ಗಂಗಾವತಿ: ೭೯ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಗಂಗಾವತಿ ಸಂಸ್ಥೆ, ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ್ ಮಾಲಿಪಾಟೀಲ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅಪ್ರತಿಮ ಸ್ವತಂತ್ರ ಹೋರಾಟಗಾರರಾದ ಶ್ರೀ ಅಲ್ಲೂರಿ ಸತ್ಯನಾರಾಯಣರಾಜು ಅವರ ಜೀವನ ಕುರಿತ ಎಸ್.ಡಿ.ವಿ ಅಜೀಜ್ ಅವರು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ ಪುಸ್ತಕ ಬಿಡುಗಡೆಯಾಯಿತು.
ಪುಸ್ತಕದ ಬಗ್ಗೆ ವಿವರವಾಗಿ ಖ್ಯಾತ ಕಣ್ಣಿನ ತಜ್ಞರಾದ ಡಾ|| ಹನುಮಂತಪ್ಪ ಹಾಗೂ ಡಾ|| ಶಿವಕುಮಾರ ಮಾಲಿಪಾಟೀಲ್ ಅವರು ಮಾತನಾಡಿದರು.
ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ ಅವರು, ದೇಶಪ್ರೇಮಿಯಾಗಿದ್ದ ಅಲ್ಲೂರಿ ಸತ್ಯನಾರಾಯಣರಾಜು ಅವರ ಪುಸ್ತಕ ಕನ್ನಡದಲ್ಲಿ ಬರಬೇಕು ಆಗ ಅಂತಹ ಹೋರಾಟಗಾರರ ಪರಿಚಯ ಕನ್ನಡಿಗರಿಗೂ ಆಗುತ್ತದೆ ಎಂದರು.
ಆದರ್ಶ ದಂಪತಿಗಳಾದ ದಿ. ಅಲ್ಲೂರಿ ಸತ್ಯನಾರಾಯಣರಾಜು ಹಾಗೂ ದಿ. ಅನ್ನಪೂರ್ಣಮ್ಮ ಅವರ ಪುತ್ರರಾದ ಡಾ. ಸೋಮರಾಜು, ಅವರ ತಂದೆಯವರ ಜೀವನ ಚರಿತ್ರೆಯನ್ನು ಪುಸ್ತಕ ರೂಪದಲ್ಲಿ ತಂದಿದ್ದು ಸಾರ್ಥಕ ಕೆಲಸವೆಂದುಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವೈದ್ಯರಾದ ಡಾ. ಚಂದ್ರಪ್ಪ ವಹಿಸಿದ್ದರು. ನಂತರ ವಸುಧಾ ಪೌಂಢೇಷನ್ ಹೈದರಾಬಾದ್ ಅವರು ದಾನವಾಗಿ ನೀಡಿದ ಬೆಡ್‌ಶೀಟು, ಸೀರೆಗಳನ್ನು ಅನಾಥಾಶ್ರಮಕ್ಕೆ ಹಸ್ತಾಂತರಿಸಲಾಯಿತು ಹಾಗೂ ವಿಕಲಚೇತನ ಶಾಲೆಯ ಮಕ್ಕಳಿಗೆ ಪುಸ್ತಕ, ಬೆಡ್‌ಶೀಟುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ|| ಮಾದವಶೆಟ್ಟಿ, ಡಾ|| ಮಲ್ಲನಗೌಡ, ಡಾ|| ಸುಲೋಚನಾ ಚಿನಿವಾಲರ್, ಡಾ|| ಎ.ಎಸ್.ಎನ್ ರಾಜು, ಡಾ|| ನಾಗರಾಜ, ಸಿದ್ದನಗೌಡ ವಕೀಲರು, ಡಾ|| ಮಧುಸೂದನ್, ಡಾ|| ಪ್ರಶಾಂತ ದೇಸಾಯಿ, ರಾಜಶೇಖರ ಹೇರೂರ್, ಸುಭಾಷ್ ಬಂಬ್, ಚೇತನ ಹಿರೇಮಠ, ಲಯನ್ಸ್ ಕ್ಲಬ್ ಖಜಾಂಚಿ ಶಿವಪ್ಪ ಗಾಳಿ ಇತರರಿದ್ದರು.
ವರದಿ:
ಡಾ|| ಶಿವಕುಮಾರ ಮಾಲಿಪಾಟೀಲ್
ಅಧ್ಯಕ್ಷರು, ಲಯನ್ಸ್ ಕ್ಲಬ್, ಗಂಗಾವತಿ
ಮೊ ನಂ: ೯೪೪೮೩೦೨೭೭೫