ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೇ ವಾರ್ಷಿಕೋತ್ಸವದ ಸಂಭ್ರಮ, ಪ್ರಭಾವಳಿ ಸಮರ್ಪಣೆ.

ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೇ ವಾರ್ಷಿಕೋತ್ಸವದ ಸಂಭ್ರಮ, ಪ್ರಭಾವಳಿ ಸಮರ್ಪಣೆ.

ಗಂಗಾವತಿ: ನಗರದ ಆನೆಗುಂದಿ ರಸ್ತೆಯ ಶಿರಡಿ ನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೆಯ ವಾರ್ಷಿಕೋತ್ಸವ ಇದೇ ಮಾರ್ಚ್ 5 ಬುಧವಾರ ರಂದು ಜರುಗಲಿದೆ ಎಂದು ಶ್ರೀ ಶಿರಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಟಿ ರಾಮಕೃಷ್ಣ ಹಾಗೂ ಟ್ರಸ್ಟ್ ನ ಸದಸ್ಯರುಗಳಾದ ಎಸ್ ಸುರೇಶ್, ಯು ಚೆನ್ನಪ್ಪ, ರಾಚೋಟಯ್ಯ ಭಗವತಿ, ಗುರುರಾಜ್, ಪ್ರಹ್ಲಾದ, ರಾಮಚಂದ್ರ ಶೆಟ್ಟಿ, ಎಂ ರಾಮಾಂಜನೇಯ, ಕನಕಮೂರ್ತಿ, ಗಾಳಿ ಶಿವಪ್ಪ, ಡಾ|| ಎ.ಎಸ್.ಎನ್ ರಾಜು  ಹಾಗೂ ಕಿರಣ್ ಕುಮಾರ್ ಹೇಳಿದರು.

ಅವರು ಶನಿವಾರದಂದು ದೇವಸ್ಥಾನದ ವಾರ್ಷಿಕೋತ್ಸವ ಆಚರಣೆಗೆ ಸಂಬಂಧಿಸಿದಂತೆ ಭಕ್ತಾದಿಗಳಿಗೆ ಲೋಕ ಕಲ್ಯಾಣಾರ್ಥಕವಾಗಿ ಭೋಗ ಭಾಗ್ಯ, ಆರೋಗ್ಯ, ಐಶ್ವರ್ಯ ಪ್ರಾಪ್ತಿಗಾಗಿ ಹಾಗೂ ನವಗ್ರಹ ದೋಷ ಪರಿಹಾರಕ್ಕಾಗಿ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನ ಸ್ಥಾಪಿತಗೊಂಡು 25 ವರ್ಷಗಳಾಗಿದ್ದು, ಈ ಹಿನ್ನೆಲೆಯಲ್ಲಿ ಶ್ರೀ ಸಾಯಿಬಾಬಾ ಮಹಾರಾಜರಿಗೆ ಪ್ರಭಾವಳಿಯನ್ನು ಸಮರ್ಪಿಸಲಾಗುತ್ತದೆ ಎಂದು ತಿಳಿಸಿದ ಅವರು, ಅಂದು ಬೆಳಿಗ್ಗೆ ಕಾಕಡ ಆರತಿ. ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ ಸೇರಿದಂತೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು. ಬೆಳಿಗ್ಗೆ 10:30ಕ್ಕೆ ತೀರ್ಥ ಪ್ರಸಾದ ಹಾಗೂ ಮಹಾ ಅನ್ನಸಂತರ್ಪಣೆ ಜರುಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಭಕ್ತಾದಿಗಳು ತಮ್ಮ ಶಕ್ತ್ಯಾನುಸಾರ ಬೆಳ್ಳಿ ಅಥವಾ ಹಣದ ರೂಪದಲ್ಲಿ ಕಾಣಿಕೆಯನ್ನು ಶ್ರೀ ಸಾಯಿಬಾಬಾ ಅವರಿಗೆ ಸಲ್ಲಿಸುವುದರ ಮೂಲಕ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

 

Leave a Reply