ಗಂಗಾವತಿ: ನಗರದ ಶ್ರೀ ಕೊಟ್ಟೂರುಬಸವೇಶ್ವರ ದೇವಸ್ಥಾನ ಸಮಿತಿ ನೇತೃತ್ವದಲ್ಲಿ ಫೆಬ್ರವರಿ-೨೬ ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ಕೋರ್ಟ್ ಮುಂಭಾಗದ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥನದಲ್ಲಿ ಇಷ್ಟಲಿಂಗ ಧೀಕ್ಷಾ ಹಾಗೂ ಪ್ರಾತ್ಯಕ್ಷಿತೆ ಸಮಾರಂಭ ನಡೆಯಲಿದೆ ಎಂದು ಬಸವಕೇಂದ್ರದ ಗಂಗಾವತಿ ತಾಲೂಕ ಕಾರ್ಯದರ್ಶಿಯಾದ ಎ.ಕೆ. ಮಹೇಶಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಹೆಬ್ಬಾಳ ಬೃಹನ್ಮಠದ ಪೂಜ್ಯ ಶ್ರೀ ಷ.ಬ್ರ. ನಾಗಭೂಷಣ ಶಿವಾಚಾರ್ಯರು ಹಾಗೂ ಸುಳೇಕಲ್ ಬೃಹನ್ಮಠದ ಪೂಜ್ಯ ಶ್ರೀ ಭುವನೇಶ್ವರಯ್ಯ ತಾತನವರು ವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಹೊಸಪೇಟೆ ಇಷ್ಟಲಿಂಗ ಅಧ್ಯಯನ ಕೇಂದ್ರದ ಸದಸ್ಯರು ಹಾಗೂ ಉಪನ್ಯಾಸಕರಾದ ಬಸವರಾಜ ಟಿ.ಹೆಚ್. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಇಷ್ಟಲಿಂಗದ ವೈಜ್ಞಾನಿಕ ಹಿನ್ನೆಲೆ ಹಾಗೂ ಶಿವಯೋಗ ಪ್ರಾತ್ಯಕ್ಷಿತೆಯ ವಿವರಣೆ ನೀಡಲಾಗುವುದು.
ಇಷ್ಟಲಿಂಗ ಧೀಕ್ಷೆ ಪಡೆಯುವವರು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆಮಾಡಿ ನೋಂದಾಯಿಸಿಕೊಂಡು, ಫೆಬ್ರವರಿ-೨೬ ಬುಧವಾರ ಬೆಳಿಗ್ಗೆ ೭:೩೦ಕ್ಕೆ ಶುಚಿರ್ಭೂತರಾಗಿ ಬಿಳಿವಸ್ತ್ರದೊಂದಿಗೆ ಪಾಲಕರೊಡಗೂಡಿ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ: ೯೯೮೬೨೧೧೯೯೧, ೯೦೩೫೪೭೪೬೭೦, ೯೧೬೪೫೩೮೫೪೦, ೯೪೪೮೬೪೯೫೨೨, ೯೯೦೦೧೯೬೩೬೩ ಗಳನ್ನು ಸಂಪರ್ಕಿಸಲು ಕೋರಲಾಗಿದೆ.