ಗಂಗಾವತಿ: ತಾಲೂಕಿನ ವಡ್ಡರಹಟ್ಟಿ ಗ್ರಾಮದ ಹಿರಿಯರಾದ ಮುದುಕಪ್ಪ ಗಡ್ಡಿ ಸಹೋದರರು ಮತ್ತು ಕುಟುಂಬದ ಸದಸ್ಯರು ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಆರಾಧ್ಯ ದೈವ ಶ್ರೀ ಬೆಟ್ಟದ ಲಿಂಗೇಶ್ವರ ದೇವರಿಗೆ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಒಂದು ಕೆಜಿ ಬೆಳ್ಳಿಯ ಪೇಟವನ್ನು ಭಕ್ತಿ ಪೂರ್ವಕವಾಗಿ ಸಮರ್ಪಿಸಿದರು.
ಅವರ ಕುಟುಂಬವು ವಂಶಪಾರಂಪರ್ಯವಾಗಿ ಶ್ರೀ ಬೆಟ್ಟದಲಿಂಗೇಶ್ವರ ದೇವರಿಗೆ ಜಾತ್ರೆಯ ಸಮಯದಲ್ಲಿ ಪಾದಯಾತ್ರೆ ಮಾಡುತ್ತಾ ಬಂದಿದ್ದು, ಅದರಂತೆ ಈ ವರ್ಷದ ಮಾರ್ಚ್-೨೨ ರಂದು ನಡೆಯುವ ಶ್ರೀ ಬೆಟ್ಟದ ಲಿಂಗೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ತೆರಳಿ ಕಾಣಿಕೆ ಸಮರ್ಪಿಸಿದರು.
ಅವರಿಗೆ ಶ್ರೀಮಠದ ಎಂ.ದೊಡ್ಡ ಬಸವರಾಜ ಹಾಗೂ ಎಂ.ಲಿಂಗಪ್ಪನವರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಶ್ರೀ ಬೆಟ್ಟದಲಿಂಗೇಶ್ವರ ದೇವರು ಶ್ರೀಮುರುಕಪ್ಪ ಗಡ್ಡಿ ಕುಟುಂಬಕ್ಕೆ ಸುಖ, ಶಾಂತಿ, ಸಂಪತ್ತು ನೀಡಲಿ, ಆಯುಷ್ಯ, ಆರೋಗ್ಯ ನೀಡಲಿ ಎಂದು ಶ್ರೀಮಠದ ವತಿಯಿಂದ ಶುಭ ಹಾರೈಸಲಾಯಿತು.