ಗಂಗಾವತಿ: ಗಂಗಾವತಿಯ ಪ್ರತಿಷ್ಠಿತ ಪಂಪಾನಗರ ಗೃಹನಿರ್ಮಾಣ ಸಹಕಾರ ಮಂಡಳಿಗೆ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಪ್ರಸನ್ನ ದೇಸಾಯಿ, ಗಂಗಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಜೋಗದ ಕೃಷ್ಣಪ್ಪ ನಾಯಕ ಹಾಗೂ ಕೊಪ್ಪಳ ಜಿಲ್ಲಾ ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಪತ್ರಕರ್ತರಾದ ಎಂ.ಜೆ ಶ್ರೀನಿವಾಸ್ ಅವರುಗಳನ್ನು ಗಂಗಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ ಇಂಗಳಗಿ ಅವರ ನೇತೃತ್ವದಲ್ಲಿ ಜೆಎನ್ಎನ್ ಚಾನೆಲ್ ಕಾರ್ಯಾಲಯದಲ್ಲಿ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸನ್ಮಾನ ಕಾರ್ಯಕ್ರಮದಲ್ಲಿ ಗಂಗಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ದೇವರಾಜ್, ಸಹಕಾರ್ಯದರ್ಶಿ ಜೆ.ವಸಂತ್ ಕುಮಾರ್, ವಾರ್ತಾಲೋಕ ಪತ್ರಿಕೆಯ ಸಂಪಾದಕರಾದ ವೆಂಕಟೇಶರಾವ್ ಕುಲಕರ್ಣಿ, ಕಿಷ್ಕಿಂದ ಟಿವಿಯ ಮಲ್ಲಿಕಾರ್ಜುನ ಗೋಟೂರ, ಜೆಎನ್ಎನ್ ಚಾನೆಲ್ ಗಾದಿಲಿಂಗಪ್ಪ ನಾಯಕ ಹಾಗೂ ಜಿ.ಎಸ್.ಪಿ.ಎನ್ ಚಾನಲ್ ಪಿ.ದಶರಥ ಸೇರಿದಂತೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದು, ನೂತನ ನಿರ್ದೇಶಕರಿಗೆ ಮತ್ತು ಅಧ್ಯಕ್ಷರಿಗೆ ಶುಭಹಾರೈಸಿದರು.
ಗಂಗಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದ್ದು, ಮುಂಬರುವ ದಿನಗಳಲ್ಲಿ ದೊಡ್ಡ ಸ್ಥಾನಗಳನ್ನು ಅಲಂಕರಿಸಲಿ ಎಂದು ಸಂಘದ ಅಧ್ಯಕ್ಷರು ಆಗಿರುವ ರಾಜ್ಯಮಟ್ಟದ ರಂಗಭೂಮಿ ಕಲಾವಿದರಾದ ನಾಗರಾಜ್ ಇಂಗಳಗಿ ಅವರು ಶುಭ ಹಾರೈಸಿದರು.