ಗಂಗಾವತಿಯ ಕನ್ನಡ ಜಾಗೃತಿ ಭವನದಲ್ಲಿ ಫೆಬ್ರವರಿ-೧೩ ರಿಂದ ೨೪ ರವರೆಗೆ ಸಂಸ್ಕೃತ ಜ್ಞಾನ ಸಂಪಾದನಾ ಶಿಬಿರ

ಗಂಗಾವತಿ: ಶ್ರೀ ಹಾನಗಲ್ಲ ಗುರು ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆ, ಅರಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ ಮತ್ತು ಕನ್ನಡ ಜಾಗೃತಿ ಸಮಿತಿ ಇವರ ಸಹಯೋಗದಲ್ಲಿ ಶ್ರೀ ಗುರು ಕುಮಾರೇಶ್ವರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಫೆಬ್ರವರಿ-13 ಗುರುವಾರದಿಂದ, 24 ಸೋಮವಾರದವರೆಗೆ ಪ್ರತಿದಿನ ಸಂಜೆ 5:30 ರಿಂದ 7:೦೦ ರವರೆಗೆ ಗಂಗಾವತಿ ನಗರದ ಹೊಸಳ್ಳಿ ರಸ್ತೆಯ ಲಿಟಲ್ ಹಾರ್ಟ್ಸ್ ಸ್ಕೂಲ್ ಹತ್ತಿರದ ಕನ್ನಡ ಜಾಗೃತಿ ಭವನದಲ್ಲಿ ಸಂಸ್ಕೃತ ಜ್ಞಾನ ಸಂಪಾದನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅರಳಹಳ್ಳಿ ರಾ.ರಾ ಬೃಹನ್ಮಠದ ಶ್ರೀ ಶರಣಬಸವ ದೇವರು ಪ್ರಕಟಣೆಯಲ್ಲಿ ತಿಳಿಸಿದರು.
ಈ ಶಿಬಿರದಲ್ಲಿ ಬೋಧಕರಾಗಿ ಗದಗ ಬೆಟಗೇರಿಯ ಸಂಸ್ಕೃತ ಶಿಕ್ಷಕರಾದ ಪೂಜ್ಯ ಶ್ರೀ ಶಾಂತಕುಮಾರ ದೇವರು ಆಗಮಿಸಲಿದ್ದು, ಭಾರತೀಯರಾದ ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಹಾಗೂ ನಮ್ಮ ದೇಶದ ಪ್ರಾಚೀನ ಭಾಷೆಯಾದ ಸಂಸ್ಕೃತ ಭಾಷೆಯ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವುದು ಅವಶ್ಯವಿದ್ದು, ಸಂಸ್ಕೃತವು ವಾಕ್‌ಶುದ್ಧಿ, ಜ್ಞಾನದ ಅಭಿವೃದ್ಧಿ, ಸುಸಂಸ್ಕೃತ ನಡೆನುಡಿಯನ್ನು ತಿಳಿಸುವ ಭಾಷೆಯಾಗಿದ್ದು, ಜ್ಞಾನ ಸಾಗರವನ್ನು ಒಳಗೊಂಡ ಸಂಸ್ಕೃತವನ್ನು ಕಲಿಯಲು ಇದೊಂದು ಸುವರ್ಣವಕಾಶವಾಗಿದೆ.
ಈ ಶಿಬಿರದಲ್ಲಿ ಪಾಲ್ಗೊಳ್ಳಲು ಯಾವುದೇ ವಯೋಮಿತಿ ಇರುವುದಿಲ್ಲ. ಸರ್ವ ಸಂಸ್ಕೃತ ಭಾಷಾ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಈ ತರಬೇತಿಯಲ್ಲಿ ಭಾಗವಹಿಸಲು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೮೧೫೦೯೦೮೩೮೫, ೯೬೧೧೭೪೫೩೬೯ ಗೆ ಸಂಪರ್ಕಿಸಬಹುದು.

Leave a Reply