ಮಾರ್ಚ್ 7ರಂದು ಶೃಂಗೇರಿಯ ಹಿರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ್ ಮಹಾಸ್ವಾಮಿಗಳ ಆಗಮನ: ಕೃಷ್ಣ ಪದಕಿ

ಮಾರ್ಚ್ 7ರಂದು ಶೃಂಗೇರಿಯ ಹಿರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ್ ಮಹಾಸ್ವಾಮಿಗಳ ಆಗಮನ: ಕೃಷ್ಣ ಪದಕಿ

ಗಂಗಾವತಿ: ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಶೃಂಗೇರಿಯ ಶ್ರೀ ಶಾರದಾ ಪೀಠ 36ನೆಯ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ 50ನೇ ವರ್ಷದ ಸನ್ಯಾಸತ್ವ ಪ್ರಯುಕ್ತ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯ ಅಡಿಯಲ್ಲಿ ಶ್ರೀಮಠದ ಕಿರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳವರು ಮಾರ್ಚ್-7 ರಂದು ಕೊಪ್ಪಳಕ್ಕೆ ಆಗಮಿಸಲಿದ್ದಾರೆ ಎಂದು ಶ್ರೀ ಶಂಕರ ಸೇವಾ ಸಮಿತಿ ಕೋಟೆ ಕೊಪ್ಪಳ ಅಧ್ಯಕ್ಷರಾದ ಕೃಷ್ಣ ಪದಕಿ. ವೆಂಕಟೇಶ್ ಪದಕಿ. ಶ್ರೀನಿವಾಸ್ ಹಾಗೂ ಡಿವಿ ಜೋಶಿ ಕೊಪ್ಪಳ ಅವರು ಹೇಳಿದರು.

ಅವರು ಗಂಗಾವತಿಯ ಶಂಕರ ಮಠಕ್ಕೆ ಆಗಮಿಸಿ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕೊಪ್ಪಳದ ಪದಕಿ ಟೌನ್ ಶಿಪ್ ಉದ್ದೇಶಿತ ಶ್ರೀ ಶಂಕರ ಮಠದ ನೂತನ ಕಟ್ಟಡದ ಭೂಮಿ ಪೂಜೆ ಕಿರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಮಾರ್ಚ್-8 ರಂದು ಜರುಗಲಿದ್ದು, ಪ್ರಯುಕ್ತ ಮಾರ್ಚ್-7 ಶುಕ್ರವಾರ ಸಂಜೆ 6 ಗಂಟೆಗೆ ಪುರ ಪ್ರವೇಶ, ಪೂರ್ಣ ಕುಂಭ ಸ್ವಾಗತದ ಮೂಲಕ ಶುಭ ಯಾತ್ರೆ ಈಶ್ವರ ಪಾರ್ಕ್ ಹೊಸಪೇಟೆ ರಸ್ತೆಯಿಂದ ಕಿನ್ನಾಳ ರಸ್ತೆಯ ಮೂಲಕ ವಾಸವಿ ಮಂಗಲ ಭವನದವರಿಗೆ ಸಕಲ ವಾದ್ಯ ವೈಭವ ಹಾಗೂ ವಿವಿಧ ಬಜನಾ ತಂಡದ ಸದಸ್ಯರೊಂದಿಗೆ ಶ್ರದ್ಧೆ ಭಕ್ತಿಯಿಂದ ಸ್ವಾಗತಿಸಿಕೊಳ್ಳಲಾಗುವುದು.

ಸಂಜೆ 7:30 ಕ್ಕೆ ಶ್ರೀಗಳಿಗೆ ಧೂಳಿ ಪಾದಪೂಜೆ, ಫಲ ಸಮರ್ಪಣೆ,  ಭಿನ್ನ ವತ್ತಳೆ, ಅರ್ಪಣೆಯ ಜೊತೆಗೆ ಆಶೀರ್ವಚನ ಮಹಾಪ್ರಸಾದ ಜರುಗಲಿದೆ ಎಂದು ತಿಳಿಸಿದ ಅವರು ಮಾರ್ಚ್‌-8 ಶನಿವಾರ ಬೆಳಗ್ಗೆ ಶ್ರೀಮಠದ ಅರ್ಚಕರಿಂದ ಚಂದ್ರಮೌಳೇಶ್ವರ ಪೂಜೆ, ಬೆಳಿಗ್ಗೆ 10 ಗಂಟೆಗೆ ಶ್ರೀ ಶಂಕರ ಮಠದ ನೂತನ ಕಟ್ಟಡದ ಭೂಮಿ ಪೂಜೆ. 11:30 ಕ್ಕೆ ಶ್ರೀಗಳಿಗೆ ಭಕ್ತರಿಂದ ಪಾದುಕಾಪೂಜೆ, ವಸ್ತ್ರ ಸಮರ್ಪಣೆ, ದೀಕ್ಷಾ ವಂದನೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಶ್ರೀಗಳಿಂದ ಪರ ಮಂತ್ರಾಕ್ಷತೆ ಹಾಗೂ ಮಹಾಪ್ರಸಾದದೊಂದಿಗೆ ಸಂಪನ್ನಗೊಳ್ಳುವುದು ಎಂದು ತಿಳಿಸಿದ ಅವರು ಈ ಒಂದು ಧಾರ್ಮಿಕ. ಆಚರಣೆಗೆ ಗಂಗಾವತಿಯ ಶಂಕರ ಮಠದ ಹಾಗೂ ಆಸ್ತಿಕ ಬಂಧುಗಳು ಭಾಗವಿಸುವಂತೆ ಮನವಿ ಮಾಡಿದರು.

ಇದಕ್ಕೆ ಸಂಬಂಧಿಸಿದಂತೆ ಧರ್ಮದರ್ಶಿ ನಾರಾಯಣರಾವ್ ವೈದ್ಯ ಅವರ ಅನುಪಸ್ಥಿತಿಯಲ್ಲಿ ರಾಘವೇಂದ್ರ ಅಳವಂಡಿಕರ್ ಮಾತನಾಡಿ, ಕೊಪ್ಪಳದಲ್ಲಿ ಶಂಕರಮಠ ನಿರ್ಮಾಣಗೊಳ್ಳುತ್ತಿರುವುದು ಅತ್ಯಂತ ಸಂತಸದಾಯಕವಾಗಿದೆ. ತಮ್ಮ ಮೇಲಿನ ಎರಡು ದಿನದ ಎಲ್ಲಾ ಕಾರ್ಯಕ್ರಮಗಳಿಗೆ ಭಾಗವಹಿಸುವುದರ ಮೂಲಕ ತುಂಬು ಹೃದಯದ ಸಹಕಾರವನ್ನು ಕಲ್ಪಿಸುತ್ತೇವೆ ಎಂದು ತಿಳಿಸಿದರು.

Leave a Reply