ಗಂಗಾವತಿ: ನಗರದ ಹಿರೇಜಂತಕಲ್‌ನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಾರ್ಚ್-೨೦ ಗುರುವಾರದಂದು ಬಸವ ನೀಲಾಂಬಿಕೆ ಮಹಿಳಾ ಸಂಘದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರತ್ನಮ್ಮ ಆರೇಗಾರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಾದ ಡಾ. ಮುಮ್ತಾಜ್ ಬೇಗಂ, ವಿಜಯಲಕ್ಷ್ಮಿ, ಅರ್ಚನಾ ರಾಘವೇಂದ್ರ ಶಿರಿಗೇರಿ, ಲಲಿತಮ್ಮ ತಿಪ್ಪೇರುದ್ರಸ್ವಾಮಿ, ಗೌರಮ್ಮ ಕುಂಬಾರ, ಮಂಜುಳಾ ಹೊಸಪೇಟೆ, ಸಿಂಧು, ಶೋಭಾ ರವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಗೌರಮ್ಮ ಕುಂಬಾರ್, ಉಪಾಧ್ಯಕ್ಷರಾದ ಶೈಲಮ್ಮ, ಕಾರ್ಯದರ್ಶಿಯಾದ ಸೌಭಾಗ್ಯ, ಸಹಕಾರ್ಯದಶಿಯಾದ ಶರಣಮ್ಮ, ಖಜಾಂಚಿಯಾದ ಗಂಗಮ್ಮ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.