ಗಂಗಾವತಿ: ತಾಲೂಕಿನ ಡಣಾಪುರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀಶೈಲ ಮಾಲಾಧಾರಿಗಳಿಂದ 20ನೇ ವರ್ಷದ ಅನ್ನದಾಸೋಹ ಕಾರ್ಯವು ಜರುಗಿತು.
ತಾಲೂಕಿನ ಡಣಾಪುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಬೆಳಗ್ಗೆಯಿಂದ ನಾನಾ ಬಗೆಯ ವಿಶೇಷ ಪೂಜಾ ಪುನಸ್ಕಾರಗಳು ಭಕ್ತಿ ಹಾಡು ಭಜನೆಗಳಿಂದ ಭಕ್ತಿಪೂರ್ವಕ ಜರುಗಿದವು. ದೇವಸ್ಥಾನದಲ್ಲಿ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು.
ಈ ವೇಳೆ ಮಲ್ಲಯ್ಯ ಮಾಲಾದಾರಿಗಳಾದ ಜೆ ಬೀಮನಗೌಡ, ಪಿ.ಪಿ.ಮಂಜುನಾಥ, ವೀರನಾಗಪ್ಪ, ಬಸವರಾಜ ವೈ, ಪಿಡ್ಡಪ್ಪ, ಮಂಜುನಾಥ ಕುಂಬಾರ, ಲಿಂಗರಾಜ ಹೂಗಾರ, ಮೃತ್ಯುಂಜಯ, ಮೌನೇಶ, ಸಿ ಹೆಚ್ ಮಂಜುನಾಥ, ವೀರನಗೌಡ, ಮಲ್ಲಿಕಾರ್ಜುನ, ರಾಜೇಂದ್ರ , ಮಲ್ಲಿಕಾರ್ಜುನ, ಮಡ್ಢೆರ ಮಂಜುನಾಥ, ಬಿ. ಬೃಂದಾ ಹಾಗೂ ಭಕ್ತಾದಿಗಳು ಭಾಗಿಯಾಗಿದ್ದರು.