ಸತತ ಅಧ್ಯಯನ ಮೂಲಕ ಚುಟುಕು ಸಾಹಿತ್ಯದ ಶ್ರೀಮಂತಿಕೆ. ಜಿಲ್ಲಾ ಮಟ್ಟದ ೩ನೆಯ ಕವಿಗೋಷ್ಠಿಯಲ್ಲಿ ಕವಿ -ಶಿ.ಕಾ ಬಡಿಗೇರ ಸಲಹೆ

ಕೊಪ್ಪಳ: ಚುಟುಕು ಸಾಹಿತ್ಯಕ್ಕೆ ಅಪಾರ ಮಹತ್ವ ಇದೆ ಉದಯೋನ್ಮುಖ ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚುಟುಕು ಸಾಹಿತ್ಯ ಅಧ್ಯಯನ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಪ್ರತ್ನಿಸಬೇಕೆಂದು ಹಿರಿಯ ಸಾಹಿತಿ ಶಿ.ಕಾ.ಬಡಿಗೇರ ಅಭಿಪ್ರಾಯಪಟ್ಟರು.

ಅವರು ಭಾನುವಾರ ಸಮೀಪದ ಭಾಗ್ಯನಗರದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಉಪನ್ಯಾಸ ಮತ್ತು ಜಿಲ್ಲಾ ಮಟ್ಟದ ಮುಕ್ತ ಚುಟುಕು ಕವಿಗೋಷ್ಠಿ ಚುಟುಕು ವಾಚಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದೆ ಅಖಂಡ ರಾಯಚೂರು ಜಿಲ್ಲೆ ಇದ್ದಾಗ ಕೊಪ್ಪಳ ಜಿಲ್ಲೆಯ ಅನೇಕ ಸಾಹಿತ್ಯ ಆಸಕ್ತರು ಚುಟುಕು ಸಾಹಿತ್ಯ ಪರಿಷತ್ ಚಟುವಟಿಕೆಗಳನ್ನು ನಡೆಸಲು ಅವಕಾಶ ಬೆಳೆಸಿಕೊಂಡು ಬಂದಿದ್ದಾರೆ ಈಗಲೂ ಸಹ ಪರಿಷತ್ತಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಅದರ ಕಾಯ೯ಚಟುವಟಿಕೆಗಳನ್ನು ವಿಸ್ತರಣೆ ಅತ್ಯಂತ ಲವಲವಿಕೆಯಿಂದ ಆಯೋಜನೆ ಮಾಡುತ್ತಿರುವುದು ಸಾಹಿತಿಗಳ ಉತ್ಸಾಹ ತುಂಬುವ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆ ಯುವ ಸಾಹಿತಿಗಳನ್ನು ಸಾಮಾಜಿಕ ಜವಾಬ್ದಾರಿ ವಹಿಸಿಕೊಳ್ಳುವ ನಿಟ್ಟಿನಲ್ಲಿ ಉತ್ತಮ ಸಂದೇಶ ಮೂಡಲಿ ಎಂದು ಆಶಿಸಿದರು.

ವಿಶೇಷ ಉಪನ್ಯಾಸ : ಕೊಪ್ಪಳ ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಬೆಳೆದ ಬಂದ ದಾರಿ ಕುರಿತು ಶಿಕ್ಷಕ, ಸಾಹಿತಿ ಕಲ್ಲಪ್ಪ ಕವಳಕೇರಿ ಮಾತನಾಡಿ ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಮಹನೀಯರಲ್ಲಿ ಸಾಕಷ್ಟು ಜನ ಇದ್ದಾರೆ, ಗ್ರಾಮೀಣ ಭಾಗದಲ್ಲಿಯೂ ಸಹ ಸಾಹಿತ್ಯಾಸಕ್ತರಿಗೆ ತಾವು ಪ್ಯಾಂಟು ಶರ್ಟು, ಮಹಿಳೆಯರಿಗೆ ಸೀರೆ ವಿತರಿಸಿ ಸನ್ಮಾನ ಕಾರ್ಯಕ್ರಮ ಮಾಡಿದ ಉದಾಹರಣೆಗಳಿವೆ, ಸಾಹಿತ್ಯ ಆಸಕ್ತರ ಸಂಖ್ಯೆ ಕೊಪ್ಪಳ ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿದೆ. ಬಹಳಷ್ಟು ಕವಿಗಳು, ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಬಾಳಪ್ಪ, ವೀರಾಪುರ ವಕೀಲರು ಹಾಗೂ ಅಮಿನ ಸಾಹೇಬ ಮುಲ್ಲಾ ಅವರು ಕನ್ನಡ ಭಾಷೆ ಅಭಿವೃದ್ಧಿಯಾಗಬೇಕಾದರೆ ನಾವೆಲ್ಲರೂ ನಮ್ಮ ಮಾತೃಭಾಷೆಯನ್ನು ಪ್ರೀತಿಸಲೇಬೇಕು, ಎಲ್ಲಾ ಭಾಷೆಗಳನ್ನು ಗೌರವಿಸುತ್ತ, ನಮ್ಮ ಕನ್ನಡವನ್ನು ಬೆಳೆಸೋಣ ಎಂದರು.

ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರುದ್ರಪ್ಪ ಭಂಡಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಂಡು
ಸಾಹಿತ್ಯದ ಸವಿಯನ್ನು ಎಲ್ಲೆಡೆಯೂ ಪಸರಿಸುವ ಕಾರ್ಯ ಮಾಡೋಣ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಮಹಾಂತೇಶ ನೆಲಾಗಣಿ ಅವರು ಸಾಹಿತ್ಯ, ಸಾಂಸ್ಕೃತಿಕ, ಕಾರ್ಯಕ್ರಮಗಳು, ಹೆಚ್ಚು ಹೆಚ್ಚು ನಡೆಯುವುದರಿಂದ ಸಾಹಿತ್ಯವೂ ಬೆಳೆಯುತ್ತದೆ ನಾವೂ ಬೆಳೆಯುತ್ತೇವೆ ಎಂದು ಹೇಳಿದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಹದಿನೈದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕವಿ/ ಕವಿಯತ್ರಿಯರಾದ ಪುಷ್ಪಲತಾ ಯೋಳಭಾವಿ, ಎ.ಪಿ.ಅಂಗಡಿ, ವಿದ್ಯಾಶ್ರೀ . ಇತರರು ಚುಟುಕು ವಾಚನ ಮಾಡಿದರು.

ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ಮಹಾಂತೇಶ ನೆಲಾಗಣಿ ಅವರನ್ನು ಕವಿಯತ್ರಿ, ಶಿಕ್ಷಕಿ, ವಿದ್ಯಾಶ್ರೀ ಹಿರೇಮಠ ದಂಪತಿಗಳು ಸನ್ಮಾನಿಸಿದರು.

Leave a Reply