ್ಷಣೆ ತಮ್ಮ ಜವಬ್ದಾರಿ ಎಂಬ ಸಂಕಲ್ಪ ಮಾಡುವ ಪುರುಷರು ಇದಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸಿರುವುದು ನಾವು ತಿಳಿದಿದ್ದೇವೆ.

ಪ್ರಸ್ತುತ ಎಲ್ಲರೂ ಪರಸ್ಪರ ರಕ್ಷೆ ಕಟ್ಟಿಕೊಂಡು ಉತ್ತಮ ನಾಗರೀಕರಾಗಿ ಸನ್ನಡತೆಯ ಜೀವನ ನಡೆಸಲು ಸಂಕಲ್ಪ ಮಾಡುವ ನಿಟ್ಟಿನಲ್ಲಿ ಇಂದು ರಕ್ಷಾ ಬಂಧನ ಆಚರಿಸುತ್ತಿದ್ದೇವೆ ಎಂದರು.

ಮುಂದಿನ ದಿನಗಳಲ್ಲಿ ಈ ಸುಧಾರಣಾ ಗ್ರಹದಲ್ಲಿ ಉತ್ತಮ ಸನ್ನಡತೆಯನ್ನು ಅಳವಡಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಸಹಬಾಳ್ವೆಯ ಜೀವನದಲ್ಲಿ ತೊಡಗಿಕೊಳ್ಳುವ ಮೂಲಕ ಸಮಾಜದ ಸಾಮರಸ್ಯ ಕಾಪಾಡುವ ಮೂಲಕ ಉತ್ತಮ ನಾಗರೀಕರಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸೇವಾ ಭಾರತಿ ಜಿಲ್ಲಾ ಸಮಿತಿ ಸದಸ್ಯೆ ಮಹಾಲಕ್ಷ್ಮಿ ಕಂದಾರಿ ಮಾತನಾಡಿ, ನಾವು ಮನೆಯಲ್ಲಿ ಅಣ್ಣ ತಮ್ಮಂದಿರರಿಗೆ ರಕ್ಷೆ ಕಟ್ಟಿ ಮನೆ ಮತ್ತು ಮನೆಯ ಸದಸ್ಯರ ರಕ್ಷಣೆ ಮಾಡುವಂತೆ ಕೊರುತ್ತೇವೆ.

ಆದರೆ ಹೊರಗಡೆ ದೇಶದ ರಕ್ಷಣೆ ಪ್ರತಿಯೊಬ್ಬರ ಮೇಲಿರುವುದರಿಂದ ಮತ್ತು ಎಲ್ಲರೂ ಸಮಾನರು, ಜಾತಿ, ಬೇಧ ಮರೆತು ಜೀವನ ನಡೆಸಬೇಕೆಂಬ ಸಂದೇಶ ಸಾರುವ ಹಿನ್ನೆಲೆಯಲ್ಲಿ ನಾವು ಎಲ್ಲಾ ಕಡೆಗಳಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಸುತ್ತೇವೆ ಎಂದರು.

ಕಾರಾಗೃಹದ ಅಧೀಕ್ಷಕ ಅಮರೇಶ ಪೂಜಾರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ೧೫೮ ಕೈದಿಗಳಿಗೆ ಮತ್ತು ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿ ಒಟ್ಟು ೧೭೫ ಜನರಿಗೆ ರಕ್ಷೆ ಕಟ್ಟಲಾಯಿತು.

ಕಾರ್ಯಕ್ರಮದಲ್ಲಿ ಸೇವಾ ಭಾರತಿಯ ಪ್ರಕಲ್ಪದ ಪ್ರಾಂತ ಸಂಯೋಜಕ ಪ್ರಾಣೇಶ ಜೋಶಿ, ಅಮರೇಶ್ ಪಾಟೀಲ್, ಮಂಜುನಾಥ ಕಟ್ಟಿಮನಿ, ವಿನಯ ಪಾಟಿಲ್ ಮತ್ತಿತರರು ಉಪಸ್ಥಿತರಿದ್ದರು.

ಮಾಹಿತಿಗಾಗಿ:
ನಾಗರಾಜ ಗುತ್ತೇದಾರ
ಮೊ.ನಂ: ೮೧೯೭೯೧೬೧೨೫

Leave a Reply